Site icon Vistara News

IPL 2023 : ಈ ಸಲ ಕಪ್ ನಹಿ ಎಂದಿದ್ದ ಪ್ಲೆಸಿಸ್​​, ಹಳೆ ವಿಡಿಯೊ ವೈರಲ್​!

faf du plessis

ಬೆಂಗಳೂರು: ಐಪಿಎಲ್ 2023 ಆವೃತ್ತಿಯಿಂದ ಆರ್​ಸಿಬಿ ತಂಡ ನಿರ್ಗಮಿಸಿದ್ದು ಆ ತಂಡದ ಅಭಿಮಾನಿಗಳ ಪಾಲಿಗೆ ಅತ್ಯಂತ ಬೇಸರದ ವಿಷಯ ಎನಿಸಿಕೊಂಡಿದೆ. ಆರ್​ಸಿಬಿ ತಂಡದ ನಿರ್ಗಮನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ನಾನಾ ರೀತಿಯಲ್ಲಿ ಚರ್ಚೆ ಆಗುತ್ತದೆ. ಹಲವಾರು ಮೀಮ್​​ಗಳು ಹಾಗೂ ವಿಡಿಯೊಗಳೂ ಹರಿದಾಡುತ್ತಿವೆ. ಇವೆಲ್ಲದರ ನಡುವೆ ಆರ್​​ಸಿಬಿಯ ನಾಯಕ ಫಾಫ್​ ಡು ಪ್ಲೆಸಿಸ್​ ಪಂದ್ಯದ ಪೂರ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಬಾಯ್ತಪ್ಪಿನಿಂದ ಈ ಸಲ ಕಪ್​ ನಹಿ ಎಂದು ಹೇಳಿರುವ ವಿಡಿಯೊ ವೈರಲ್​ ಆಗಿದೆ.

ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್ ಟೂರ್ನಿ ಆರಂಭಕ್ಕೆ ಮೊದಲೇ ಈ ಬಾರಿ ಕಪ್​ ಸಿಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ಅಭಿಮಾನಿಗಳು ಸೋಶಿಯಲ್​ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.

ಏನಿದು ಸಂದರ್ಭ

ಮುಂಬೈ ಇಂಡಿಯನ್ಸ್ ವಿರುದ್ಧದ ಋತುವಿನ ಆರಂಭಿಕ ಪಂದ್ಯಕ್ಕೆ ಸ್ವಲ್ಪ ಮೊದಲು ಡು ಪ್ಲೆಸಿಸ್ ಮತ್ತು ಆರ್​​ಸಿಬಿ ಮಾಜಿ ನಾಯಕ ಕೊಹ್ಲಿ ಪತ್ರಿಕಾಗೋಷ್ಠಿಯನ್ನು ಎದುರಿಸಿದ್ದರು. ಈ ವೇಳೆ ದಕ್ಷಿಣ ಆಫ್ರಿಕಾದ ಕ್ರಿಕೆಟಿಗನ ಬಳಿ ತಂಡದ ಗುರಿಯ ಬಗ್ಗೆ ಕೇಳಿದ್ದಾರೆ. ದಕ್ಕೆ ಪ್ರತಿಕ್ರಿಯೆಯಾಗಿ, ಡು ಪ್ಲೆಸಿಸ್ ಆರ್​​ಸಿಬಿ ಅಭಿಮಾನಿಗಳ ಘೋಷಣೆ “ಈ ಸಲಾ ಕಪ್ ನಾಮ್ಡೆ” ಅನ್ನು ಹೇಳಲು ಪ್ರಯತ್ನಿಸಿದರು. ಅದನ್ನು ಸರಿಯಾಗಿ ಹೇಳಲು ಬರದೇ ಅವರು ನಮ್ದೆ ಬದಲಿಗೆ ನಹಿ ಎಂದರು. ಇದು ಕೊಹ್ಲಿ ಮತ್ತು ಹಾಜರಿದ್ದ ಎಲ್ಲರಿಗೂ ನಗೆಯನ್ನು ಉಕ್ಕಿಸಿತು. ಇದೀಗ ಅದೇ ಮಾತು ನಿಜವಾಯಿತು.

ಭಾನುವಾರ ಆರ್​ಸಿಬಿ ತಂಡ ಸೋತ ಬಳಿಕ ಅಭಿಮಾನಿಗಳು ಈ ವಿಡಿಯೊವನ್ನು ವೈರಲ್ ಮಾಡಲು ಮರೆಯಲಿಲ್ಲ. ವಿನೋದದ ಅಭಿಮಾನಿಯೊಬ್ಬರು, ಓಹ್, ನಾವು ಆಗಲೇ ಸುಳಿವು ತೆಗೆದುಕೊಳ್ಳಬೇಕಾಗಿತ್ತು ಎಂದು ಬರೆದುಕೊಂಡಿದ್ದರು. ಮತ್ತೊಬ್ಬರು ಅಭಿನಂದನೆಗಳು ಆರ್​ಸಿಬಿ, ಮಿಷನ್ ಪೂರ್ಣಗೊಂಡಿದೆ, ಎಂದು ವ್ಯಂಗ್ಯವಾಡಿದ್ದಾರೆ.

Exit mobile version