Site icon Vistara News

Pro Kabaddi League | ಪ್ರೊ ಕಬಡ್ಡಿ 9ನೇ ಆವೃತ್ತಿಯ ಅಕ್ಟೋಬರ್‌ 7ರಿಂದ ಆರಂಭ

pro kabaddi league

ಮುಂಬಯಿ: ವಿವೊ ಪ್ರೋ ಕಬಡ್ಡಿ ಲೀಗ್‌ ಸಂಘಟಕರಾದ ಮಷಾಲ್‌ ಸ್ಪೋರ್ಟ್ಸ್‌ 9ನೇ ಆವೃತ್ತಿಯ ಆರಂಭದ ದಿನಾಂಕವನ್ನು ಶುಕ್ರವಾರ ಪ್ರಕಟಿಸಿದೆ. ಅಕ್ಟೋಬರ್‌ 7ರಂದು ಆರಂಭಗೊಳ್ಳಲಿರುವ ಲೀಗ್‌ ಡಿಸೆಂಬರ್‌ ಮಧ್ಯದವರೆಗೆ ನಡೆಯಲಿದೆ. ಲೀಗ್‌ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ.

ವಿವೋ ಪ್ರೋ ಕಬಡ್ಡಿ ಲೀಗ್‌ನ ಕಮಿಷನರ್‌, ಮಷಾಲ್‌ ಸ್ಪೋರ್ಟ್ಟ್‌ ಲೀಗ್‌ನ ಮುಖ್ಯಸ್ಥರಾದ ಅನೂಪ್‌ ಗೋಸ್ವಾಮಿ ಮಾತನಾಡಿ, “ಭಾರತದ ಮಣ್ಣಿನ ಕ್ರೀಡೆಯಾಗಿರುವ ಕಬಡ್ಡಿಯನ್ನು, ಸಮಕಾಲೀನ ಜಗತ್ತಿನ ಮತ್ತು ಮುಂಬರುವ ಪೀಳಿಗೆಗೆ ತಲುಪಿಸುವಲ್ಲಿ ಮಷಾಲ್‌ ಸ್ಪೋರ್ಟ್ಸ್‌, ತನ್ನದೇ ಆದ ಯೋಜನೆ ಆರಂಭಿಸಿದೆ. ಈ ಗುರಿಯನ್ನು ತಲುಪುವಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿದ್ದೇವೆ. ಹಿಂದಿನ ಆವೃತ್ತಿಯನ್ನು ಬಯೋ ಬಬಲ್‌ನಲ್ಲಿ ನಡೆಸುವ ಮೂಲಕ ನಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ್ದೇವೆ. ಈ ಬಾರಿ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿದೆ,” ಎಂದು ಹೇಳಿದರು.

“ವಿವೋ ಪಿಕೆಎಲ್‌ 9ನೇ ಋತುವಿನ ವಿವರ ಮತ್ತು ವೇಳಾಪಟ್ಟಿಯನ್ನು ಮುಂದಿನ ವಾರದಲ್ಲಿ ಘೋಷಿಲಾಗುವುದು,” ಎಂದು ಹೇಳಿದರು.

Exit mobile version