Site icon Vistara News

BWF World Championships | ಎರಡನೇ ಶ್ರೇಯಾಂಕದ ಆಟಗಾರನನ್ನು ಮಣಿಸಿದ ಭಾರತದ ಷಟ್ಲರ್‌

BWF World Championships

ಟೋಕಿಯೊ : ಸ್ಥಳೀಯ ಪ್ರತಿಭೆ ಹಾಗೂ ಟೂರ್ನಿಯ ಎರಡನೇ ಶ್ರೇಯಾಂಕದ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ಅವರನ್ನು ಮಣಿಸಿದ ಭಾರತದ ಷಟ್ಲರ್‌ ಎಚ್‌ ಎಸ್‌ ಪ್ರಣಯ್‌, BWF World Championships ಟೂರ್ನಿಯ ಪ್ರಿ ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಇದೇ ವೇಳೆ ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಕೂಡ ಪ್ರಿ ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಶ್ರೇಯಾಂಕ ರಹಿತ ಆಟಗಾರನಾಗಿರುವ ಎಚ್‌ ಎಸ್‌ ಪ್ರಣಯ್‌ ಅವರು ಪ್ರೇಕ್ಷಕರಿಂದ ತುಂಬಿದ್ದ ಸ್ಟೇಡಿಯಮ್‌ನಲ್ಲಿ ಎರಡು ಬಾರಿಯ ಚಾಂಪಿಯನ್‌ ಮೊಮೊಟಾ ಅವರನ್ನು ೨೧-೧೭, ೨೧-೧೬ ಗೇಮ್‌ಗಳಿಂದ ಮಣಿಸಿದರು. ಅಂತೆಯೇ ಭಾರತದ ಷಟ್ಲರ್‌ಗೆ ಜಪಾನ್‌ನ ಅಗ್ರ ಶ್ರೇಯಾಂಕದ ಆಟಗಾರನ ವಿರುದ್ಧ ಇದುವರೆಗಿನ ಎಂಟು ಮುಖಾಮುಖಿಯಲ್ಲಿ ಲಭಿಸಿದ ಮೊದಲ ಗೆಲುವಾಗಿದೆ.

ಈ ಪಂದ್ಯಕ್ಕಿಂತ ಮೊದಲು ಲಕ್ಷ್ಯ ಸೇನ್‌ ಅವರು ಸ್ಪೇನ್‌ನ ಲೂಯಿಸ್‌ ಪೆನಾಲ್ವೆರ್‌ ವಿರುದ್ದ ೨೧೦೧೭, ೨೧-೧೦ ಗೇಮ್‌ಗಳಿಂದ ಜಯ ಸಾಧಿಸಿದರು. ಗುರುವಾರ ನಡೆಯಲಿರುವ ೧೬ನೇ ಸುತ್ತಿನ ಸ್ಪರ್ಧೆಯಲ್ಲಿ ಪ್ರಣಯ್‌ ಹಾಗೂ ಸೇನ್‌ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ಕಿಡಂಬಿಗೆ ಸೋಲು

ಕಳೆದ ಬಾರಿಯ ರನ್ನರ್‌ ಅಪ್‌ ಕಿಡಂಬಿ ಶ್ರೀಕಾಂತ್‌ ಅವರು ೩೨ನೇ ಸುತ್ತಿನ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ. ಅವರು ಚೀನಾದ ಜಾಹೊ ಜುನ್‌ ಪೆಂಗ್‌ ವಿರುದ್ಧ ೧೮-೨೧, ೧೭-೨೧ ಗೇಮ್‌ಗಳಿಂದ ಸೋತರು.

ಭಾರತದ ಪುರುಷರ ಡಬಲ್ಸ್‌ ಜೋಡಿ ಧ್ರುವ್‌ ಕಪಿಲಾ ಹಾಗೂ ಅರ್ಜುನ್‌ ರೆಡ್ಡಿ ಜೋಡಿ ಪ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶ ಪಡೆದರು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಸೋತು ನಿರ್ಗಮಿಸಿದ್ದಾರೆ. ಭಾರತದ ಮತ್ತೊಂದ ಮಹಿಳೆಯರ ಡಬ್ಲಲ್ಸ್‌ ಜೋಡಿ ಪೂಜಾ ದಂಡು ಹಾಗೂ ಸಂಜನಾ ಸಂತೋಷ್‌ ಸೋಲು ಕಂಡಿದ್ದಾರೆ.

ಅಂತೆಯೇ ಎಂಟನೇ ಶ್ರೇಯಾಂಕದ ಪುರುಷರ ಡಬಲ್ಸ್‌ ಜೋಡಿ ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಾಂಕಿ ರೆಡ್ಡಿ ೧೬ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರದ ಪದಕಕ್ಕೆ ಗುರಿಯಿಟ್ಟ ಲಕ್ಷ್ಯ

Exit mobile version