Site icon Vistara News

IPL 2023 : ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಕೂಡ ಧೋನಿಯ ದೊಡ್ಡ ಫ್ಯಾನ್​; ಜನರ ನಡುವೆ ಅಭಿಮಾನ ಸಾಬೀತು

Popular singer Arijit Singh is also a big fan of Dhoni; Proves admiration among people

#image_title

ಅಹಮದಾಬಾದ್: ಭಾರತ ಕ್ರಿಕೆಟ್​ ಕ್ಷೇತ್ರದ ದಿಗ್ಗಜ ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೇ ಐಪಿಎಲ್​ ಎಂದು ಹೇಳಲಾಗುತ್ತಿದೆ. ಹೀಗಾಗಿ ಹಾಲಿ ಆವೃತ್ತಿಯಲ್ಲಿ ಅವರಿಗೆ ಸಿಕ್ಕಾಪಟ್ಟೆ ಮರ್ಯಾದೆ ಸಿಗುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಅವರ ದೊಡ್ಡ ಸಂಖ್ಯೆಯ ಅಭಿಮಾನಿಗಳಿಗೆ ಧೋನಿ ನಿವೃತ್ತಿ ಹೊಂದುವುದೇ ದೊಡ್ಡ ಬೇಸರ ಎನಿಸಿದೆ. ಏತನ್ಮಧ್ಯೆ, ವಿಶ್ವ ಪ್ರಸಿದ್ಧ ಗಾಯಕ ಅರಿಜಿತ್​ ಸಿಂಗ್ ಕೂಡ ಮಹೇಂದ್ರ ಸಿಂಗ್​ ಧೋನಿಯ ಅಭಿಮಾನಿ ಎಂಬುದು ಸಾಬೀತಾಗಿದೆ. ಶುಕ್ರವಾರ ನಡೆದ ಐಪಿಎಲ್​ ಉದ್ಘಾಟನಾ ಕಾರ್ಯಕ್ರಮದ ವೇಳೆ ಅವರು ತಮ್ಮ ಸನಿಹವೇ ಸಿಕ್ಕಿದ ಮಹೇಂದ್ರ ಸಿಂಗ್ ಧೋನಿಯ ಕಾಲು ಹಿಡಿದು ನಮಸ್ಕರಿಸಿದ್ದಾರೆ.

ಐಪಿಎಲ್​ 16ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದ ವೇಳೆ ಅರಿಜಿತ್​ ಸಿಂಗ್ ಅವರ ಗಾಯನ ಕಾರ್ಯಕ್ರಮವಿತ್ತು. ಬಳಿಕ ತಮನ್ನಾ ಭಾಟಿಯಾ ಹಾಗೂ ರಶ್ಮಿಕಾ ಮಂದಣ್ಣ ಅವರ ನೃತ್ಯ ಕಾರ್ಯಕ್ರಮವಿತ್ತು. ಅದಾದ ಬಳಿಕ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಗುಜರಾತ್ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಅವರನ್ನು ತೆರೆದ ವಾಹನದಲ್ಲಿ ಮೈದಾನಕ್ಕೆ ಕರೆ ತರಲಾಯಿತು. ಈ ವೇಳೆ ತಮಗೆ ಎದುರಾದ ಮಹೇಂದ್ರ ಸಿಂಗ್ ಧೋನಿಯ ಕಾಲಿಗೆ ಬಿದ್ದು ನಮಸ್ಕರಿಸಿದರು.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿತು. ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ (92 ರನ್‌) ಅವರ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ಸಹಾಯದಿಂದ ಸಿಎಸ್‌ಕೆ ತಮ್ಮ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 178 ರನ್‌ ಕಲೆ ಹಾಕಿತು. ಆ ಮೂಲಕ ಗುಜರಾತ್‌ ಟೈಟನ್ಸ್‌ಗೆ 179 ರನ್‌ ಗುರಿ ನೀಡಿತ್ತು.

ಇದನ್ನೂ ಓದಿ : IPL 2023 : ಅಭ್ಯಾಸ ಪಂದ್ಯದಲ್ಲೇ ಶತಕ ಬಾರಿಸಿ ಆರ್​ಸಿಬಿ ತಂಡಕ್ಕೆ ಭರವಸೆ ಮೂಡಿಸಿದ ನ್ಯೂಜಿಲ್ಯಾಂಡ್​ ಆಲ್​ರೌಂಡರ್​

ಗುರಿ ಹಿಂಬಾಲಿಸಿದ ಗುಜರಾತ್‌ ಟೈಟನ್ಸ್ ತಂಡ ಒಂದು ಹಂತದಲ್ಲಿ ವೃದ್ದಿಮಾನ್‌ ಸಹಾ ಅವರ ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಅವರ (63 ರನ್‌) ಆಕರ್ಷಕ ಅರ್ಧಶತಕದ ಬಲದಿಂದ ಗುಜರಾತ್ ಟೈಟನ್ಸ್ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್‌ಗಳಿಂದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ರಶ್ಮಿಕಾ ಮಂದಣ್ಣ ಮೋಹಕ ನೃತ್ಯ

ಐಪಿಎಲ್ 16ನೇ ಆವೃತ್ತಿಯಲ್ಲಿ (IPL 2023) ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡತಿ ಹಾಗೂ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಹಾಡುಗಳಿಗೆ ಕುಣಿದು ಕ್ರಿಕೆಟ್​ ಪ್ರೇಮಿಗಳ ಮನ ತಣಿಸಿದರು. ಸಾಮಿ ಸಾಮಿ ಹಾಡಿಗೆ ಅವರು ಕುಣಿಯುತ್ತಿದ್ದಂತೆ ಕ್ರಿಕೆಟ್​ ಪ್ರೇಮಿಗಳು ಹರ್ಷದಿಂದ ಕುಣಿದು ಕುಪ್ಪಳಿಸಿದರು. ಈ ಮೂಲಕ ಕ್ರಿಕೆಟ್​ನ ಸವಿ ಉಣಲು ಕಾಯುತ್ತಿದ್ದ ಅಭಿಮಾನಿಗಳು ಮೋಹಕ ತಾರೆಯ ನೃತ್ಯ ವೈಭವವನ್ನು ಕಣ್ತುಂಬಿಕೊಂಡರು.

Exit mobile version