Site icon Vistara News

Pro Kabaddi: ಹರ್ಯಾಣ ಸ್ಟೀಲರ್ಸ್ ಎದುರು ಗೆದ್ದು ಬೀಗಿದ ಪಾಟ್ನಾ ಪೈರೇಟ್ಸ್

Patna Pirates vs Haryana Steelers

ನೋಯ್ಡಾ: ರೇಡರ್​ಗಳ ಮತ್ತು ಡಿಫೆಂಡರ್​ಗಳ ಸಂಘಟಿತ ಆಟದ ಫಲವಾಗಿ ಪಾಟ್ನಾ ಪೈರೇಟ್ಸ್(Patna Pirates)​ ತಂಡ ಶುಕ್ರವಾರದ ಪ್ರೊ ಕಬಡ್ಡಿಯ(Pro Kabaddi) ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್(Haryana Steelers)​ ತಂಡವನ್ನು 46-33 ಅಂಕಗಳ ಅಂತರದಿಂದ ಮಣಿಸಿದೆ. ಸದ್ಯ ಪಾಟ್ನಾ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.

ಮಿಂಚಿದ ಮಂಜಿತ್​

ಪಾಟ್ನಾ ಪೈರೇಟ್ಸ್​ ತಂಡ ರೇಡರ್​ ಮಂಜಿತ್​ ಈ ಪಂದ್ಯದಲ್ಲಿ ಅತ್ಯಾಕರ್ಷಕ ರೇಡಿಂಗ್​ ನಡೆಸಿ ಗಮನ ಸೆಳೆದರು. ಒಟ್ಟು 17 ಬಾರಿ ಎದುರಾಳಿ ಕೋಟೆಗೆ ನುಗ್ಗಿ 13 ಅಂಕ ದೋಚಿದರು. ಇದರಲ್ಲಿ 10 ಟಚ್ ಮತ್ತು ​3 ಬೋನಸ್​ ಅಂಕ ಒಳಗೊಂಡಿತು. ಅವರ ರೇಡಿಂಗ್​ ಆರ್ಭಟವನ್ನು ಹಿಡಿದು ನಿಲ್ಲಿಸುವಲ್ಲಿ ಹರ್ಯಾಣ ಡಿಫೆಂಡರ್​ಗಳು ಸಂಪೂರ್ಣ ಮಂಕಾದರು.

ಇದನ್ನೂ ಓದಿ Pro Kabaddi: ಟೈಗೊಂಡ ಡೆಲ್ಲಿ-ಜೈಪುರ ಪಂದ್ಯ; ಮತ್ತೆ ಸೋಲು ಕಂಡ ತಲೈವಾಸ್​

ತಂಡದ ಪ್ರಮುಖ ರೇಡರ್​ ಸಚಿನ್​ ಅವರ ಅಬ್ಬರ ಈ ಪಂದ್ಯದಲ್ಲಿ ಅಷ್ಟಾಗಿ ಕಂಡು ಬರಲಿಲ್ಲ. 14 ರೇಡ್​ ನಡೆಸಿ 8 ಅಂಕ ಪಡೆದರು. ಡಿಫೆಂಡಿಂಗ್​ನಲ್ಲಿ ಕೃಷ್ಣ ಹಾಗೂ ಅಂಕಿತ್​ ಅಮೋಘ ಆಟ ಪ್ರದರ್ಶಿಸಿದರು. ಜಿದ್ದಿಗೆ ಬಿದ್ದವಂತೆ ಎದುರಾಳಿ ರೇಡರ್​ಗಳನ್ನು ಹಿಡಿದು ನಿಲ್ಲಿಸುವಲ್ಲಿ ಯಶಸ್ಸಿ ಕಂಡರು. ಕೃಷ್ಣ 5 ಅಂಕ ಗಳಿಸಿದರೆ, ಅಂಕಿತ್​ 4 ಅಂಕ ಪಡೆದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್​ ನೀಡಿದ ನಾಯಕ ನೀರಜ್​ ಕುಮಾರ್​ 3 ಅಂಕ ಕಲೆಹಾಕಿದರು. ರೇಡರ್​ ಸುಧಾಕರ್​ 5 ಅಂಕ ಸಂಪಾದಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಹರ್ಯಾಣ ಪರ ರೇಡರ್​ ವಿನಯ್​ 12, ರೈಟ್​ ಕಾರ್ನರ್​ ಡಿಫೆಂಡರ್​ ರಾಹುಲ್(6), ಲೆಫ್ಟ್​ ಕಾರ್ನರ್​ ಡಿಫೆಂಡರ್​ ಶಿವಂ(7) ಅಂಕ ಗಳಿಸಿದರು. ನಾಯಕ ಜೈದೀಪ್​ ಶೂನ್ಯ ಸುತ್ತಿದ್ದು ಹಾಗೂ ನಂಬುಗೆಯ ಆಟಗಾರ ಪ್ರಪಂಚನ್​ ರೇಡಿಂಗ್​ನಲ್ಲಿ ವಿಫಲವಾದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಜೈದೀಪ್ ಗ್ರೀನ್​ ಕಾರ್ಡ್​ ಕೂಡ ಪಡೆದರು. ಕಳೆದ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಬಾಹುಬಲಿ ಖ್ಯಾತಿಯ ರೇಡರ್​ ಸಿದ್ದಾರ್ಥ್​ ದೇಸಾಯಿ ಅವರನ್ನು ಈ ಪಂದ್ಯದಿಂದ ಹೊರಗಿಡಲಾಯಿತು.

Exit mobile version