Site icon Vistara News

ICC World Cup 2023 : ವಿರಾಟ್, ರೋಹಿತ್​ ಕೈಹಿಡಿದು ಸಂತೈಸಿದ ಪ್ರಧಾನಿ ಮೋದಿ

Modi 1

ಅಹಮದಾಬಾದ್​: 2023 ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ನೀಡಿದರು. ಬಳಿಕ ಆಟಗಾರರನ್ನು ಸಂತೈಸಿದರು. ಈ ವೇಳೆ ಅವರು ನಾಯಕ ರೋಹಿತ್ ಶರ್ಮ ಹಾಗೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿಯ ಕೈ ಹಿಡಿದು ಸಮಾಧಾನ ಹೇಳಿದರು.

ಮೆಗಾ ಮುಖಾಮುಖಿಯಲ್ಲಿ ಭಾರತೀಯ ತಂಡವನ್ನು ಬೆಂಬಲಿಸಲು ಅಹಮದಾಬಾದ್​ನಲ್ಲಿ ಅವರ ಹೆಸರಿನ ಕ್ರೀಡಾಂಗಣದಲ್ಲಿ ಪಿಎಂ ಮೋದಿ ಹಾಜರಿದ್ದರು. ಆದರೆ ಆಸ್ಟ್ರೇಲಿಯಾವು ಎಲ್ಲಾ ಮೂರು ವಿಭಾಗಗಳಲ್ಲಿ ಆತಿಥೇಯರನ್ನು ಸೋಲಿಸಿ 6 ವಿಕೆಟ್​ಗಳ ಗೆಲುವು ದಾಖಲಿಸಿತು. ಪಂದ್ಯ ಸೋತ ಬಳಿಕ ಮೊಹಮ್ಮದ್ ಸಿರಾಜ್ ಪಿಚ್​ನಲ್ಲಿಯೇ ಕಣ್ಣೀರು ಸುರಿಸಿದರು. ಅದೇ ರೀತಿ ವಿದ್ರಾವಕ ಸೋಲಿನ ನಂತರ ಭಾರತೀಯ ಆಟಗಾರರು ನಿರಾಶೆಗೊಂಡರು.

ಇದನ್ನೂ ಓದಿ : IND vs AUS : ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಡ್ರೆಸ್ಸಿಂಗ್ ರೂಮ್​ನಲ್ಲಿ ಭಾರತೀಯ ಆಟಗಾರರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕೈಗಳನ್ನು ಹಿಡಿದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕ್ರೀಡೆ ಬಗ್ಗೆ ಅಪಾರ ಪ್ರೀತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಕ್ರೀಡಾ ಕ್ಷೇತ್ರದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರ ಸೋಲು, ಗೆಲುವು, ಹತಾಶೆ ಮತ್ತು ಸಂತೋಷದಲ್ಲಿ ಜತೆಗಿರುತ್ತಾರೆ. ಅಂತೆಯೇ ಭಾರತ ತಂಡ ಭಾನುವಾರ (ನವೆಂಬರ್​ 19ರಂದು) ವಿಶ್ವ ಕಪ್​ ಫೈನಲ್​​ನಲ್ಲಿ (ICC World Cup 2023) ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತು ಮೂರನೇ ವಿಶ್ವ ಕಪ್​​ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತು. ಈ ವೇಳೆ ಭಾರತ ತಂಡದ ಆಟಗಾರರು ದುಃಖದಲ್ಲಿದ್ದರು. ತಕ್ಷಣವೇ ಪ್ರಧಾನಿ ಮೋದಿ ಅವರು ಡ್ರೆಸಿಂಗ್ ರೂಮ್​ಗೆ ತೆರಳಿ ಅವರನ್ನು ಸಂತೈಸಿದ್ದಾರೆ. ಇದರ ವಿಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ರ ಫೈನಲ್​ನಲ್ಲಿ ಭಾರತ ತಂಡವನ್ನು ಸೋಲಿಸಿ ದಾಖಲೆಯ ಆರನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಫೈನಲ್​ನಲ್ಲಿ ಸೋತ ನಂತರ ಭಾರತೀಯ ಆಟಗಾರರೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸಿ ಸಮಾಧಾನ ಹೇಳಿದರು. ಮುಂದಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಂತೆ ಅವರು ಪ್ರೇರಣೆ ಕೊಟ್ಟರು.

ಐಸಿಸಿ ಟ್ರೋಫಿಯನ್ನು ಗೆಲ್ಲುವ ಭಾರತ ತಂಡ ಮತ್ತೊಂದು ಸುವರ್ಣಾವಕಾಶವನ್ನು ಕಳೆದುಕೊಂಡಿತು. ಈ ನಡುವೆಯೂ ತಮ್ಮನ್ನು ಭೇಟಿಯಾದ ಪ್ರಧಾನಿ ಮೋದಿ ಅವರಿಗೆ ರವೀಂದ್ರ ಜಡೇಜಾ ಧನ್ಯವಾದ ಸಲ್ಲಿಸಿದ್ದಾರೆ.

“ನಾವು ಉತ್ತಮ ಟೂರ್ನಿಯನ್ನು ಹೊಂದಿದ್ದೆವು. ಆದರೆ ನಾವು ನಿನ್ನೆಯ ಆಟದಲ್ಲಿ ಸೋತೆವು. ನಮ್ಮೆಲ್ಲರ ಹೃದಯ ಒಡೆದು ಹೋಗಿದೆ. ಆದರೆ ನಮ್ಮ ಜನರ ಬೆಂಬಲವು ನಮ್ಮನ್ನು ಮುಂದುವರಿಯುವಂತೆ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ನಿನ್ನೆ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ನೀಡಿ ಸಂತೈಸಿದ್ದು ಪ್ರೇರಣಾದಾಯಕವಾಗಿತ್ತು,” ಎಂದು ಜಡೇಜಾ ಟ್ವೀಟ್ ಮಾಡಿದ್ದಾರೆ.

Exit mobile version