Site icon Vistara News

Pro Kabaddi: ಬೆಂಗಾಲ್​ ವಾರಿಯರ್ಸ್ ಆರ್ಭಟಕ್ಕೆ ಪಲ್ಟಿಯಾದ ಪಾಟ್ನಾ ಪೈರೆಟ್ಸ್‌

Bengal Warriors vs Patna Pirates

ಬೆಂಗಳೂರು: ಏಕಪಕ್ಷೀಯವಾಗಿ ಸಾಗಿದ ಪ್ರೊ ಕಬಡ್ಡಿ(Pro Kabaddi) ಲೀಗ್​ನ ಮಂಗಳವಾರದ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್(Bengal Warriors)​ ತಂಡ ಪಾಟ್ನಾ ಪೈರೆಟ್ಸ್​(Patna Pirates) ವಿರುದ್ಧ 18 ಅಂಕದ ಅಂತದಿಂದ ಭರ್ಜರಿ ಗೆಲುವು ಸಾಧಿಸಿದೆ. ಆರಂದಿಂದಲೇ ಆಕ್ರಮಣಕಾರಿಯಾಗಿ ಬೆಂಗಾಲ್ ಪಂದ್ಯದ ಮುಕ್ತಾಯಕ ವರೆಗೆಗೂ ಇದೇ ಜೋಶ್​ ತೋರಿತು.

ಸಂಘಟಿತ ಪ್ರದರ್ಶನ

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಸಂಘಟಿತ ಪ್ರದರ್ಶನ ತೋರಿತು. ಮೊದಲಾರ್ಧದಲ್ಲೇ 11 (27-16) ಅಂಕದ ಮುನ್ನಡೆ ಸಾಧಿಸಿ ಪಾಟ್ನಾ ಮೇಲೆ ಒತ್ತಡ ಹೇರಿತು. ಮಣಿಂದರ್​ ಸಿಂಗ್​ (8) , ಶ್ರೀಕಾಂತ್​(7) ಮತ್ತು ನಿತೀನ್​ ಕುಮಾರ್​(6) ಅಂಕ ಗಳಿಸಿದ್ದರು. ಇದೇ ಜೋಶ್​ ದ್ವಿತೀಯಾರ್ಧದ ಆಟದಲ್ಲಿಯೂ ತೋರ್ಪಡಿಸಿದರು. ಜಿದ್ದಿಗೆ ಬಿದ್ದವರಂತೆ ಆಡಿದ ಈ ಮೂವರು ಆಟಗಾರು ಅಂಕಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಜತೆಗೆ ಸೂಪರ್​ 10 ರೈಡ್​ ಅಂಕ ಗಳಿಸಿದ ಕೀರ್ತಿಗೂ ಪಾತ್ರರಾದರು.

ಮೊದಲಾರ್ಧದ ಮಂಕಾಗಿದ್ದ ಪಾಟ್ನಾ ಆಟಗಾರರು ದ್ವಿತೀಯಾರ್ಧದಲ್ಲಿ ಆಡದ ಒಂದು ಹಂತದಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರಿದರು. ಆದರೆ ಆರಂಭದಲ್ಲೇ ಭಾರಿ ಹಿನ್ನಡೆ ಕಂಡ ಕಾರಣ ಈ ಅಂಕವನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಸಚಿನ್​ ಕುಮಾರ್​ ಮತ್ತು ಸುಧಾಕರ್​ ತಲಾ 14 ಅಂಕ ಗಳಿಸಿದರು. ಡಿಫೆನ್ಸ್​ನಲ್ಲಿ ವಿಫಲವಾದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಬೆಂಗಾಲ್​ ಪರ ಅನುಭವಿ ಆಟಗಾರ ಮಣಿಂದರ್​ ಸಿಂಗ್​ ಅವರು 16 ಬಾರಿ ಎದುರಾಳಿ ಕೋಟೆಗೆ ನುಗ್ಗಿ 15 ಅಂಕ ಪಡೆದರೆ, ನಿತೀನ್​ ಕುಮಾರ್​ ಅವರು ಕೇವಲ 11 ರೇಡಿಂಗ್​ ನಡೆಸಿ 14 ಅಂಕ ಕಸಿದರು. ಮತೋರ್ವ ಆಟಗಾರ ಶ್ರೀಕಾಂತ್​ 11 ಬಾರಿ ರೇಡಿಂಗ್​ ನಡೆಸಿ 12 ಅಂಕ ಕಲೆ ಹಾಕಿದರು. ಈ ಮೂವರ ರೇಡಿಂಗ್​ ಆರ್ಭಟ ಪಂದ್ಯದ ಪ್ರಧಾನ ಆಕರ್ಷಣೆಯಾಗಿತ್ತು. ಉಳಿದಂತ ಡಿಫೆಂಡಿಂಗ್​ನಲ್ಲಿ ಶುಭಂ 4 ಅಂಕ ಗಳಿಸಿದರು. ಅಂತಿಮವಾಗಿ ಪಂದ್ಯ 60-42 ಅಂಕಗಳಿಂದ ಕೊನೆಗೊಂಡಿತು.

ಇದನ್ನೂ ಓದಿ Pro Kabaddi: 5ನೇ ಪ್ರಯತ್ನದಲ್ಲಿ ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್​

Exit mobile version