Site icon Vistara News

Rahul Gandhi : ಭಾರತ ವಿಶ್ವ ಕಪ್​ ಸೋಲಲು ಮೋದಿಯ ಕಾಲ್ಗುಣವೇ ಕಾರಣ ಎಂದ ರಾಹುಲ್​

Rahul Gandhi

ನವದೆಹಲಿ: 2023 ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್​ಗಳ ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನ ವ್ಯಕ್ತಿ ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದಾರೆ. ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತವು ಪಂದ್ಯವನ್ನು ಸೋಲುವಂತೆ ಮಾಡಿದ್ದು “ಪನೌತಿ” (ಕೆಟ್ಟ ಶಕುನ) ಎಂದು ರಾಹುಲ್​ ಹೇಳಿದ್ದಾರೆ.

ಪನೌತಿ… ಪನೌತಿ… ಪನೌತಿ… (ಅಪ ಶಕುನ, ಅಪಶಕುನ, ಅಪಶಕುನ). ನಮ್ಮ ತಂಡದ ಆಟಗಾರರು ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದ್ದರು ಆದರೆ ಅಪಶಕಮು ಅವರನ್ನು ಸೋಲುವಂತೆ ಮಾಡಿದರು … ಈ ವಿಷಯ ದೇಶದ ಜನರಿಗೆ ತಿಳಿದಿದೆ” ಎಂದು ರಾಹುಲ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡಿದೆ.

“ಮೋದಿ ಟಿವಿಯಲ್ಲಿ ಬಂದು ‘ಹಿಂದೂ-ಮುಸ್ಲಿಂ ಒಂದೇ ‘ ಎಂದು ಹೇಳುತ್ತಾರೆ. ಕೆಲವೊಮ್ಮೆ ಕ್ರಿಕೆಟ್ ಪಂದ್ಯಕ್ಕೆ ಹೋಗುತ್ತಾರೆ. ಪಂದ್ಯ ಸೋತರೇ ಬೇರೆಯೇ ಮಾತು. ಒಟ್ಟಿನಲ್ಲಿ ಅವರು ಅಪಶಕುನ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಮೋದಿ ಮತ್ತು ಅಮಿತ್ ಶಾ ಕ್ರೀಡಾಂಗಣಕ್ಕೆ ಹೋಗಿದ್ದರು. ಆದಾಗ್ಯೂ, ಭಾರತದ ಸೋಲಿನ ನಂತರ, ಮೋದಿ ತಮ್ಮ ಡ್ರೆಸ್ಸಿಂಗ್ ಕೋಣೆಯಲ್ಲಿ ತಂಡದ ಸದಸ್ಯರನ್ನು ಸಂತೈಸುತ್ತಿರುವುದನ್ನು ಕಾಣಬಹುದು. ಕ್ರಿಕೆಟಿಗರೊಂದಿಗಿನ ಅವರ ಸಂವಾದದ ವೀಡಿಯೊಗಳು ವೈರಲ್ ಆಗಿವೆ.

ಏತನ್ಮಧ್ಯೆ, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಸಂತೈಸಿದ್ದಕ್ಕಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಮಾಸ್ಟರ್ ಆಫ್ ಡ್ರಾಮಾ ಇನ್ ಇಂಡಿಯಾ’ ಎಂದು ಟೀಕಿಸಿದ್ದಾರೆ. , ಕೃತಕ ಸಾಂತ್ವನದ ವೀಡಿಯೊ. ನಿನ್ನೆ ಬಿಡುಗಡೆಯಾದ ಛಾಯಾಚಿತ್ರಗಳು ಹಿಂದಿನ ಪ್ರಾಮಾಣಿಕತೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ. ಮರ್ಯಾದೆ ಗಳಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಭಾರತದ ಆಟಗಾರರು ಈ ಹತಾಶ ವರ್ತನೆಗಳಿಂದ ಮೂರ್ಖರಾಗುವುದಿಲ್ಲ ಎಂದು ಅವರು ಬರೆದಿದ್ದಾರೆ.

ಮೋದಿಯ ವಿಡಿಯೊದಲ್ಲಿ ಏನಿದೆ?

ವಿಡಿಯೋದಲ್ಲಿ ಮೋದಿ ವೇಗಿ ಮೊಹಮ್ಮದ್ ಶಮಿ ಅವರನ್ನು ತಬ್ಬಿಕೊಳ್ಳುವುದನ್ನು ಕಾಣಬಹದು ಅಲ್ಲದೆ ಮೋದಿ . “ನೀವು 10 ಪಂದ್ಯಗಳನ್ನು ಗೆದ್ದ ನಂತರ ಇಲ್ಲಿಗೆ ಬಂದಿದ್ದೀರಿ. ಇಂಥ ಸಂಗತಿಗಳು ಸಂಭವಿಸುತ್ತವೆ” ಎಂದು ಅವರನ್ನು ಸಂತೈಸಿದ್ದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಕೈಗಳನ್ನು ಮೋದಿ ಹಿಡಿದು ಸಮಾಧಾನ ಮಾಡಿದ್ದರು.

ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೂ ಮೋದಿ ಸಂವಾದ ನಡೆಸಿದ್ದರು. ಅವರು ದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಲು ತಂಡವನ್ನು ಆಹ್ವಾನಿಸಿದ್ದಾರೆ. ವಿಶ್ವಕಪ್ ಫೈನಲ್​​ನಲ್ಲಿ ಮಾತ್ರ ಭಾರತ ಸೋತಿತ್ತು. ಇದು ಗುಂಪು ಹಂತದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆದರೆ ಫೈನಲ್​ನಲ್ಲಿ ಸೋತಿತು.

ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ…

Exit mobile version