Site icon Vistara News

Prithvi Shaw: ಕೌಂಟಿ ಕ್ರಿಕೆಟ್​ನಲ್ಲಿ ವಿಸ್ಫೋಟಕ ದ್ವಿಶತಕ ಬಾರಿಸಿದ ಪೃಥ್ವಿ ಶಾ; ಆಂಗ್ಲರ ಹಲವು ದಾಖಲೆ ಪತನ

Prithvi Shaw hits double hundred

ಲಂಡನ್​: ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಭಾರತ ತಂಡದದಿಂದ ಹೊರಗುಳಿದಿರುವ ಪೃಥ್ವಿ ಶಾ(Prithvi Shaw) ಅವರು ಕೌಂಟಿ(county cricket 2023) ಕ್ರಿಕೆಟ್​ನಲ್ಲಿ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಈ ಟೂರ್ನಿಯ ಇತಿಹಾಸದಲ್ಲಿ ದ್ವಿಶತಕ(Prithvi Shaw hits double hundred) ಸಿಡಿಸಿದ ಕೇವಲ ಮೂರನೇ ಕ್ರಿಕೆಟಿಗ ಎಂಬ ದಾಖಲೆಗೆ ಶಾ ಪಾತ್ರರಾಗಿದ್ದಾರೆ.

ಒಲಿ ರಾಬಿನ್ಸನ್ ದಾಖಲೆ ಪತನ

ಇಂಗ್ಲೆಂಡ್‌ನ ದೇಶೀಯ ಲಿಸ್ಟ್ ಎ ಕ್ರಿಕೆಟ್ ಟೂರ್ನಿಯಾದ ಕೌಂಟಿಯಲ್ಲಿ ವೈಯಕ್ತಿಕ ಅತ್ಯಧಿಕ ಮೊತ್ತ ಪೇರಿಸಿದ ದಾಖಲೆ ಒಲಿ ರಾಬಿನ್ಸನ್(ollie robinson)​ ಹೆಸರಿನಲ್ಲಿತ್ತು. ಅವರು ಈ ದಾಖಲೆಯನ್ನು ಕಳೆದ ವರ್ಷ ನಿರ್ಮಿಸಿದ್ದರು. ಇದೀಗ ಒಂದೇ ವರ್ಷದ ಅಂತರದಲ್ಲಿ ಈ ದಾಖಲೆಯನ್ನು ಭಾರತೀಯ ಕ್ರಿಕೆಟ ಮುರಿದ್ದದು ವಿಶೇಷ. ರಾಬಿನ್ಸನ್​ 206 ರನ್‌ ಬಾರಿಸಿದ್ದರು. ಇದೀಗ ಪೃಥ್ವಿ ಶಾ 244 ರನ್​ ಬಾರಿಸಿ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ.

ಮೊದಲ ಭಾರತೀಯ

ಕೌಂಟಿ ಕ್ರಿಕೆಟ್​ನಲ್ಲಿ ಹಲವು ಭಾರತೀಯ ಆಟಗಾರರು ಆಡಿದ್ದಾರೆ. ಸಚಿನ್​ ತೆಂಡೂಲ್ಕರ್​, ರಾಹುಲ್ ದ್ರಾವಿಡ್ ಸೇರಿ ಅನೇಕ ಭಾರತೀಯ ದಿಗ್ಗಜ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಆಡಿದ್ದಾರೆ. ಆದರೆ ಯಾರಿಂದಲೂ ವೇಗದ ದ್ವಿಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಈ ದಾಖಲೆಯನ್ನು 23 ವರ್ಷದ ಪೃಥ್ವಿ ಶಾ ನಿರ್ಮಿಸಿದ್ದಾರೆ. ಕೇವಲ 129 ಎಸೆತಗಳಲ್ಲಿ 200 ರನ್​ ಪೂರೈಸಿದ ಅವರು ಬಳಿಕವೂ ಸಿಡಿಲಬ್ಬರ ಬ್ಯಾಟಿಂಗ್​ ಪ್ರದರ್ಶಿಸುವ ಮೂಲಕ 153 ಎಸೆತಗಳಿಂದ 244 ರನ್​ ಬಾರಿಸಿದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 28 ಬೌಂಡರಿ ಮತ್ತು 11 ಸಿಕ್ಸರ್​ ಸಿಡಿಯಿತು.​

ಟೀಕೆಗೆ ತಕ್ಕ ಉತ್ತರ

ಈ ಬಾರಿಯ ಐಪಿಎಲ್​ನಲ್ಲಿ ಸತತ ಶೂನ್ಯ ಸಾಧನೆ ಮಾಡಿದ ಪೃಥ್ವಿ ಶಾ ವಿರುದ್ಧ ಅನೇಕ ಟೀಕೆಗಳು ವ್ಯಕ್ತವಾಗಿದ್ದವು. ಅವರ ಕ್ರಿಕೆಟ್​ ಬಾಳ್ವೆ ಮುಗಿಯಿತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಪೃಥ್ವಿ ಶಾ ಅವರು ಕೌಂಟಿ ಕ್ರಿಕೆಟ್​ ಆಡಲು ಮುಂದಾದರು. ಈ ವೇಳೆಯೂ ಅನೇಕರು ಅವರನ್ನು ವ್ಯಂಗ್ಯವಾಡಿದ್ದರು. ಮತ್ತೊಂದು ಸುತ್ತಿನ ಶೂನ್ಯ ಸಂಪಾದನೆಗೆ ಇಂಗ್ಲೆಂಡ್​ಗೆ ತೆರಳಿದ್ದಾರೆ ಎಂದಿ ಕಮೆಂಟ್​ ಮಾಡಿದ್ದರು. ಇದೀಗ ತಮ್ಮ ವಿಶ್ವ ದಾಖಲೆಯ ದ್ವಿಶತಕದೊಂದಿ ತಕ್ಕ ಉತ್ತರ ನೀಡಿದ್ದಾರೆ.

ಇದನ್ನೂ ಓದಿ Prithvi Shaw: ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ ಪೃಥ್ವಿ ಶಾ

ಸಪ್ನಾ ಗಿಲ್​​ಗೆ ಕಿರುಕುಳ ಪ್ರಕರಣದಲ್ಲಿ ನಿರಾಳ

ಇದೇ ವರ್ಷಾರಂಭದಲ್ಲಿ ಮುಂಬಯಿಯ ಉಪನಗರ ಹೋಟೆಲ್​​ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವಿಚಾರವಾಗಿ ಸೋಶಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​​ ಸಪ್ನಾ ಗಿಲ್ ಮತ್ತು ಅವರ ಸ್ನೇಹಿತರು ಪೃಥ್ವಿ ಶಾ ಕಾರಿನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಪ್ನಾ ಗಿಲ್ ಅವರ ಬಂಧನವಾಗಿತ್ತು. ಜಾಮೀನು ಪಡೆದ ನಂತರ ಗಿಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪೊಲೀಸರು ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸದ ಕಾರಣ ಅವಳು ನಂತರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ದೂರು ಸುಳ್ಳು ಮತ್ತು ಆಧಾರರಹಿತ ಎಂದು ಮುಂಬಯಿ ಪೊಲೀಸರು (Mumbai Police) ನ್ಯಾಯಾಲಯಕ್ಕೆ ತಿಳಿಸಿದ ಕಾರಣ ಶಾ ನಿರಾಳರಾಗಿದ್ದರು.

ಎಫ್ಐಆರ್ ಕೂಡ ದಾಖಲಾಗಿತ್ತು

ಫೆಬ್ರವರಿಯಲ್ಲಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಯಾದವ್ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 509 (ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದ ಮಾತು, ಸನ್ನೆ ಅಥವಾ ಕೃತ್ಯ) ಮತ್ತು 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಸಪ್ನಾ ಗಿಲ್ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ನೀಡಿದ್ದರು.

Exit mobile version