ನವ ದೆಹಲಿ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನ (World Cup 2023) 13 ನೇ ಆವೃತ್ತಿಯ ಬಹುಮಾನ ಮೊತ್ತವನ್ನು ಐಸಿಸಿ ಪ್ರಕಟಿಸಿದೆ. 10 ತಂಡಗಳ ಪಂದ್ಯಾವಳಿಯ ವಿಜೇತರು ಒಟ್ಟು 33,18,30,800 ರೂಪಾಯಿ (4 ಮಿಲಿಯನ್ ಯುಎಸ್ ಡಾಲರ್) ಪಡೆಯಲಿದ್ದಾರೆ. ಜೊತೆಗೆ ಟ್ರೋಫಿಯನ್ನು ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ.
ರನ್ನರ್ ಅಪ್ ತಂಡಕ್ಕೆ 16,59,15,700 ರೂಪಾಯಿ ಬಹುಮಾನ (2 ಮಿಲಿಯನ್ ಅಮೆರಿಕನ್ ಡಾಲರ್) ಹಾಗೂ ಸೆಮಿಫೈನಲ್ ನಲ್ಲಿ ಸೋತವರಿಗೆ ತಲಾ 6,63,35,600 ರೂಪಾಯಿ( 800,000 ಅಮೆರಿಕನ್ ಡಾಲರ್) ಬಹುಮಾನ ಸಿಗಲಿದೆ. ಅಕ್ಟೋಬರ್ 5ರಿಂದ ಆರಂಭಗೊಳ್ಳುವ ವಿಶ್ವ ಕಪ್ 10 ಸ್ಥಳಗಳಲ್ಲಿ 48 ಪಂದ್ಯಗಳು ನಡೆಯಲಿವೆ.
ಅತಿದೊಡ್ಡ ಕ್ರಿಕೆಟ್ ವಿಶ್ವಕಪ್ನ ಈ ಆವೃತ್ತಿಯ ಪ್ರತಿ ಲೀಗ್ ಪಂದ್ಯವನ್ನು ಗೆದ್ದಿರುವ ತಂಡಗಳು ಬಹುಮಾನ ನಗದು ಬಹುಮಾನ ಪಡೆಯಲಿದೆ. ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಒಮ್ಮೆ ಪರಸ್ಪರ ಆಡಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಇದನ್ನೂ ಓದಿ : World Cup 2023 : ನೆದರ್ಲೆಂಡ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಆಯ್ಕೆಗೊಂಡ ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಬಾಯ್!
ಗುಂಪು ಹಂತದಲ್ಲಿ ಪ್ರತಿ ಪಂದ್ಯದ ವಿಜೇತರಿಗೆ 33,16,500 ರೂಪಾಯಿ (40,000 ಯುಎಸ್ ಡಾಲರ್) ಹಾಗೂ ಸೆಮಿಫೈನಲ್ಗೆ ಅರ್ಹತೆ ಪಡೆಯದ ಆರು ತಂಡಗಳು 82,91,250 ರೂಪಾಯಿ (100,000 ಯುಎಸ್ ಡಾಲರ್) ಬಹುಮಾನ ಪಡೆಯಲಿದೆ.
ಬಹುಮಾನದ ಹಣದ ಹಂಚಿಕೆಯ ವಿಭಜನೆ ಈ ಕೆಳಗಿನಂತಿದೆ:
- ವಿಜೇತರು (1) 33,18,30,800 ರೂಪಾಯಿ
- ರನ್ನರ್ ಅಪ್ (1) 16,59,15,700 ರೂಪಾಯಿ
- ಸೆಮಿಫೈನಲ್ ನಲ್ಲಿ ಸೋತವರು (2) 6,63,35,600 ರೂಪಾಯಿ (ಒಟ್ಟು 132,671,200 ರೂಪಾಯಿ)
- ಗುಂಪು ಹಂತದಲ್ಲಿ ಹೊರ ಹೋಗುವ ತಂಡಗಳಿಗೆ(6) 82,91,250 ರೂಪಾಯಿ (ಒಟ್ಟು 49,747,500)
- ಪ್ರತಿ ಗುಂಪು ಹಂತದ ಪಂದ್ಯದ ವಿಜೇತರು (45) 33,16,500 (ಒಟ್ಟು 1,800,000 ರೂಪಾಯಿ)