ಹೈದರಾಬಾದ್: 10ನೇ ಆವೃತ್ತಿ ಪ್ರೊ ಕಬಡ್ಡಿ(Pro Kabaddi) ಲೀಗ್‌ನ ಫೈನಲ್(Pro Kabaddi Final) ಪಂದ್ಯಕ್ಕೆ ವೇದಿಕೆ ಸಿದ್ದಗೊಂಡಿದೆ. ಮಾರ್ಚ್ 1ರಂದು ನಡೆಯುವ ಪ್ರಶಸ್ತಿ ಕಾಳಗದಲ್ಲಿ ಪುಣೇರಿ ಪಲ್ಟನ್(Puneri Paltan) ಮತ್ತು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಹರ್ಯಾಣ ಸ್ಟೀಲರ್ಸ್(Haryana Steelers) ಸೆಣಸಾಡಲಿದೆ.
ಬುಧವಾರ ಇಲ್ಲಿನ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಡಲಿಳಿದ ಪುಣೇರಿ ಪಲ್ಟನ್ ತಂಡ ಪಾಟ್ನಾ ಪೈರೇಟ್ಸ್(Patna Pirates) ತಂಡವನ್ನು 37-21 ಅಂಕಗಳ ಅಂತರದಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ದ್ವಿತೀಯ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 31-27 ಅಂತರದಿಂದ ಕೆಡವಿ ಹಾಕಿದ ಹರ್ಯಾಣ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿತು.
𝐒𝐭𝐞𝐞𝐥𝐞𝐫𝐬 𝐬𝐞𝐚𝐥 𝐭𝐡𝐞 𝐝𝐞𝐚𝐥 𝐢𝐧 𝐚 𝐠𝐚𝐦𝐞 𝐨𝐟 𝐟𝐢𝐧𝐞 𝐦𝐚𝐫𝐠𝐢𝐧𝐬 👊
— ProKabaddi (@ProKabaddi) February 28, 2024
They beat the defending champions to make it to their first-ever Final 🔥#ProKabaddiLeague #ProKabaddi #PKL #PKLSeason10 #HarSaansMeinKabaddi #PKLPlayoffs #JPPvHS #SemiFinal2 #SemiFinals pic.twitter.com/jSx8gZGXgt
3 ಬಾರಿ ಪ್ರಶಸ್ತಿ ಗೆದ್ದಿರುವ ಪಾಟ್ನಾ ಈ ಬಾರಿ 5ನೇ ಫೈನಲ್ ತವಕದಲ್ಲಿತ್ತು. ಆದರೆ ಸೆಮಿಯಲ್ಲಿ ಸೋತು ನಿರಾಸೆ ಅನುಭವಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮಿಫೈನಲ್ ತಲುಪಿದ್ದ ಪುಣೇರಿ ಪಲ್ಟನ್ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ನೀಡಿ ಗಮನ ಸೆಳೆಯಿತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಸೆಮಿ ತಲುಪಿದ್ದ ಜೈಪುರ ತಂಡ ಎಲಿಮಿನೇಟರ್ ಪಂದ್ಯವಾಡಿ ಬಂದಿದ್ದ ಹರ್ಯಾಣದ ಮುಂದೆ ತನ್ನ ಪ್ರರಾಕ್ರಮ ತೋರ್ಪಡಿಸುವಲ್ಲಿ ಎಡವಿತು. ಚೊಚ್ಚಲ ಫೈನಲ್ ಪ್ರವೇಶಿಸಿದ ಹರ್ಯಾಣ ಮೊದಲ ಕಪ್ಗಾಗಿ ತವಕಿಸುತ್ತಿದೆ.
ಜಿದ್ದಾಜಿದ್ದಿನಿಂದ ಪೈಪೋಟಿ ಕಂಡ ದ್ವಿತೀಯ ಸೆಮಿ ಪಂದ್ಯದಲ್ಲಿ ಮೊದಲ ಅವಧಿಯಲ್ಲಿ ಹರ್ಯಾಣ 18-13 ಅಂಕದ ಮುನ್ನಡೆ ಸಾಧಿಸಿತು. ದ್ವಿತಿಯಾರ್ಧದಲ್ಲಿ ತಿರುಗಿ ಬಿದ್ದ ಜೈಪುರ ಸತತವಾಗಿ ಅಂಕಗಳಿಸಿ ತಿರುಗೇಟು ನೀಡಿತು. ಆದರೆ ಅಂತಿಮ ಮೂರು ನಿಮಿಷದ ಆಟದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ಎಚ್ಚೆತ್ತುಕೊಂಡ ಹರ್ಯಾಣ ಆಟಗಾರರು ರಕ್ಷಣಾತ್ಮ ಆಟದ ಮೂಲಕ ತಮ್ಮ ಮುನ್ನಡೆಯನ್ನು ಪಂದ್ಯದ ಕೊನೆಯವರೆಗೂ ಕಾಪಾಡಿಕೊಂಡು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಹರ್ಯಾಣ ಪರ ರೇಡರ್ ವಿನಯ್ 11 ಅಂಕ ಕಲೆಹಾಕಿ ಗೆಲುವಿನ ಹೀರೊ ಎನಿಸಿಕೊಂಡರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ಪತಾರೆ(7 ಅಂಕ) ಉತ್ತಮ ಬೆಂಬಲ ನೀಡಿದರು. ಜೈಪುರ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಅರ್ಜುನ್ ದೇಸ್ವಾಲ್ 14 ಅಂಕ ಗಳಿಸಿದರು. ಆದರೆ ಇವರಿಗೆ ಸಹ ಆಟಗಾರರಿಂದ ಉತ್ತಮ ಸಾಥ್ ಸಿಗದ ಕಾರಣ ಇವರ ಈ ಆಟ ವ್ಯರ್ಥವಾಯಿತು.
ಇದನ್ನೂ ಓದಿ WPL 2024: ಬಲಿಷ್ಠ ಮುಂಬೈಗೆ ಸೋಲುಣಿಸಿ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್
Buckle up, it's time for 1️⃣ 𝐅𝐢𝐧𝐚𝐥 ride 🤩
— ProKabaddi (@ProKabaddi) February 28, 2024
Puneri Paltan take on Haryana Steelers in the 𝔾ℝ𝔸ℕ𝔻 𝔽𝕀ℕ𝔸𝕃𝔼 of #PKLSeason10 🏆#ProKabaddi #ProKabaddiLeague #HarSaansMeinKabaddi #PKLPlayoffs #PKL #PKL10 #Final #PUNvHS pic.twitter.com/rOiC7FNJWA
ಆಕ್ರಮಣಕಾರಿ ಆಟವಾಡಿದ ಪುಣೇರಿ
ಮೊದಲ ಸೆಮಿ ಪಂದ್ಯವಾದ ಪುಣೇರಿ ಪಲ್ಟನ್ ಮತ್ತು ಪಾಟ್ನಾ ಪೈರೇಟ್ಸ್ ನಡುವಣ ಪಂದ್ಯ ಮೊದಲಾರ್ಧದ ಅಂತಿಮ 8 ನಿಮಿಷದ ಆಟ ಬಾಕಿ ಇರುವವರೆಗೆ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿ ಕೇವಲ ಒಂದು ಅಂಕದ ಮುನ್ನಡೆಯೊಂದಿಗೆ ಆಟವಾಡಿತ್ತು. ಆದರೆ, ಇನ್ನೇನು ಮೊದಲ ಅವಧಿಯ ಆಟ ಮುಕ್ತಾಯಗೊಳ್ಳುತ್ತದೆ ಎನ್ನುವಷ್ಟರಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪುಣೇರಿ ತಂಡದ ಆಟಗಾರರು 20-11 ಅಂತರದ ಅಂಕ ಕಲೆ ಹಾಕಿ 9 ಅಂಕದ ಮುನ್ನಡೆ ಸಾಧಿಸಿದರು.
𝗟𝗮𝗶 𝗕𝗵𝗮𝗮𝗿𝗶 𝗽𝗲𝗿𝗳𝗼𝗿𝗺𝗮𝗻𝗰𝗲 𝘁𝗼 𝗺𝗮𝗸𝗲 𝗶𝘁 𝘁𝗼 𝗯𝗮𝗰𝗸-𝘁𝗼-𝗯𝗮𝗰𝗸 𝗳𝗶𝗻𝗮𝗹𝘀 😎🔥
— ProKabaddi (@ProKabaddi) February 28, 2024
Puneri Paltan enter the final with a win over Patna Pirates 💪#ProKabaddiLeague #ProKabaddi #PKL #HarSaansMeinKabaddi #PKLPlayoffs #PUNvPAT #SemiFinal1 #SemiFinals pic.twitter.com/Yvdnnn9juc
ದ್ವಿತಿಯಾರ್ಧದಲ್ಲಿಯೂ ಇದೇ ಲಯವನ್ನು ಮುಂದುವರಿಸಿದ ಪುಣೇರಿ ಆಟಗಾರರು ಸತತವಾಗಿ ಅಂಕ ಗಳಿಸಿ ಎದುರಾಳಿ ಆಟಗಾರರಿಗೆ ಇನ್ನಿಲ್ಲದ ಒತ್ತಡ ಹೇರಿದರು. ಆಲ್‌ರೌಂಡರ್ ಅಸ್ಲಾಂ ಮುಸ್ತಫಾ ತಮ್ಮ ಆಲ್‌ರೌಂಡರ್ ಶೋ ನಿಂದ 7 ಪಾಯಿಂಟ್ ಕಲೆ ಹಾಕಿದರು. ಇವರಿಗೆ ರೇಡರ್ ಪಂಕಜ್ ಮೋಹಿತ್(7) ಮತ್ತು ಮತೋರ್ವ ಆಲ್‌ರೌಂಡರ್ ಮೊಹಮ್ಮದ್ರೇಜಾ ಚಿಯಾನೆಹ್(5) ಅಂಕ ಗಳಿಸಿ ಉತ್ತಮ ಸಾಥ್ ನೀಡಿದರು.
ಉಳಿದಂತೆ ಮೋಹಿತ್ ಗೋಯತ್(4), ಅಭಿನೇಶ್ ನಾಡರಾಜನ್(3), ಸಂಕೇತ್ ಸಾವಂತ್(3) ಅಂಕ ಕಲೆ ಹಾಕಿ ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದರು. ಪಾಟ್ನಾ ಪರ ತಾರಾ ರೇಡರ್ಗಳಾದ ಸಚಿನ್(5) ಮತ್ತು ಮಂಜಿತ್(4) ಅವರು ಈ ಪಂದ್ಯದಲ್ಲಿ ವೈಫಲ್ಯ ಕಂಡದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.