Site icon Vistara News

IPL 2024 : ಐಪಿಎಲ್​ ಹರಾಜಿಗೆ ಒಂದು ದಿನ ಮೊದಲು 2008ರ ಪಟ್ಟಿ ವೈರಲ್​! ಧೋನಿಯದ್ದೇ ಮಾತು

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಅನ್ನು ಕಡಿಮೆ ಅವಧಿಯಲ್ಲಿ ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದದರು. ಇದೇ ವೇಳೆ ಅವರು ಚೆನ್ನೈನ ನೆಚ್ಚಿನ ಮಗನಾದರು. ಅದಕ್ಕೂ ಅವರಿಗೆ ಹೆಚ್ಚು ದಿನಗಳ ಬೇಕಾಗಲಿಲ್ಲ. ಹಲವು ವರ್ಷಗಳಿಂದ, ವಿಕೆಟ್ ಕೀಪರ್-ಬ್ಯಾಟರ್​ ತಮ್ಮ ನಾಯಕತ್ವದಲ್ಲಿ ದಾಖಲೆಯ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದು ಇಡೀ ಕ್ರಿಕೆಟ್​ ಕ್ಷೇತ್ರಕ್ಕೆ ಸ್ಫೂರ್ತಿ ಎನಿಸಿಕೊಂಡಿದ್ದಾರೆ.

ಇದೀಗ ಐಪಿಎಲ್ 2024ನೇ ಆವೃತ್ತಿಗೆ ಹರಾಜು ನಡೆಯಲಿದೆ. ಡಿಸೆಂಬರ್​ 19ರಂದು ಹರಾಜು ನಡೆಯಲಿದ್ದು, ಯಾವ ಆಟಗಾರರು ಎಷ್ಟು ಮೊತ್ತ ಪಡೆಯುತ್ತಾರೆ ಎಂಬ ಕೌತುಕ ಸೃಷ್ಟಿಯಾಗಿದೆ. ಇವೆಲ್ಲದರ ನಡುವೆ 2008ರಲ್ಲಿ ಐಪಿಎಲ್ ಹರಾಜಿನ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಈ ವೇಳೆ ಧೋನಿ ಎಷ್ಟು ಸಂಭಾವನೆ ಪಡೆದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಧೋನಿಯನ್ನು 2008 ರಲ್ಲಿ ಸಿಎಸ್​ಕೆ 1.5 ಮಿಲಿಯನ್ ಡಾಲರ್​ಗೆ ಖರೀದಿಸಿತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಇದು ಉದ್ಘಾಟನಾ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು 15 ವರ್ಷಗಳಲ್ಲಿ ಅತ್ಯುತ್ತಮ ತಂಡ ಎಂಬುದು ಸಾಬೀತಾಗಿದೆ.

2008 ರಲ್ಲಿ ಹರಾಜು ನಡೆಸಿದ ರಿಚರ್ಡ್ ಮ್ಯಾಡ್ಲೆ ಅವರು “ಮೊದಲ ಹರಾಜು ಶೀಟ್” ಚಿತ್ರವನ್ನು ಹಂಚಿಕೊಂಡಿದ್ದರು. ಶೇನ್ ವಾರ್ನ್, ಶೋಯೆಬ್ ಅಖ್ತರ್, ಆಡಮ್ ಗಿಲ್ಕ್ರಿಸ್ಟ್, ಮುತ್ತಯ್ಯ ಮುರಳೀಧರನ್ ಮತ್ತು ಮಹೇಲಾ ಜಯವರ್ಧನೆ ಅವರಂತಹ ಇತರ ಸ್ಟಾರ್ ಆಟಗಾರರೊಂದಿಗೆ ಧೋನಿ ಖರೀದಿಯ ವಿವರಗಳನ್ನು ಆ ಹಾಳೆಯ ಮೇಲೆ ಬರೆಯಲಾಗಿತ್ತು.

ಮುಂಬೈ ತಂಡವನ್ನು ಖರೀದಿಸಿದ ಅಮಿತಾಭ್​ ಬಚ್ಚನ್​

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಮುಂಬೈ ತಂಡದ ಮಾಲೀಕರಾಗಿ ಅಧಿಕೃತವಾಗಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL ) ಗೆ ಸೇರ್ಪಡೆಗೊಂಡಿದ್ದಾರೆ. ಹೊಸ ದಿನ ಮತ್ತು ಹೊಸ ಉದ್ಯಮ, ತಂಡದ ಮಾಲೀಕನಾಗಿ ಮುಂಬೈನೊಂದಿಗೆ ಇರುವುದು ನನಗೆ ಗೌರವ ಮತ್ತು ಅಭಿಮಾನ ಎಂದು 81 ವರ್ಷದ ನಟ ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಟೆನಿಸ್ ಬಾಲ್ ಕ್ರಿಕೆಟ್​ ಲೀಗ್ ಆಗಿದ್ದು, ಮೊಟ್ಟ ಮೊದಲ ಬಾರಿಗೆ ಲೀಗ್​ ರೂಪದಲ್ಲಿ ನಡೆಯಲಿದೆ. ಸ್ಟಾರ್ ನಟರ ಮಾಲೀಕತ್ವ ಸೇರಿದಂತೆ ವಿಭಿನ್ನ ಗುರಿಯೊಂದಿಗೆ ಈ ಟೂರ್ನಿ ನಡೆಯಲಿದೆ.

ಇದನ್ನೂ ಓದಿ : IPL 2024 : ಮಾರ್ಚ್​ 22ರಂದು ಐಪಿಎಲ್​ ಶುರು, ಎಲ್ಲಿ ತನಕ ಟೂರ್ನಿ?

ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್, ಭಾರತದ ಮಾಜಿ ಕ್ರಿಕೆಟ್ ಕೋಚ್ ರವಿ ಶಾಸ್ತ್ರಿ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಮಲ್ ಕಾಳೆ ಅವರ ಪರಿಕಲ್ಪನೆಯ ಐಎಸ್​​ಪಿಎಲ್ ಭಾರತದಲ್ಲಿ ನಡೆಯಲಿರುವ ವಿಶೇಷ ಟೆನಿಸ್ ಬಾಲ್ ಟಿ-ಟೆನ್ ಕ್ರಿಕೆಟ್ ಸ್ವರೂಪವಾಗಿದೆ.. ಈ ಆವಿಷ್ಕಾರವು ದೇಶದಲ್ಲಿ ಮೊದಲ ಟಿ10 ಮಾದರಿಯ ಕ್ರಿಕೆಟ್​ ಲೀಗ್ ಎನಿಸಿಕೊಂಡಿದೆ.

ಟೂರ್ನಿಯಲ್ಲಿ ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತಾ ಮತ್ತು ಶ್ರೀನಗರ ನಗರಗಳನ್ನು ಪ್ರತಿನಿಧಿಸುವ ಆರು ತಂಡಗಳು ಭಾಗವಹಿಸಲಿವೆ. ಏಳು ದಿನಗಳ ಕಾಲ ನಡೆಯಲಿರುವ ಐಎಸ್​ಪಿಎಲ್​ ಮಾರ್ಚ್ 2, 2024ರಂದು ಪ್ರಾರಂಭವಾಗಿ ಮಾರ್ಚ್ 9 ರಂದು ಕೊನೆಗೊಳ್ಳಲಿದ್ದು, ಎಲ್ಲಾ 19 ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.

ತಂಡದ ಮಾಲೀಕತ್ವದ ಸಾಲಿನಲ್ಲಿ ಡಿಸೆಂಬರ್ 13 ರಂದು ಶ್ರೀನಗರ ತಂಡವನ್ನು ಖರೀದಿಸಿದ ಅಕ್ಷಯ್ ಕುಮಾರ್ ಮತ್ತು ಡಿಸೆಂಬರ್ 18 ರಂದು ಬೆಂಗಳೂರು ತಂಡದ ಮಾಲೀಕತ್ವವನ್ನು ವಹಿಸಿಕೊಂಡ ಹೃತಿಕ್ ರೋಷನ್ ಅವರೂ ಸೇರಿಕೊಂಡಿದ್ದಾರೆ. ಈಗ, ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ಮುಂಬೈ ತಂಡದ ಮಾಲೀಕತ್ವವನ್ನು ತೆಗೆದುಕೊಳ್ಳುವ ಮೂಲಕ ಲೀಗ್​ಗೆ ಪ್ರವೇಶಿಸಿದ್ದಾರೆ. ಈ ಬೆಳವಣಿಗೆಯು ಹೊಸ ಹತ್ತು ಓವರ್​ಗಳ ಟೂರ್ನಿಯಲ್ಲಿನ ಸ್ಟಾರ್ ಮಾಲೀಕತ್ವದ ಪಟ್ಟಿಗೆಯನ್ನು ಹಿಗ್ಗಿಸಿದೆ. ಟೆನ್ನಿಸ್ ಬಾಲ್ ಕ್ರಿಕೆಟ್ ಅನ್ನು ಭಾರತೀಯ ಕ್ರಿಕೆಟ್​ನಲ್ಲಿ ಅಗ್ರ ಸ್ಥಾನಕ್ಕೇರಿಸುವ ಗುರಿಯನ್ನು ಹೊಂದಿದೆ.

Exit mobile version