Site icon Vistara News

Viral Video: ಕೊಹ್ಲಿಯನ್ನು ತಬ್ಬಿಕೊಂಡ ಅಭಿಮಾನಿಗೆ ಹೂವಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು

Virat Kohli welcomed back with garlands

ಇಂದೋರ್​: ಕಳೆದ ಭಾನುವಾರ ನಡೆದ ಭಾರತ ಮತ್ತು ಅಫಘಾನಿಸ್ತಾನ ನಡುವಣ ಟಿ20 ಪಂದ್ಯದ(India vs Afghanistan, 3rd T20I) ವೇಳೆ ಭದ್ರತೆಯ ನಿಯಮಗಳನ್ನು ಉಲ್ಲಂಘಿಸಿ ಮೈದಾನ ಪ್ರವೇಶಿಸಿ ವಿರಾಟ್‌ ಕೊಹ್ಲಿ(Virat kohli)ಯನ್ನು ಆಲಂಗಿಸಿದ ಯುವಕನಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಹೋಳ್ಕರ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೌಂಡರಿ ಲೈನ್​ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯನ್ನು ಅಭಿಮಾನಿಯೊಬ್ಬ ಮೈದಾನದ ಭದ್ರತೆಯನ್ನು ಕಣ್ತಪ್ಪಿಸಿ ಏಕಾಏಕಿ ಮೈದಾನಕ್ಕೆ ನುಗ್ಗಿ ಅಪ್ಪಿಕೊಂಡಿದ್ದ. ಬಳಿಕ ಆತನನ್ನು ಮೈದಾನದ ಸೆಕ್ಯೂರಿಟಿ ಗಾರ್ಡ್​ಗಳು ಆತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಕೊಹ್ಲಿ ಆತನಿಗೆ ಏನು ಮಾಡದಂತೆ ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದರು. ಆತನ ವಿರುದ್ಧ ಯಾವುದೇ ಕೇಸ್​ ದಾಖಲಿಸದ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ. ಇದೀಗ ತನ್ನ ಸ್ವಗ್ರಾಮಕ್ಕೆ ಮರಳಿದ ಈ ಅಭಿಮಾನಿಗೆ ಹಾರ ಹಾಕಿ ಭವ್ಯ ಸ್ವಾಗತ ಸಿಕ್ಕಿದೆ. ಈ ವಿಡಿಯೊ ವೈರಲ್​ ಆಗಿದೆ.


ದಾಖಲೆಯ ಮೇಲೆ ಕಣ್ಣಿಟ್ಟ ಕೊಹ್ಲಿ


ಅಫಘಾನಿಸ್ತಾನ ವಿರುದ್ಧ ಇಂದು ಬೆಂಗಳೂರಿನಲ್ಲಿ ನಡೆಯುವ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಹಲವು ದಾಖಲೆಗಳನ್ನು ಬರೆಯುವ ಇರಾದೆಯಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ 12 ಎಸೆತಗಳನ್ನು ಕೊಹ್ಲಿ ಎದುರಿಸಿದರೆ, ಟಿ20 ಕ್ರಿಕೆಟ್​ನಲ್ಲಿ 9 ಸಾವಿರ ಎಸೆತಗಳನ್ನು ಎದುರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜತೆಗೆ ಈ ದಾಖಲೆ ಮಾಡಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 8972 ಎಸೆತಗಳನ್ನು ಎದುರಿಸಿದ್ದಾರೆ.

ಇದನ್ನೂ ಓದಿ Team India: ಪಾಕಿಸ್ತಾನದ ದಾಖಲೆ ಮುರಿಯಲು ಸಜ್ಜಾದ ಟೀಮ್​ ಇಂಡಿಯಾ

ಎಸೆತಗಳ ದಾಖಲೆ ಮಾತ್ರವಲ್ಲದೆ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಕೇವಲ 6 ರನ್​ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 11994* ರನ್​ ಗಳಿಸಿದ್ದಾರೆ. ಇದರಲ್ಲಿ 4037* ರನ್​ ಅಂತಾರಾಷ್ಟ್ರೀಯ ಟಿ20ಯಲ್ಲಿ ದಾಖಲಾಗಿದೆ. ಉಳಿದ ರನ್​ ಐಪಿಎಲ್​ನಲ್ಲಿ ಗಳಿಸಿದ್ದಾಗಿದೆ.

ಆಫ್ಘನ್​ ಎದುರು ಕೊಹ್ಲಿ ಅರ್ಧಶತಕ ಬಾರಿಸಿದರೆ ಟಿ20 ಕ್ರಿಕೆಟ್​ನಲ್ಲಿ ಟಿ20 ಕ್ರಿಕೆಟ್​ನಲ್ಲಿ 100 ಬಾರಿ 50+ ಸ್ಕೋರ್​ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ದಾಖಲೆ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ, ಯುನಿವರ್ಸ್​ ಬಾಸ್​ ಖ್ಯಾತಿಯ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. ಗೇಲ್​ 110 ಬಾರಿ ಈ ಸಾಧನೆ ಮಾಡಿದ್ದಾರೆ. ಗೇಲ್​ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಕಾಣಿಸಿಕೊಂಡಿದ್ದಾರೆ. ವಾರ್ನರ್​ 107 ಬಾರಿ 50+ ಸ್ಕೋರ್​ಗಳಿದ್ದಾರೆ.

Exit mobile version