Site icon Vistara News

Pro Kabaddi: ಹಾಲಿ ಚಾಂಪಿಯನ್​ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್

Bengaluru Bulls

ಬೆಂಗಳೂರು: ಅತ್ಯಂತ ರೋಚವಾಗಿ ಸಾಗಿದ, ಕಬಡ್ಡಿ ಅಭಿಮಾನಿಗಳನ್ನು ಒಂದು ಕ್ಷಣ ಉಸಿರು ಬಿಗಿ ಹಿಡಿಯುವಂತೆ ಮಾಡಿದ, ಹಾಲಿ ಚಾಂಪಿಯನ್​ ಜೈಪುರ್​ ಪಿಂಕ್​ ಪ್ಯಾಂಥರ್ಸ್ ಎದುರಿನ ಪ್ರೊ ಕಬಡ್ಡಿ ಪಂದ್ಯದಲ್ಲಿ​ ಬೆಂಗಳೂರು ಬುಲ್ಸ್​ ಕೊನೆಗೂ ಗೆಲುವು ಸಾಧಿಸುವಲ್ಲಿ ಯಶಸ್ಸು ಕಂಡಿದೆ. ಕೊನೆಯ ಕ್ಷಣದಲ್ಲಿ ಸುರ್ಜಿತ್​ ಸಿಂಗ್​ ಮಾಡಿದ ಟ್ಯಾಕಲ್​ ಫಲವಾಗಿ ಬೆಂಗಳೂರು ಗೆಲುವಿನ ನಗೆ ಬೀರಿತು.

ತವರಿನ ಅಂಗಳವಾದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ದಿನದ ದ್ವಿತೀಯ ಪಂದ್ಯದಲ್ಲಿ ಇತ್ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಹೀಗಾಗಿ ಮೊದಲಾರ್ಧದ ಆಟ 17-14 ಅಂಕದಿಂದ ಕೊನೆಗೊಂಡಿತು. ಅಂತಿಮ ರೇಡ್​ ಮಾಡಿದ ವಿಕಾಸ್​ ಖಂಡೋಲಾ ಅವರನ್ನು ಹಿಡಿಯುವಾಗ ಜೆರ್ಸಿ ಎಳೆದ ಅಂಕುಶ್​ಗೆ ಅಂಪೈರ್​ ಗ್ರೀನ್​ ಕಾರ್ಡ್​ ನೀಡಿದರು. ಇದಕ್ಕೂ ಮುನ್ನವೇ ಅವರು ವಾರ್ನಿಂಗ್​ ಪಡೆಯುವ ಹಳದಿ ಕಾರ್ಡ್ ಕೂಡ ಪಡೆದಿದ್ದರು. ಗ್ರೀನ್​ ಕಾರ್ಡ್ ಪಡೆದ ಕಾರಣ ದ್ವಿತಿಯಾರ್ಧದಲ್ಲಿ ಆಡ ಆರಂಭವಾದಗ 2 ನಿಮಿಷಗಳ ಕಾಲ ಕೋರ್ಟ್​ನಿಂದ ಹೊರಗುಳಿದರು. ಮೊದಲ ಅವಧಿಯ ಆಟದಲ್ಲಿ ಅವರು ಟ್ಯಾಕಲ್​ ಮೂಲಕ 4 ಅಂಕ ಗಳಿಸಿದ್ದರು.

ಬೆಂಗಳೂರು ಬುಲ್ಸ್​ ಪರ ಅಮೋಘ ರೇಡಿಂಗ್​ ನಡೆಸಿದ ಭರತ್​ ಕುಮಾರ್​ ಮತ್ತು ವಿಕಾಸ್​ ಖಂಡೋಲಾ ಮೊದಲ ಅವಧಿಯ ಆಟದಲ್ಲಿ ಕ್ರಮವಾಗಿ 6 ಮತ್ತು 3 ಅಂಕ ಕಲೆಹಾಕಿದ್ದರು. ದ್ವಿತೀಯಾರ್ಧದಲ್ಲಿಯೂ ಮಿಂಚಿನ ರೇಡಿಂಗ್​ ನಡೆಸಿ ಗಮನಸೆಳೆದರು. ಅವಧಿಯ ಆಟದಲ್ಲಿ ಪ್ಯಾಂಥರ್ಸ್​ ತಂಡವನ್ನು ಆಲ್​ಔಟ್​ ಮಾಡುವಲ್ಲಿ ಯಶಸ್ವಿಯಾದ ಬುಲ್ಸ್​ ಅಂಕದ ಮುನ್ನಡೆ ಸಾಧಿಸಿತು.

ಇದನ್ನೂ ಓದಿ Pro Kabaddi: ತಲೈವಾಸ್​ ಮುಂದೆ ತಲೆಬಾಗಿದ ಟೈಟಾನ್ಸ್

ಕೋಚ್​ ರಣಧೀರ್ ಸಿಂಗ್​ ಬುಲ್ಸ್​ ತಂಡಕ್ಕೆ ವಿರಾಮದ ವೇಳೆ ಹಲವು ತಂತ್ರಗಳನ್ನು ಹೇಳಿಕೊಟ್ಟರು. ಕೋಚ್​ ಮಾರ್ಗದರ್ಶನದಂತೆ ಎಚ್ಚರಿಕೆಯಿಂದ ಆಡಿದ ಬುಲ್ಸ್​ ಆಟಗಾರರು ಕೊನೆಗೂ ಹಾಲಿ ಚಾಂಪಿಯನರನ್ನು ಮಟ್ಟಹಾಕುವಲ್ಲಿ ಯಶಸ್ಸು ಸಾಧಿಸಿದರು. ಸತತವಾಗಿ ಟ್ಯಾಕಲ್​ ಮತ್ತು ರೇಡಿಂಗ್​ ಮೂಲಕ ಅಂಕಗಳಿಸಿ ನೆರದಿದ್ದ ತವರಿನ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಅಂತಿಮವಾಗಿ 32-30 ಅಂಕದ ಗೆಲುವು ಸಾಧಿಸಿತು.

ಮಿಂಚಿದ ಸುರ್ಜಿತ್​ ಸಿಂಗ್

ಕೊನೆಯ ರೇಡ್​ ಜೈಪುರ ತಂಡಕ್ಕೆ ಲಭಿಸಿತು. ಆಗ ಅಂಕ 31-30 ಇತ್ತು. ಬುಲ್ಸ್​ ಒಂದು ಅಂಕದ ಮುನ್ನಡೆಯಲ್ಲಿತ್ತು. ಆದರೆ ಜೈಪುರ ಈ ರೇಡ್​​ನಲ್ಲಿ 2 ಅಂಕ ಗಳಿಸಿದ್ದರೆ ಗೆಲ್ಲಬಹುದಿತ್ತು. ಒಂದು ಅಂಕ ಪಡೆದರೆ ಪಂದ್ಯವನ್ನು ಟೈ ಮಾಡುಬಹುದಿತ್ತು. ಎಲ್ಲ ಅವಕಾಶಗಳು ಜೈಪುರ ಪರವಾಗಿಯೇ ಇತ್ತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಸುರ್ಜಿತ್​ ಸಿಂಗ್ ಅವರು ಟ್ಯಾಕಲ್ ಮಾಡುವ ಮೂಲಕ ​ಬುಲ್ಸ್​ಗೆ ರೋಚಕ ಗೆಲುವು ತಂದುಕೊಟ್ಟರು. ಅಂತಿಮವಾಗಿ ಬುಲ್ಸ್​ ಪರ ವಿಕಾಸ್​ ಕಂಡೋಲಾ(11), ಭರತ್​(9) ಮತ್ತು ಸೌರಭ್​ ನಂದಲ್​(5) ಅಂಕಗಳಿಸಿದರು.

ತಲೈವಾಸ್​ಗೆ ತಲೆಬಾಗಿದ ಟೈಟಾನ್ಸ್​

ದಿನ ಮೊದಲ ಪಂದ್ಯದಲ್ಲಿ ನರೇಂದರ್(10) ಅವರ ರೇಡಿಂಗ್​ ಮತ್ತು ಸಾಹಿಲ್ ಗುಲಿಯಾ(7) ಡಿಫೆಂಡಿಂಗ್​ ಆಟಕ್ಕೆ ತೆಡೆಯೊಡ್ಡುವಲ್ಲಿ ವಿಫಲವಾದ ತೆಲುಗು ಟೈಟಾನ್ಸ್​(Telugu Titans) ತಂಡ ತಮಿಳ್​ ತಲೈವಾಸ್​(Tamil Thalaivas) ವಿರುದ್ಧ 38-36 ಅಂಕಗಳಿಂದ ಸೋಲು ಕಂಡಿದೆ. ಈ ಮೂಲಕ ಗೆಲುವಿನ ಖಾತೆ ತರೆಯುವ ಇರಾದೆಯೊಂದಿಗೆ ಆಡಿಲಿಳಿದ ತೆಲುಗು ತಂಡಕ್ಕೆ ಮತ್ತೆ ನಿರಾಸೆಯಾಗಿದೆ.

ಸ್ಟಾರ್​ ಆಟಗಾರ ಪವನ್​ ಸೆಹ್ರಾವತ್​ ಅವರು ತೆಲುಗು ಟೈಟಾನ್ಸ್ ತಂಡದಲ್ಲಿದ್ದರೂ ಅವರು ಈ ಹಿಂದೆ ಬುಲ್ಸ್​ ತಂಡದಲ್ಲಿ ಮಾಡುತ್ತಿದ್ದ ರೇಡಿಂಗ್​ ಕಮಾಲ್​ ತೋರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ಪಂದ್ಯದಲ್ಲಿ 17 ರೇಡ್​ ಮಾಡಿ ಗಳಿಸಿದ್ದು ಕೇವಲ 7 ಅಂಕ ಉಳಿದ 10 ರೇಡ್​ಗಳು ಅಂಕ ರಹಿತವಾಗಿತ್ತು.

ನರೇಂದರ್ ಆರ್ಭಟ

ತಮಿಳ್​ ಪರ ನರೇಂದರ್ ಒಟ್ಟು 16 ಬಾರಿ ಎದುರಾಳಿ ಕೋಟೆಗೆ ನುಗ್ಗಿ 10 ಅಂಕ ಕದಿಯುವಲ್ಲಿ ಯಶಸ್ಸು ಕಂಡರು. ಸಹ ಆಟಗಾರ ಸಾಹಿಲ್ ಗುಲಿಯಾ ಅಭಿಮನ್ಯುವಿಗೆ ರಚಿಸಿದ ಚಕ್ರವ್ಯೂಹದಂತೆ ಕೋಟೆಯನ್ನು ನಿರ್ಮಿಸಿ ಎದುರಾಳಿ ರೇಡರ್​ಗಳನ್ನು ಕಟ್ಟಿ ಹಾಕಿದರು. ಇವರ ಈ ಕೋಟೆಯನ್ನು ಕೆಡವಲು ಟೈಟಾನ್ಸ್​ಗೆ ಸಾಧ್ಯವಾಗಲೇ ಇಲ್ಲ. ಗುಲಿಯಾ 7 ಅಂಕ ಗಳಿಸಿದರು. ಉಳಿದಂತೆ ರೇಡರ್​ ಅಜಿಂಕ್ಯ ಪವಾರ್​, ಜತಿನ್ ಮತ್ತು ನಿತಿನ್​ ಸಿಂಗ್​​ ತಲಾ 4 ಅಂಕ ಕಲೆಹಾಕಿದರು. ತೆಲುಗು ಪರ ಪವನ್​ ಸೆಹ್ರಾವತ್​(7), ಮಿಲಾದ್(4), ಅಜಿತ್​(4), ರಾಬಿನ್ ಚೌಧರಿ(7), ಸಂಜೀವ್​(6) ಅಂಕ ಗಳಿಸಿದರು.

Exit mobile version