Site icon Vistara News

IPL 2024 : ಕ್ಯಾಚ್ ವೀರರು; ಐಪಿಎಲ್​ನಲ್ಲಿ ಅತಿ ಹೆಚ್ಚು ಕ್ಯಾಚ್​ಗಳನ್ನು ಹಿಡಿದ ಆಟಗಾರರ ವಿವರ ಇಲ್ಲಿದೆ

Suresh Raina

ಬೆಂಗಳೂರು : ಕ್ರಿಕೆಟ್​ನ ಯಾವುದೇ ಸ್ವರೂಪದಲ್ಲಿ ಫೀಲ್ಡರ್ ಗಳು ಪಂದ್ಯದ ಭವಿಷ್ಯ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರು ಹಿಡಿಯುವ ಒಂದು ಕ್ಯಾಚ್​ ಪಂದ್ಯದ ಗತಿಯನ್ನೇ ಬದಲಿಸುತ್ತದೆ. ಅಂತೆಯೇ ಐಪಿಎಲ್​ನಲ್ಲಿಯೂ (IPL 2024) ಹಲವಾರು ಪಂದ್ಯಗಳ ಭವಿಷ್ಯವನ್ನು ಒಂದು ಕ್ಯಾಚ್​ ನಿರ್ಧರಿಸಿದೆ. ಇವೆಲ್ಲದರ ನಡುವೆ ಐಪಿಎಲ್​ನಲ್ಲಿ ಕ್ಯಾಚ್ ಹಿಡಿಯುವುದರಲ್ಲಿಯೇ ನಿಸ್ಸೀಮರಾಗಿದ್ದ ಹಲವಾರು ಆಟಗಾರರು ಇದ್ದಾರೆ. ಅವರೆಲ್ಲರೂ ಕ್ಯಾಚ್ ವಿಚಾರದಲ್ಲಿ ದಾಖಲೆ ಮಾಡಿದ್ದಾರೆ. ಈ ರೀತಿಯಾಗಿ ಇದುವರೆಗೆ ನಡೆದಿರುವ 16 ಆವೃತ್ತಿಗಳಲ್ಲಿ ಅತ್ಯಂತ ಹೆಚ್ಚು ಕ್ಯಾಚ್ ಹಿಡಿದ ಐದು ಆಟಗಾರರ ವಿವರ ಇಲ್ಲಿದೆ.

ಸುರೇಶ್ ರೈನಾ – 109 ಕ್ಯಾಚ್​

ಸುರೇಶ್ ರೈನಾ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಫೀಲ್ಡರ್​ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಐಪಿಎಲ್​ನಲ್ಲಿ ಅವರು ಈಗ ಆಡುತ್ತಿಲ್ಲ. ಆದರೆ 109 ಕ್ಯಾಚ್​ಗಳನ್ನು ಹಿಡಿದಿರುವ ಅವರು ಲೀಗ್​ನಲ್ಲಿ 100ಕ್ಕೂ ಹೆಚ್ಚು ಕ್ಯಾಚ್​ ಪಡೆದ ಆಟಗಾರರ ಪಟ್ಟಿಯಲ್ಲಿದ್ದರೆ. ರೈನಾ ತಮ್ಮ ಹೆಚ್ಚಿನ ಐಪಿಎಲ್ ಪಂದ್ಯಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. ಎರಡು ವರ್ಷಗಳ ಸಿಎಸ್​ಕೆ ನಿಷೇಧಕ್ಕೆ ಒಳಗಾದಾಗ ಗುಜರಾತ್ ಲಯನ್ಸ್ ತಂಡವನ್ನು ಮುನ್ನಡೆಸಿದ್ದರು.

ವಿರಾಟ್ ಕೊಹ್ಲಿ – 106 ಕ್ಯಾಚ್​ಗಳು


ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ 2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಅವರು 106 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಅದಕ್ಕಾಗಿ ಅವರು 237 ಇನಿಂಗ್ಸ್​ಗಳನ್ನು ಬಳಸಿಕೊಂಡಿದ್ದಾರೆ.

ಇದನ್ನೂ ಓದಿ : IPL 2024 : ಐಪಿಎಲ್​ನಲ್ಲಿ ಅತಿ ಹಚ್ಚು ಕ್ಯಾಚ್​ಗಳನ್ನು ಹಿಡಿದ ಆಟಗಾರರ ವಿವರ ಇಲ್ಲಿದೆ 

ಕೀರನ್ ಪೊಲಾರ್ಡ್ – 103 ಕ್ಯಾಚ್​ಗಳು

ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ ಬೌಂಡರಿ ಗೆರೆಗಳ ಬಳಿ ತಮ್ಮ ಅದ್ಭುತ ಕ್ಯಾಚ್​ಗಳ ಮೂಲಕ ಗಮನ ಸೆಳೆದವರು. ಅವರ ಎತ್ತರವು ಕ್ಯಾಚ್​ಗಳನ್ನು ಪಡೆಯಲು ಅವರಿಗೆ ನೆರವಾಗಿದೆ. ಈ ಕಾರಣಕ್ಕಾಗಿಯೇ ಅವರು ಹೆಚ್ಚಾಗಿ ಲಾಂಗ್-ಆನ್ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಅವರು ಇಲ್ಲಿಯವರೆಗೆ ಐಪಿಎಲ್​ನ ಲೀಗ್​ನ 189 ಇನಿಂಗ್ಸ್​ಗಳಲ್ಲಿ 0.545 ರ ಅನುಪಾತದಲ್ಲಿ 103 ಕ್ಯಾಚ್​ಗಳನ್ನು ಪಡೆದಿದ್ದಾರೆ.

ರೋಹಿತ್ ಶರ್ಮಾ – 98 ಕ್ಯಾಚ್​ಗಳು

ಐಪಿಎಲ್​​ನಲ್ಲಿ ಮುಂಬಯಿ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಹೆಚ್ಚಾಗಿ ಸರ್ಕಲ್​ ಒಳಗೆ ಫೀಲ್ಡಿಂಗ್ ಮಾಡುತ್ತಾರೆ 241 ಪಂದ್ಯಗಳನ್ನಾಡಿರುವ ಅವರು 98 ಕ್ಯಾಚ್ ಪಡೆದಿದ್ದಾರೆ. ನಾಯಕನಾಗಿ ನಗದು-ಶ್ರೀಮಂತ ಲೀಗ್​ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಅವರು ಹೊಂದಿದ್ದಾರೆ. ಪ್ರತಿ ಇನ್ನಿಂಗ್ಸ್​​ಗೆ ಅವರ ಕ್ಯಾಚ್ ಅನುಪಾತವು 0.406 ಆಗಿದೆ.

ರವೀಂದ್ರ ಜಡೇಜಾ 97 ಕ್ಯಾಚ್​ಗಳು

ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್​ಗಳಲ್ಲಿ ಒಬ್ಬರಾದ ಸಿಎಸ್​ಕೆ ರವೀಂದ್ರ ಜಡೇಜಾ (226 ಐಪಿಎಲ್ ಪಂದ್ಯಗಳಲ್ಲಿ 97 ಕ್ಯಾಚ್ಗಳು) ಎಲೈಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಕ್ಯಾಚ್ ಹಿಡಿದವರ ವಿವರ ಇಲ್ಲಿದೆ

Exit mobile version