Site icon Vistara News

IND vs AUS Final: ಇಂಡೋ-ಆಸೀಸ್​ ಫೈನಲ್​ ಪಂದ್ಯಕ್ಕೆ ಪ್ರಧಾನಿ ಮೋದಿ ಹಾಜರ್​

icc world cup 2023 final

ಅಹಮದಾಬಾದ್​: ವಿಶ್ವಕಪ್‌ ಪಂದ್ಯಾವಳಿಯ ಫೈನಲ್(icc world cup 2023 final)​ ಕದನ ಭಾನುವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೆ ಸಾಕ್ಷಿಯಾಗಲಿರುವ ತಂಡಗಳೆಂದರೆ ಆತಿಥೇಯ ಭಾರತ ಮತ್ತು ಸರ್ವಾಧಿಕ 5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ(IND vs AUS Final). ಇದು ಇತ್ತಂಡಗಳು ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಆಗುತ್ತಿರುವ ಮುಖಾಮುಖಿಯಾಗಿದೆ. ಹೀಗಾಗಿ ಪಂದ್ಯದ ಮೇಲೆ ಹಲವು ನಿರೀಕ್ಷೆ ಮತ್ತು ಕುತೂಹಲ ಸಹಜ. ಈ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra Modi), ಗೃಹ ಸಚಿವ ಅಮಿತ್​ ಶಾ(amit shah) ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್(Richard Marles) ಸಾಕ್ಷಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ರಿಚರ್ಡ್ ಮಾರ್ಲ್ಸ್ ಮತ್ತು ಅನೇಕ ರಾಜಕೀಯ ಗಣ್ಯರು ಈ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ಅಹಮದಾಬಾದ್‌ನ ಪೊಲೀಸ್ ಕಮಿಷನರ್ ಜ್ಞಾನೇಂದ್ರ ಸಿಂಗ್ ಮಲಿಕ್ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸ್ಟೇಡಿಯಂನ ಸುತ್ತಮುತ್ತ ಈಗಾಗಲೇ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ IND vs AUS: ಗಂಗೂಲಿ ಮಾಡಿದ ಎಡವಟ್ಟನ್ನು ರೋಹಿತ್​ ಶರ್ಮಾ ಮಾಡದಿರಲಿ…

ಅದ್ಧೂರಿ ಸಮಾರೋಪ ಸಮಾರಂಭ

ಫೈನಲ್​ ಪಂದ್ಯದ ಸಮಾರೋಪ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದು ಸಮಾರೋಪ(World Cup 2023 closing ceremony) ಕಾರ್ಯಕ್ರಮದ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಭಾನುವಾರ ನಡೆಯುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಫೈನಲ್(India vs Australia Final)​ ಪಂದ್ಯದ ವೇಳೆ ಹಲವು ಮನರಂಜನಾ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಪ್ರಕಟಿಸಿದೆ. ಜತೆಗೆ ಈ ಕಾರ್ಯಕ್ರಮದ ಸಮಯವನ್ನೂ ನಿಗದಿಪಡಿಸಿದೆ.

ಇದನ್ನೂ ಓದಿ ICC World Cup 2023 : 12 ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸುವುದೇ ಭಾರತ?

ಟಾಸ್ ಬಳಿಕ ಏರ್​ ಶೋ

ಪಂದ್ಯದ ಟಾಸ್​ ಆದ 5 ನಿಮಿಷದಲ್ಲಿ ಅಂದರೆ 1.35ರಿಂದ 1.50ರವರೆಗೆ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನ ಬಾನಂಗಳದಲ್ಲಿ ಲೋಹದ ಹಕ್ಕಿಗಳು ತಮ್ಮ ಚಕಮ್​ ತೋರಲಿದೆ. ಈಗಾಗಲೇ ಇದ್ದಕ್ಕೆ ಬೇಕಾದ ಪೂರ್ವ ಸಿದ್ಧತಾ ತಯಾರಿಯನ್ನು ಸೂರ್ಯಕಿರಣ್ ತಂಡ ನಡೆಸಿದೆ. ಕಳೆದ 2 ದಿನಗಳಿಂದ ಇಲ್ಲಿ ಪ್ರಾಯೋಗಿಕ ಹಾರಾಟ ನಡೆಸಿ ಸರ್ವ ಸನ್ನದ್ಧವಾಗಿ ನಿಂತಿದೆ.

ಮೊದಲ ಡ್ರಿಂಕ್ಸ್ ಬ್ರೇಕ್ ವೇಳೆ ಸಂಗೀತ ರಸಮಂಜರಿ

ಪಂದ್ಯದ ಮೊದಲು ಇನ್ನಿಂಗ್ಸ್​ನ ಡ್ರಿಂಕ್ಸ್ ಬ್ರೇಕ್ ವೇಳೆ ಆದಿತ್ಯ ಗಧ್ವಿ ಅವರಿಂದ ಗಾಯನ ಪ್ರದರ್ಶನ ನಡೆಯಲಿದೆ. ಇದಾದ ಬಳಿಕ ಅಮದರೆ ಮೊದಲು ಇನ್ನಿಂಗ್ ಮುಗಿದ ಬಳಿಕ ಸಿಗುವ ಸಮಯದಲ್ಲಿ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಅಕಾಸ ಸಿಂಗ್ ಮತ್ತು ತುಷಾರ್ ಜೋಶಿ ಇವರಿಂದ ಸಂಗೀತ ರಸಮಂಜರಿ ಇರಲಿದೆ.

2ನೇ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಶೋ

ಈ ಬಾರಿಯ ಎಲ್ಲ ಲೀಗ್​ ಪಂದ್ಯದ ವೇಳೆಯೂ ಬಿಸಿಸಿಐ ಸ್ಟೇಡಿಯಂಗಳಲ್ಲಿ ವಿನೂತನ ಶೈಲಿಯ ಲಸರ್​ ಶೋಗಳ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಫೈನಲ್​ ಪಂದ್ಯದಲ್ಲೂ ವಿಶಿಷ್ಠ ಶೈಲಿಯ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ. ಇದು ಎರಡನೇ ಇನ್ನಿಂಗ್ಸ್​ನ ಡ್ರಿಂಕ್ಸ್ ಬ್ರೇಕ್ ವೇಳೆ ಪ್ರದರ್ಶನಗೊಳ್ಳಲಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

Exit mobile version