Site icon Vistara News

ಈಗಾಗಲೇ 2 ಶೂನ್ಯ ಸುತ್ತಿದ್ದೇನೆ ಎಂದು ಅಂಪೈರ್ ಕಾಲೆಳೆದ ರೋಹಿತ್​; ವಿಡಿಯೊ ವೈರಲ್

India vs Afghanistan, 3rd T20I

ಬೆಂಗಳೂರು: ಬುಧವಾರ ಬೆಂಗಳೂರಿನಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ಅಂತಿಮ ಟಿ20(India vs Afghanistan, 3rd T20I) ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ(Rohit Sharma) ಅವರು ಫೀಲ್ಡ್​ ಅಂಫೈರ್​ ಕಾಲೆಳೆದ ವಿಡಿಯೊ ವೈರಲ್(viral video)​ ಆಗಿದೆ. ಅಂಪೈರ್ ವೀರೇಂದ್ರ ಶರ್ಮಾ (Virender Sharma) ಜತೆ ರೋಹಿತ್ ನಡೆಸಿದ ಸಂಭಾಷಣೆ ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್​ ಆಗಿದೆ.

ರೋಹಿತ್​ ಶರ್ಮ ಅವರು ಅಂಪೈರ್​ ಕಾಲೆಳೆಯಲು ಕೂಡ ಒಂದು ಕಾರಣವಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಇನ್ನಿಂಗ್ಸ್​ನ ಎರಡನೇ ಓವರ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಓವರ್​ನಲ್ಲಿ ರೋಹಿತ್ ಬ್ಯಾಟ್‌ಗೆ ತಗುಲಿದ ಚೆಂಡು ಬೌಂಡರಿ ಗೆರೆ ದಾಟಿತು. ಆದರೆ ಇದನ್ನು ಅಂಪೈರ್​ ಲೆಗ್​ಬೈ ನೀಡಿದರು. ಈ ವೇಳೆ ರೋಹಿತ್​ ಅಂಪೈರ್​ ನಿರ್ಧಾರವನ್ನು ಗಮನಿಸಲಿಲ್ಲ. ಮುಂದಿನ ಓವರ್​ನಲ್ಲಿ ಸ್ಕೋರ್​ಬೋರ್ಡ್ ನೋಡುವಾಗ ರೋಹಿತ್​ ರನ್​ಗಳಿಕೆ ಶೂನ್ಯ ಎಂದು ಕಾಣಿಸಿತು.

ಈ ವೇಳೆ ಎಚ್ಚೆತ್ತುಕೊಂಡ ರೋಹಿತ್​​ ತಕ್ಷಣವೇ ಅಂಪೈರ್ ವೀರೇಂದ್ರ ಶರ್ಮ ಅವರನ್ನು ಕರೆದು ‘ಹೇ ವೀರು! ನೀವು ಮೊದಲ ಚೆಂಡನ್ನು ಲೆಗ್ ಬೈ ನೀಡಿದ್ದೀರಾ? ಇಷ್ಟು ದೊಡ್ಡ ಬ್ಯಾಟ್​ಗೆ ಚೆಂಡು ಸ್ಪಷ್ಟವಾಗಿ ತಾಗಿದ್ದು ಕೂಡ ನೋಡನಿಲ್ಲವೇ?. ನಾನು ಈಗಾಗಲೇ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದೇನೆ’ ಎಂದರು. ರೋಹಿತ್​ ಅವರ ಈ ಮಾತು ಕೇಳಿದ ಅಂಪೈರ್ ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ Team India: ಭಾರತದ ಸೂಪರ್​ ಗೆಲುವಿಗೆ ಪಾಕಿಸ್ತಾನದ ದಾಖಲೆ ಪತನ


ಈ ಪಂದ್ಯದಲ್ಲಿ ಧೃತಿಗೆಡದೆ ಬ್ಯಾಟಿಂಗ್​ ನಡೆಸಿದ ರೋಹಿತ್​ ಶರ್ಮ ಕೇವಲ 69 ಎಸತಗಳಿಂದ ಸೊಗಸಾದ 8 ಸಿಕ್ಸರ್​ ಮತ್ತು 11 ಬೌಂಡರಿ ನೆರವಿನಿಂದ ಅಜೇಯ 121 ರನ್​ ಬಾರಿಸಿ ಶತಕ ಪೂರ್ತಿಗೊಳಿಸಿದರು. ರೋಹಿತ್​ ಈ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇದು ರೋಹಿತ್​ ಅವರ 5ನೇ ಅಂತಾರಾಷ್ಟ್ರೀಯ ಟಿ20 ಶತಕ. 4 ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್​ ಮತ್ತು ಆಸೀಸ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ದಾಖಲೆ


ಈ ಪಂದ್ಯದಲ್ಲಿ ರೋಹಿತ್​ 44ರನ್​ ಗಳಿಸುತ್ತಿದ್ದಂತೆ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿಯ ದಾಖಲೆಯೊಂದನ್ನು ಮುರಿದರು. ನಾಯಕನಾಗಿ ಭಾರತ ಪರ ಅತ್ಯಧಿಕ ರನ್​ಗಳಿಸಿದ ಆಟಗಾರನಾಗಿ ಮೂಡಿಬಂದರು. ಕೊಹ್ಲಿ ನಾಯಕನಾಗಿ 1570 ರನ್​ ಬಾರಿಸಿದ್ದರು. ಆದರೆ, ಈಗ ರೋಹಿತ್​ ಈ ಮೊತ್ತವನ್ನು ಹಿಂದಿಕ್ಕಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

Exit mobile version