Site icon Vistara News

Prasidh Krishna: ಹಸೆಮಣೆ ಏರಿದ ಕರ್ನಾಟಕದ ವೇಗಿ

Prasidh Krishna got married to his long time partner Rachana Krishna

ಬೆಂಗಳೂರು: ಟೀಮ್​ ಇಂಡಿಯಾದ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣ(Prasidh Krishna) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಜೀವನದ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಚನಾ ಕೃಷ್ಣ (Rachana Krishna) ಅವರೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಸರಳ ಸಮಾರಂಭದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಕಾಣಿಸಿಕೊಂಡಿದ್ದರು. ವೈವಾಹಿಕ ಜೀವನಕ್ಕೆ ಕಾಲಿರಿಸಿದ ಈ ಜೋಡಿಗೆ ಟೀಮ್​ ಇಂಡಿಯಾದ ಹಲವು ಕ್ರಿಕೆಟಿಗರು ಶುಭ ಹಾರೈಸಿದ್ದಾರೆ.

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪರ ಆಡುವ ಕರ್ನಾಟಕದ ಬಲಗೈ ವೇಗಿ ಪ್ರಸಿದ್ಧ್ ಕೃಷ್ಣ ಅವರು 16ನೇ ಆವೃತ್ತಿಯ ಐಪಿಎಲ್​ನಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಹೀಗಾಗಿ ಅವರ ಬದಲು ಸಂದೀಪ್​ ಶರ್ಮ ತಂಡಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದರು. ಪ್ರಸಿದ್ಧ್ ಕೃಷ್ಣ ಅವರು ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಕೆ ಕಂಡಿರುವ ಅವರು ವಿವಾಹವಾಗಿದ್ದಾರೆ. ಮುಂದಿನ ದಿನದಲ್ಲಿ ಮತ್ತೆ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರಸಿದ್ಧ್ ಕೃಷ್ಣ ಅವರ ಬಾಳ ಸಂಗಾತಿ ರಚನಾ ಕೃಷ್ಣ ಅವರು ಟೆಕ್ಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪದವಿ ಓದಿದ್ದಾರೆ. ಮೂಲಗಳ ಪ್ರಕಾರ ರಚನಾ ಅಮೆರಿಕ ಮೂಲದ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ WTC Final 2023; ಭಾರತಕ್ಕೆ ತಲೆನೋವು ತಂದ ಹೆಡ್​ ಶತಕ; ಬೃಹತ್​ ಮೊತ್ತದತ್ತ ಆಸೀಸ್​

ಪ್ರಸಿದ್ಧ್ ಕೃಷ್ಣ ಅವರು ಕೊನೆಯದಾಗಿ ಭಾರತ ತಂಡದ ಪರವಾಗಿ ಕಳೆದ ವರ್ಷದ ಆಗಸ್ಟ್‌ ನಲ್ಲಿ ಭಾರತದ ಜಿಂಬಾಬ್ವೆ ಪ್ರವಾಸದಲ್ಲಿ ಆಡಿದ್ದರು. ಒಟ್ಟಾರೆಯಾಗಿ, ಅವರು ಟೀಂ ಇಂಡಿಯಾ ಪರವಾಗಿ 14 ಏಕದಿನ ಪಂದ್ಯವಾಡಿದ್ದು 23.92 ರ ಸರಾಸರಿಯಲ್ಲಿ 25 ವಿಕೆಟ್​ ಪಡೆದಿದ್ದಾರೆ.

Exit mobile version