Site icon Vistara News

Prithvi Shaw : ಐಪಿಎಲ್ ನಡುವೆಯೇ ಜೈಲು ಸೇರಲಿದ್ದಾರಾ ಪೃಥ್ವಿ ಶಾ? ಮುಂಬಯಿ ಕೋರ್ಟ್​ನಲ್ಲಿದೆ ಈ ಕೇಸ್​

Sapna GIll

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆರಂಭಿ ಬ್ಯಾಟರ್​ ಪೃಥ್ವಿ ಶಾ (Prithvi Shaw) ಮತ್ತು ಸಪ್ನಾ ಗಿಲ್ (Sapna GIll) ಪ್ರಕರಣವು ಹೊಸ ತಿರುವುದ ಪಡೆದುಕೊಂಡಿದ್ದು, ಸ್ಥಳೀಯ ಮುಂಬೈ ನ್ಯಾಯಾಲಯವು ಈ ಬಗ್ಗೆ ತನಿಖೆ ನಡೆಸಿ ಜೂನ್ 19 ರೊಳಗೆ ವರದಿ ಸಲ್ಲಿಸುವಂತೆ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ. ಸೋಶಿಯಲ್​ ಮೀಡಿಯಾ ಇನ್​ಫ್ಲ್ಯುಯೆನ್ಸರ್​ ಸಪ್ನಾ ಗಿಲ್, ಪೃಥ್ವಿ ಶಾ ವಿರುದ್ಧ ಲೈಂಗಿಕ ಕಿರುಕುಳದ ಕೇಸನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಇದೀಗ ನ್ಯಾಯಾಲಯ ತನಿಖೆಗೆ ಆದೇಶ ಹೊರಡಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಮುಂಬೈ ನಗರದ ಅಂಧೇರಿ ಪ್ರದೇಶದ ಪಬ್​ನಲ್ಲಿ ಸಪ್ನಾ ಗಿಲ್ ಮತ್ತು ಪೃಥ್ವಿ ಶಾ ನಡುವಿನ ಜಗಳಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಬೇಸ್ ಬಾಲ್ ಬ್ಯಾಟ್ ನಿಂದ ಶಾ ಅವರ ಕಾರಿನ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಸಪ್ನಾ ಗಿಲ್ ಅವರನ್ನು ಬಂಧಿಸಲಾಗಿತ್ತು. ನಂತರ, ಅವರು ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರನ ವಿರುದ್ಧ ಆಕೆ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದರು.

ಶಾ ಪ್ರಸ್ತುತ ಐಪಿಎಲ್ 2024 ರಲ್ಲಿ ನಿರತರಾಗಿದ್ದಾರೆ. ಅವರು ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​​ ತಂಡದ ಸದಸ್ಯರಾಗಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಐಪಿಎಲ್ 2024 ರಲ್ಲಿ ಡಿಸಿ ಪರ 3 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಆಡಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 42 ರನ್ ಗಳಿಸಿದರು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಡಿಸಿ ಓಪನರ್ 10 ರನ್​ಗಳಿಗೆ ಔಟಾಗಿದ್ದರು.

ಕಿರುಕುಳ ದೂರು ದಾಖಲಿಸಿದ ಸಪ್ನಾ ಗಿಲ್

ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಯಾದವ್ ವಿರುದ್ಧ ಸಪ್ನಾ ಗಿಲ್ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 509 (ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದ ಪದ, ಸನ್ನೆ ಅಥವಾ ಕೃತ್ಯ) ಮತ್ತು 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಅಡಿಯಲ್ಲಿ ಅವರು ಎಫ್ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: Mayank Yadav : ನಾನ್​ ವೆಜ್​ ತ್ಯಜಿಸಿದ ಅತಿ ವೇಗದ ಬೌಲರ್​ ಮಯಾಂಕ್​; ಹಿನ್ನೆಲೆ ಬಹಿರಂಗ ಮಾಡಿದ ತಾಯಿ

ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಸಿ.ಟೇಡೆ ಅವರು ಈ ಬಗ್ಗೆ ತನಿಖೆ ನಡೆಸಿ ಜೂನ್ 19 ರೊಳಗೆ ವರದಿ ಸಲ್ಲಿಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಮುಂಬೈ ಪೊಲೀಸರು ಹಿಂದಿನ ತನಿಖೆಯಲ್ಲಿ ಶಾ ಅವರನ್ನು ಆರೋಪದಿಂದ ಮುಕ್ತಗೊಳಿಸಿದ್ದರು.

ಸಪ್ನಾ ಗಿಲ್ ಮತ್ತು ಅವರ ಸ್ನೇಹಿತ ಶೋಬಿತ್ ಠಾಕೂರ್ ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರು. ಅವರು ಮುಂಬೈ ಕ್ರಿಕೆಟಿಗನ ಕಾರಿನ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಅವಳು ಕಾರಿನ ವಿಂಡ್ ಸ್ಕ್ರೀನ್ ಅನ್ನು ಸಹ ಮುರಿದಿದ್ದರು. ಕ್ರಿಕೆಟಿಗನ ದೂರಿನ ಮೇರೆಗೆ ಮುಂಬೈ ಪೊಲೀಸರು ಸಪ್ನಾ ಗಿಲ್ ಮತ್ತು ಶೋಬಿತ್ ಠಾಕೂರ್ ಅವರನ್ನು ಬಂಧಿಸಿದ್ದಾರೆ.

ಹಿಂದಿನ ತನಿಖೆಯಲ್ಲಿ ಕಿರುಕುಳದ ಆರೋಪಗಳು ಸುಳ್ಳೆಂದು ಸಾಬೀತಾಗಿತ್ತು


ಶಾ ವಿರುದ್ಧದ ಗಿಲ್ ಅವರ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದರು. ಪೊಲೀಸರು ತಮ್ಮ ಹಿಂದಿನ ವರದಿಯಲ್ಲಿ, ಅಂಧೇರಿ ಹೋಟೆಲ್​​ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವೀಡಿಯೊದಲ್ಲಿ, ಸಪ್ನಾ ಗಿಲ್ ಮತ್ತು ಶೋಬಿತ್ ಠಾಕೂರ್ ಕುಡಿದು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಠಾಕೂರ್ ಮತ್ತು ಗಿಲ್ ಪೃಥ್ವಿ ಶಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಪೃಥ್ವಿ ಶಾ ಅವರ ವಿನಂತಿ ನಿರಾಕರಿಸಿದ್ದರು.

ಸಪ್ನಾ ಗಿಲ್​ಗೆ ಯಾರೂ ಕಿರುಕುಳ ನೀಡಿದ ಯಾವುದೇ ಸಾಕ್ಷಿಗಳಿಲ್ಲ. ಘಟನೆಯ ಸಮಯದಲ್ಲಿ ಹೋಟೆಲ್​ನಲ್ಲಿದ್ದ ಪ್ರತ್ಯಕ್ಷದರ್ಶಿಗಳೊಂದಿಗೆ ಪೊಲೀಸರು ಮಾತನಾಡಿದ್ದಾರೆ. ಅವರು ಸಹ ಯಾವುದೇ ಕಿರುಕುಳಕ್ಕೆ ಸಾಕ್ಷಿಯಾಗುವುದನ್ನು ಒಪ್ಪಿಲ್ಲ. ಪೊಲೀಸರು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಟವರ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಪ್ನಾ ಗಿಲ್ ಮತ್ತು ಶೋಬಿತ್ ಠಾಕೂರ್ ಶಾ ಅವರ ಕಾರನ್ನು ಹಿಂಬಾಲಿಸುವ ದೃಶ್ಯಾವಳಿಗಳು ಕಂಬು ಬಂದಿತ್ತು.

ಘಟನೆಯ ಸಮಯದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಪ್ರಕಾರ, ಸಪ್ನಾ ಗಿಲ್ ಮತ್ತು ಬಳಗ ಪೃಥ್ವಿ ಶಾ ಅವರ ಕಾರಿನ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ದಾಳಿ ಮಾಡಿದ್ದನ್ನು ನೋಡಿದ್ದರು. ಪೊಲೀಸರನ್ನು ನೋಡಿದ ನಂತರ ಅವರ ಸ್ನೇಹಿತ ಶೋಬಿತ್ ಗಿಲ್ ಕೈಯಿಂದ ಗಿಲ್​ ಬೇಸ್ ಬಾಲ್ ಬ್ಯಾಟ್ ಅನ್ನು ತೆಗೆದುಕೊಂಡಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

Exit mobile version