Site icon Vistara News

IND vs NZ : ಟೀಮ್ ಇಂಡಿಯಾ ಸಾಧನೆಗೆ ಮೋದಿ ಏನಂದ್ರು? ರಾಹುಲ್​ ಟ್ವೀಟ್​ನಲ್ಲಿ ಏನಿದೆ?

Rohti Sharma

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ (IND vs NZ) ವಿರುದ್ಧ 70 ರನ್​ ಭರ್ಜರಿ ಗೆಲುವು ಸಾಧಿಸಿದ ಟೀಮ್ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್ ಗಳಿಂದ ಮಣಿಸಿದ ಮೆನ್ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಫೈನಲ್ ಪ್ರವೇಶಿಸಿದೆ.

ಭಾರತ ತಂಡದ ಅದ್ಭುತ ಸಾಧನೆಯನ್ನು ಪಿಎಂ ಮೋದಿ ಕೊಂಡಾಡಿದ್ದಾರೆ. ಇದೇ ವೇಳೆ ನಿರ್ಣಾಯಕ ಪಂದ್ಯದಲ್ಲಿ ಏಳು ವಿಕೆಟ್​ಗಳನ್ನು ಪಡೆದ ಮೊಹಮ್ಮದ್ ಶಮಿ ಅವರ ಅದ್ಭುತ ಪ್ರದರ್ಶನವನ್ನೂ ಶ್ಲಾಘಿಸಿದ್ದಾರೆ. “ಟೀಮ್ ಇಂಡಿಯಾಗೆ ಅಭಿನಂದನೆಗಳು. ಭಾರತವು ಅತ್ಯುನ್ನತ ಪ್ರದರ್ಶನವನ್ನು ನೀಡುತ್ತದೆ ಮತ್ತು ಗಮನಾರ್ಹ ಶೈಲಿಯಲ್ಲಿ ಫೈನಲ್ ಗೆ ಪ್ರವೇಶಿಸಿದೆ. ಅದ್ಭುತ ಬ್ಯಾಟಿಂಗ್ ಮತ್ತು ಉತ್ತಮ ಬೌಲಿಂಗ್ ಪಂದ್ಯವನ್ನು ಭದ್ರಪಡಿಸಿತು. ಫೈನಲ್ಸ್ ಗೆ ಶುಭ ಹಾರೈಕೆಗಳು!” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

“ಇಂದಿನ ಸೆಮಿಫೈನಲ್ ಪಂದ್ಯವು ಹಲವು ವೈಯಕ್ತಿಕ ಪ್ರದರ್ಶನಗಳಿಂದಾಗಿ ಇನ್ನಷ್ಟು ವಿಶೇಷ ಎನಿಸಕೊಂಡಿದೆ. ಮೊಹಮ್ಮದ್ ಶಮಿ ಅವರ ಅವರ ಬೌಲಿಂಗ್ ಸಾಧನೆಯನ್ನು ಹಲವು ಪೀಳಿಗೆಯ ಕ್ರಿಕೆಟ್ ಪ್ರೇಮಿಗಳು ಮೆಚ್ಚಲಿದ್ದಾರೆ. ಶಮಿ ಅದ್ಭುತವಾಗಿ ಆಡಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಶಮಿಯನ್ನು ಶ್ಲಾಘಿಸಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವಿಟರ್ ನಲ್ಲಿ ಟೀಮ್ ಇಂಡಿಯಾದ ಅದ್ಭುತ ಗೆಲುವನ್ನು ಶ್ಲಾಘಿಸಿದ್ದಾರೆ.

“ಅತ್ಯುತ್ತಮ ಪ್ರದರ್ಶನ, ಟೀಮ್ ಇಂಡಿಯಾ! ಆಟದುದ್ದಕ್ಕೂ ತಂಡವಾಗಿ ಶ್ರಮಿಸಿತು ಮತ್ತು ಕೌಶಲ್ಯದ ಅತ್ಯುತ್ತಮ ಪ್ರದರ್ಶನ ನೀಡಿತು. ವಿರಾಟ್, ನಂಬಲಾಗದ ಸಾಧನೆಗೆ ಅಭಿನಂದನೆಗಳು. ವಿಶ್ವ ಕಪ್ ಗೆದ್ದು ಬನ್ನಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಶಮಿ

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ (Mohammed Shami) ಮತ್ತೊಂದು ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಕ್ರಿಕೆಟ್ ವಿಶ್ವಕಪ್​ನಲ್ಲಿ ತಮ್ಮ ಕನಸಿನ ಓಟವನ್ನು ಮುಂದುವರಿಸಿದ್ದಾರೆ. 33ರ ಹರೆಯದ ಬಲಗೈ ವೇಗಿ 7 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು 327 ರನ್​ಗಳಿಗೆ ಕಟ್ಟಿಹಾಕಲು ಭಾರತ ತಂಡಕ್ಕೆ ವಿಶ್ವಕಪ್ ಫೈನಲ್​​ ಪ್ರವೇಶಿಸಲು ನೆರವಾದರು.

ಇದನ್ನೂ ಓದಿ: Mohammed Shami : ವಿಶ್ವ ಕಪ್​ನಲ್ಲಿ ವಿಕೆಟ್​ಗಳ ಅರ್ಧ ಶತಕ ಬಾರಿಸಿ ನೂತನ ದಾಖಲೆ ಬರೆದ ಶಮಿ

ಭಾರತದ ಅನುಭವಿ ವೇಗಿ ತಮ್ಮ ಅಸಾಧಾರಣ ಸ್ಪೆಲ್​ ಮೂಲಕ ಅನೇಕ ದಾಖಲೆಗಳನ್ನು ನಿರ್ಮಿಸಿದರು. ಅವರ 57 ರನ್​ಗೆ 7 ವಿಕೆಟ್​ ಭಾರತ ತಂಡದ ಯಾವುದೇ ಬೌಲರ್ ಪಾಲಿಗೆ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್ ಸಾಧನೆಯಾಗಿದೆ ಈ ಹಿಂದೆ 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಸ್ಟುವರ್ಟ್ ಬಿನ್ನಿ 6-4 ವಿಕೆಟ್ ಪಡೆದಿರುವುದ ದೊಡ್ಡ ಸಾಧನೆಯಾಗಿತ್ತು.

ವಿಶ್ವಕಪ್​ ಟೂರ್ನಿಯಲ್ಲಿ ನಾಲ್ಕನೇ ಬಾರಿ 5 ವಿಕೆಟ್ ಸಾಧನೆ ಮಾಡಿದ ಶಮಿ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 2019ರಲ್ಲಿ 2 ಹಾಗೂ 2015ರ ವಿಶ್ವಕಪ್​ನಲ್ಲಿ 1 ಬಾರಿ ಐದ ವಿಕೆಟ್ ಸಾಧನೆ ಮಾಡಿದ್ದರು. ಅವರ ದಾಖಲೆಯನ್ನು ಶಮಿ ಮುರಿದಿದ್ದಾರೆ.

ವಿಶ್ವಕಪ್​ ಒಂದೇ ಆವೃತ್ತಿಯಲ್ಲಿ ಮೂರು ಬಾರಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಶಮಿ ಪಾತ್ರರಾಗಿದ್ದಾರೆ. ಮೊಹಮ್ಮದ್ ಶಮಿ ಹಾಲಿ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಆಡಮ್ ಜಂಪಾ ಅವರನ್ನು ಹಿಂದಿಕ್ಕಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಜಂಪಾ 22 ವಿಕೆಟ್ ಪಡೆದಿದ್ದರೆ, ಶಮಿ 23 ವಿಕೆಟ್​ ಉರುಳಿಸಿದ್ದಾರೆ.

Exit mobile version