ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ನಡೆಯಲಿರುವ ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗುವ ನಿರೀಕ್ಷೆಯಿದೆ. ಐಸಿಸಿ ವಿಶ್ವಕಪ್ 2023 ರ ಫೈನಲ್ ಪಂದ್ಯಕ್ಕೆ ಪ್ರಧಾನಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದ್ದು, ರೋಚಕ ಪಂದ್ಯವನ್ನು ಪಂದ್ಯವನ್ನು ವೀಕ್ಷಿಸಲು 1.30 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ. ಈ ವೇಳೆ ಹಲವಾರು ಗಣ್ಯರು ಮೈದಾನಕ್ಕೆ ದಾಪುಗಾಲು ಇಡಲಿದ್ದಾರೆ. ಇವರೆಲ್ಲರ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಎನಿಸಿಕೊಳ್ಳಲಿದ್ದಾರೆ.
Narendra Modi Stadium is getting ready for the World Cup final. 🔥pic.twitter.com/8rZMJMv9Fr
— Johns. (@CricCrazyJohns) November 16, 2023
ಪ್ರಧಾನಿ ಮೋದಿ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದು, ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದ ನಂತರ ಮೆನ್ ಇನ್ ಬ್ಲೂ ತಂಡವನ್ನು ಅಭಿನಂದಿಸಿದ್ದರು. “ಇಂದಿನ ಸೆಮಿಫೈನಲ್ ಪಂದ್ಯವು ವೈಯಕ್ತಿಕ ಪ್ರದರ್ಶನದಿಂದಾಗಿ ಇನ್ನಷ್ಟು ವಿಶೇಷವಾಗಿದೆ. ಶಮಿಗೆ ಧನ್ಯವಾದಗಳು. ಈ ಪಂದ್ಯದ ಮೂಲಕ ಕ್ರಿಕೆಟ್ ಪ್ರೇಮಿಗಳು ಮುಂದಿನ ಪೀಳಿಗೆಗೂ ಈ ಆವೃತ್ತಿಯನ್ನು ಸ್ಮರಿಸಿಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದ್ದರು.
ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ವೀಕ್ಷಿಸಿದ್ದರು. ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಇಬ್ಬರೂ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಎರಡೂ ತಂಡಗಳ ಆಟಗಾರರನ್ನು ಭೇಟಿಯಾಗಿದ್ದರು.
Today’s Semi Final has been even more special thanks to stellar individual performances too.
— Narendra Modi (@narendramodi) November 15, 2023
The bowling by @MdShami11 in this game and also through the World Cup will be cherished by cricket lovers for generations to come.
Well played Shami!
ರೋಹಿತ್ ಶರ್ಮಾ ಭೇಟಿ ಮಾಡಿ ಶುಭಾಶಯ ಕೋರಿದ ಫುಟ್ಬಾಲ್ ಲೆಜೆಂಡ್
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ 2023ರ (ICC World Cup 2023) ಸೆಮಿಫೈನಲ್ನಲ್ಲಿ ಎದುರಾಳಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 70 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈನ ಪ್ರಸಿದ್ಧ ಕ್ರಿಕೆಟ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಆ್ಯಂಡ್ ಕೋ ಫೈನಲ್ ಪ್ರವೇಶಿಸುವುದನ್ನು ವೀಕ್ಷಿಸಲು ವಿವಿಧ ಕ್ಷೇತ್ರಗಳ ಗಣ್ಯರು ಹಾಜರಿದ್ದರು. ಎಲ್ಲಾ ಕ್ರೀಡೆಗಳಲ್ಲಿ ಅತ್ಯಂತ ಉನ್ನತ ಹೆಸರುಗಳಲ್ಲಿ ಒಬ್ಬರಾದ ಡೇವಿಡ್ ಬೆಕ್ಹ್ಯಾಮ್ ಕೂಡ ಪಂದ್ಯವನ್ನು ವೀಕ್ಷಿಸಿದ್ದರು.
ಇದನ್ನೂ ಓದಿ: Virat kohli: ಕೊಹ್ಲಿಗೆ 100 ಶತಕಗಳ ಸಚಿನ್ ದಾಖಲೆ ಮುರಿಯಲು ಸಾಧ್ಯವೆ? ಲೆಕ್ಕಾಚಾರ ಹೀಗಿದೆ!
ಟೀಮ್ ಇಂಡಿಯಾದ ಗೆಲುವಿನ ಬಳಿಕ ಇಂಗ್ಲೆಂಡ್ನ ಮಾಜಿ ಅಂತಾರಾಷ್ಟ್ರೀಯ ಆಟಗಾರ ಟೀಮ್ ಇಂಡಿಯಾ ನಾಯಕ ರೋಹಿತ್ ಅವರನ್ನು ಭೇಟಿಯಾಗಿ ಸಿಹಿ ಮತ್ತು ಜರ್ಸಿಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಮುಂಬರುವ ಫೈನಲ್ ಪಂದ್ಯಕ್ಕೆ ಬ್ಯಾಟರ್ಗೆ ಶುಭ ಹಾರೈಸಿದರು. “ಫೈನಲ್ನಲ್ಲಿ ಆಡುವುದಕ್ಕೆ ಶುಭ ಹಾರೈಕೆಗಲು.ಭಾರತ ತಂಡದ ನಾಯಕನನ್ನು ಭೇಟಿಯಾಗಲು ಸಂತೋಷವಾಗಿದೆ, ಎಂದು ಬೆಕ್ಹಮ್ ಸೋಶಿಯಲ್ ಮೀಡಿಯಾ ಫೋಸ್ಟ್ ಮಾಡಿದ್ದಾರೆ.
ಒಂದೂ ಪಂದ್ಯ ಸೋಲದೆ ಫೈನಲ್ಗೆ
ರೋಹಿತ್ ನಾಯಕತ್ವದ ಟೀಮ್ ಇಂಡಿಯಾ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಸೋಲದೆ ಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 50 ಓವರ್ ಗಳಲ್ಲಿ 397 ರನ್ ಗಳಿಸಿದ್ದು, ನ್ಯೂಜಿಲೆಂಡ್ ಬ್ಯಾಟಿಂಗ್ ಘಟಕವನ್ನು 327 ರನ್ ಗಳಿಗೆ ಆಲೌಟ್ ಮಾಡಿದೆ.
ರೋಹಿತ್ ಮತ್ತು ಶುಭ್ಮನ್ ಗಿಲ್ ಅವರು ವಿಶ್ವಕಪ್ನ ಮಾಡಿದಂತೆಯೇ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು, ಆರಂಭಿಕ ವಿಕೆಟ್ಗೆ 71 ರನ್ಗಳ ಜೊತೆಯಾಟವನ್ನು ನೀಡಿದರು. ನಾಯಕ 29 ಎಸೆತಗಳಲ್ಲಿ 47 ರನ್ ಗಳಿಸಿದರು. ಅಂತಿಮ ನಾಲ್ಕು ಮುಖಾಮುಖಿಯಲ್ಲಿ ಗಿಲ್ ತಮ್ಮ ಹೆಸರಿಗೆ 80 ರನ್ ಸೇರಿಸಿದರು.