Site icon Vistara News

National Games | ರಾಷ್ಟ್ರಮಟ್ಟದ ಬೃಹತ್‌ ಕ್ರೀಡಾಕೂಟಕ್ಕೆ ಚಾಲನೆ ಕೊಟ್ಟ ಪ್ರಧಾನಿ ಮೋದಿ

national games

ಅಹಮದಾಬಾದ್‌ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ೩೬ನೇ ಆವೃತ್ತಿಯ ನ್ಯಾಷನಲ್‌ ಗೇಮ್ಸ್‌ಗೆ ಗುರುವಾರ ಚಾಲನೆ ಕೊಟ್ಟರು. ಸುಮಾರು ಒಂದು ಲಕ್ಷ ಪ್ರೇಕ್ಷಕರ ಸಮ್ಮುಖದಲ್ಲಿ ಅವರು ರಾಷ್ಟ್ರ ಮಟ್ಟದ ಅತ್ಯುನ್ನತ ಕ್ರೀಡಾಕೂಟಕ್ಕೆ ಅವರು ಚಾಲನೆ ನೀಡಿದರು. ಮುಂಬರುವ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿಯೊಂದಿಗೆ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು ಹಾಗೂ ಮಹಿಳಾ ಈಜುಪಟು ಮಾನಾ ಪಟೇಲ್‌ ಅವರು ಸಾಂಕೇತಿಕ ಕ್ರೀಡಾ ಜ್ಯೋತಿಯನ್ನು ಪ್ರಧಾನ ಮಂತ್ರಿ ಅವರಿಗೆ ಹಸ್ತಾಂತರ ಮಾಡಿದರು.

ಭಾರತೀಯ ಕ್ರೀಡಾ ಕ್ಷೇತ್ರದ ದಂತಕತೆಗಳೆನಿಸಿಕೊಂಡಿರುವ ಒಲಿಂಪಿಕ್‌ ಪದಕ ವಿಜೇತರಾದ ನೀರಜ್‌ ಚೋಪ್ರಾ ಮತ್ತು ಪಿ. ವಿ. ಸಿಂಧೂ, ರವಿ ದಹಿಯಾ, ಮೀರಾಬಾಯಿ ಚಾನು, ಗಗನ್ ನಾರಂಗ್‌, ಭಾರತ ಹಾಕಿ ತಂಡದ ಮಾಜಿ ನಾಯಕ ದಿಲೀಪ್‌ ಟಿರ್ಕೆ, ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತರಾದ ಅಂಜು ಬಾಬಿ ಜಾರ್ಜ್‌ ಮತ್ತಿತರರ ಸಮ್ಮುಖದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕಳೆದ ಎಂಟು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡಲಾಗುವ ಬಜೆಟ್‌ ಅನ್ನು ಶೇಕಡಾ ೭೦ರಷ್ಟು ಹೆಚ್ಚು ಮಾಡಲಾಗಿದೆ. ಅಂತೆಯೇ ಅದಕ್ಕಿಂತ ಮೊದಲು ಭಾರತ ೧೦೦ಕ್ಕೂ ಕಡಿಮೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಅಥ್ಲೀಟ್‌ಗಳು ಪಾಲ್ಗೊಂಡಿದ್ದರೆ, ಇದೀಗ ೩೦೦ಕ್ಕೂ ಅಧಿಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿದೆ,” ಎಂದು ಹೇಳಿದರು.

ಏಳು ವರ್ಷಗಳ ಬಳಿಕ ನ್ಯಾಷನಲ್‌ ಗೇಮ್ಸ್ ನಡೆಯುತ್ತಿದ್ದು, ಅಕ್ಟೋಬರ್‌ ೧೦ಕ್ಕೆ ಸಮಾಪ್ತಿಯಾಗಲಿದೆ. ೭ ಸಾವಿರಕ್ಕಿಂತಲೂ ಹೆಚ್ಚು ಅಥ್ಲೀಟ್‌ಗಳು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಗುಜರಾತ್‌ನ ಆರು ನಗರಗಳಲ್ಲಿ ೩೬ ಕ್ರೀಡೆಗಳಿಗೆ ಸ್ಪರ್ಧೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಗುಜರಾತ್‌ನ ಸಾಂಪ್ರದಾಯಿಕ ಕಲಾ ತಂಡಗಳ ಪ್ರದರ್ಶನವೂ ನಡೆಯಿತು.

ಇದನ್ನೂ ಓದಿ | National Games | ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ನ್ಯಾಷನಲ್ ಗೇಮ್ಸ್‌ನಿಂದ ವಿನಾಯಿತಿ

Exit mobile version