Site icon Vistara News

Prasidh Krishana: ಆಸೀಸ್ ವಿರುದ್ಧದ ಪಂದ್ಯದಲ್ಲಿ ʼಕುಪ್ರಸಿದ್ಧʼ ದಾಖಲೆ ಬರೆದ ಕನ್ನಡಿಗ ಬೌಲರ್!​

Pasidh krishana

Pasidh krishana

ಗುವಾಹಟಿ: ಇಲ್ಲಿನ ಬರ್ಸಪಾರ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಐ ಪಂದ್ಯದಲ್ಲಿ, ಆಸೀಸ್​​ ತಂಡಕ್ಕೆ ಕೊನೆಯ 6 ಎಸೆತಗಳಲ್ಲಿ 21 ರನ್​ಗಳ ಅಗತ್ಯವಿತ್ತು. ನಾಯಕ ಸೂರ್ಯಕುಮಾರ್ ಯಾದವ್ 3 ಓವರ್​ಗಳಲ್ಲಿ 45 ರನ್​ ಬಿಟ್ಟುಕೊಟ್ಟಿದ್ದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ (Prasidh Krishana) ಅವರಿಗೆ ಚೆಂಡನ್ನು ನೀಡಿದರು. ಯಾಕೆಂದರೆ ಕೃಷ್ಣ ತಮ್ಮ ಹಿಂದಿನ ಓವರ್​ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದರು. ಕೇವಲ ಆರು ರನ್​ ನೀಡಿದ್ದರು. ಆದರೆ ಗ್ಲೆನ್ ಮ್ಯಾಕ್ಸ್ವೆಲ್ ಅಂತಿಮ ಓವರ್​ನಲ್ಲಿ ಪ್ರಸಿದ್ಧ್​ ಕೃಷ್ಣ ಅವರಿಗೆ ಯಾವುದೇ ಅವಕಾಶ ಕೊಡಲಿಲ್ಲ. ಬರೊಬ್ಬರಿ 23 ರನ್ ಕಸಿದರು. ಇದರಿಂದ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತು. ಈ ವೇಳೆ ಪ್ರಸಿದ್ಧ್​ ಕೃಷ್ಣ ಭಾರತ ತಂಡದ ಪರ ಕಳಪೆ ದಾಖಲೆಯೊಂದನ್ನು ಮಾಡಿದರು.

ಪ್ರಸಿದ್ಧ್​ ಕೃಷ್ಣ ಕೊನೇ ಎಸೆತಕ್ಕೆ ಫೋರ್​ ಬಾರಿಸಿದ ಮ್ಯಾಕ್ಸ್​ವೆಲ್​

ಕೊನೆಯ ನಾಲ್ಕು ಎಸೆತಗಳಲ್ಲಿ ಮ್ಯಾಕ್ಸ್ವೆಲ್ ಒಂದು ಸಿಕ್ಸರ್ ಮತ್ತು ಮೂರು ಬೌಂಡರಿಗಳೊಂದಿಗೆ 18 ರನ್ ಗಳಿಸಿದರು – ಟಿ 20 ಐ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ರೋಚಕ ಗೆಲುವಿನತ್ತ ಮುನ್ನಡೆಸಿದರು. ಅಂತಿಮ ಓವರ್​ನಲ್ಲಿ ಕೃಷ್ಣ ಒಟ್ಟು 23 ರನ್​​ ಬಿಟ್ಟುಕೊಟ್ಟು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆ ತುತ್ತಾದರು.

ಕೃಷ್ಣ ಅವರು ಕಳಪೆ ದಾಖಲೆಯೊಂದಿಗೆ ತಮ್ಮ ಸ್ಪೆಲ್​ ಕೊನೆಗೊಳಿಸಿದರು. ಅಷ್ಟರಲ್ಲಿ ಅವರು ತಮ್ಮ ನಾಲ್ಕು ಓವರ್ ಗಳಲ್ಲಿ 68 ರನ್ ನೀಡಿದ್ದದರು 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಯುಜ್ವೇಂದ್ರ ಚಹಲ್ ಅವರ 64 ರನ್​ಗಳ ನೀಡಿದ್ದು ಭಾರತ ಪರ ಹಿಂದಿನ ದಾಖಲೆಯಾಗಿತ್ತು. ಇದೀಗ ಪ್ರಸಿದ್ಧ್​ ಟಿ20 ಐ ಪಂದ್ಯದಲ್ಲಿ ಅತಿ ಹೆಚ್ಚು ರನ್​ಗಳನ್ನು ಬಿಟ್ಟುಕೊಟ್ಟ ಭಾರತೀಯ ಬೌಲರ್ ಎಂಬ ಕಳಪೆ ದಾಖಲೆಗೆ ಒಳಗಾದರು.

ಈ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಅವರು ತಮ್ಮ ಸತ್ವ ರಹಿತ ಬೌಲಿಂಗ್​ಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಟೀಕೆಗಳನ್ನು ಎದುರಿಸಬೇಕಾಯಿತು. “ಗ್ಲೆನ್ ಮ್ಯಾಕ್ಸ್ವೆಲ್ ಪ್ರಸಿದ್ಧ್ ಕೃಷ್ಣ ಅವರ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಿದರು” ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಗಿ ಬರೆದಿದ್ದಾರೆ.

ಉತ್ತಮ ಯಾರ್ಕರ್​ಗಳನ್ನು ಎಸೆಯಲು ಹೆಸರುವಾಸಿಯಾದ ಪ್ರಸಿದ್ಧ್ ಕೃಷ್ಣ ಅವರಿಗಿಂತ ಮುಖೇಶ್ ಕುಮಾರ್ ಅವರಿಗೆ ಏಕೆ ಆದ್ಯತೆ ನೀಡಲಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಆಶ್ಚರ್ಯಪಟ್ಟಿದ್ದಾರೆ. “ಈ ಬೌಲರ್​ಗೆ 20 ರನ್​ಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ” ಎಂದು ಇನ್ನೊಬ್ಬರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Virat Kohli : ವೃತ್ತಿ ಬದುಕಿನಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡ ವಿರಾಟ್​ ಕೊಹ್ಲಿ, ಅಭಿಮಾನಿಗಳಿಗೆ ನಿರಾಸೆ

“ಪ್ರಸಿದ್ಧ್ ಕೃಷ್ಣ ಅವರ ಸಂಪೂರ್ಣ ಪ್ರಯತ್ನ ಶೂನ್ಯ. ಯಾರ್ಕರ್ ಅನ್ನು ಪ್ರಯತ್ನ ಮಾಡಲೇ ಇಲ್ಲ ಅವರಿಗೆ ತಮ್ಮ ಬೌಲಿಂಗ್ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ಅಕ್ಷರ್ ಪಟೇಲ್ ವಿಷಯದಲ್ಲೂ ಹಾಗೆಯೇ. ಆಯಾ ಐಪಿಎಲ್ ತಂಡಗಳ ಬಗ್ಗೆ ನನಗೆ ನಿಜವಾಗಿಯೂ ಬೇಸರವಿದೆ, “ಎಂದು ಮತ್ತೊಬ್ಬರು ಬರೆದಿದ್ದಾರೆ.

“ಪ್ರಸಿದ್ಧ್ ಕೃಷ್ಣ, ನೀವು ಟಿ 20 ಬೌಲರ್ ಅಲ್ಲ, ದೇಶೀಯ ಪಂದ್ಯಗಳಿಗೆ ಹೋಗಿ ಕಲಿಯಿರಿ” ಎಂದು ಅಭಿಮಾನಿಯೊಬ್ಬರು ಕೋಪ ತೋರಿಸಿದ್ದಾರೆ. ಮುಂಬರುವ ಟಿ 20 ವಿಶ್ವ ಕಪ್​ನಲ್ಲಿ ಬಿಸಿಸಿಐ ಈ ಬೌಲರ್ ಅನ್ನು ಸೇರಿಸಬಾರದು ಎಂದು ಅವರು ಪ್ರಾರ್ಥಿಸಿದ್ದಾರೆ. ಇನ್ನೊಬ್ಬರು ” ರಾಜಸ್ಥಾನ್ ರಾಯಲ್ಸ್ ತಂಡವನ್ನು ದೇವರೇ ಕಾಪಾಡಲಿ ಎಂದು ಬರೆದುಕೊಂಡಿದ್ದಾರೆ. (ಐಪಿಎಲ್​ನಲ್ಲಿ ಪ್ರಸಿದ್ಧ್​ ರಾಜಸ್ಥಾನ್​ ತಂಡದ ಸದಸ್ಯ)

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಿಂದ ಬಿಡುಗಡೆಯಾದ ನಂತರ ಕೃಷ್ಣ ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ. “ಪ್ರಸಿದ್ಧ್ ಕೃಷ್ಣ ಅವರನ್ನು ಬಿಡುವುದು ಕೆಕೆಆರ್ ಮ್ಯಾನೇಜ್ಮೆಂಟ್ ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿದೆ” ಎಂದು ಮತ್ತೊಬ್ಬರು ಬರೆದಿದ್ದಾರೆ.

Exit mobile version