Pro Kabaddi: ಹರ್ಯಾಣ ಸ್ಟೀಲರ್ಸ್ ಎದುರು ಗೆದ್ದು ಬೀಗಿದ ಪಾಟ್ನಾ ಪೈರೇಟ್ಸ್ - Vistara News

ಕ್ರೀಡೆ

Pro Kabaddi: ಹರ್ಯಾಣ ಸ್ಟೀಲರ್ಸ್ ಎದುರು ಗೆದ್ದು ಬೀಗಿದ ಪಾಟ್ನಾ ಪೈರೇಟ್ಸ್

ಪಾಟ್ನಾ ಪೈರೇಟ್ಸ್(Patna Pirates)​ ತಂಡ ಹರ್ಯಾಣ ಸ್ಟೀಲರ್ಸ್(Haryana Steelers)​ ತಂಡವನ್ನು 46-33 ಅಂಕಗಳ ಅಂತರದಿಂದ ಕೆಡವಿ ಹಾಕಿದೆ.

VISTARANEWS.COM


on

Patna Pirates vs Haryana Steelers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೋಯ್ಡಾ: ರೇಡರ್​ಗಳ ಮತ್ತು ಡಿಫೆಂಡರ್​ಗಳ ಸಂಘಟಿತ ಆಟದ ಫಲವಾಗಿ ಪಾಟ್ನಾ ಪೈರೇಟ್ಸ್(Patna Pirates)​ ತಂಡ ಶುಕ್ರವಾರದ ಪ್ರೊ ಕಬಡ್ಡಿಯ(Pro Kabaddi) ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್(Haryana Steelers)​ ತಂಡವನ್ನು 46-33 ಅಂಕಗಳ ಅಂತರದಿಂದ ಮಣಿಸಿದೆ. ಸದ್ಯ ಪಾಟ್ನಾ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.

ಮಿಂಚಿದ ಮಂಜಿತ್​

ಪಾಟ್ನಾ ಪೈರೇಟ್ಸ್​ ತಂಡ ರೇಡರ್​ ಮಂಜಿತ್​ ಈ ಪಂದ್ಯದಲ್ಲಿ ಅತ್ಯಾಕರ್ಷಕ ರೇಡಿಂಗ್​ ನಡೆಸಿ ಗಮನ ಸೆಳೆದರು. ಒಟ್ಟು 17 ಬಾರಿ ಎದುರಾಳಿ ಕೋಟೆಗೆ ನುಗ್ಗಿ 13 ಅಂಕ ದೋಚಿದರು. ಇದರಲ್ಲಿ 10 ಟಚ್ ಮತ್ತು ​3 ಬೋನಸ್​ ಅಂಕ ಒಳಗೊಂಡಿತು. ಅವರ ರೇಡಿಂಗ್​ ಆರ್ಭಟವನ್ನು ಹಿಡಿದು ನಿಲ್ಲಿಸುವಲ್ಲಿ ಹರ್ಯಾಣ ಡಿಫೆಂಡರ್​ಗಳು ಸಂಪೂರ್ಣ ಮಂಕಾದರು.

ಇದನ್ನೂ ಓದಿ Pro Kabaddi: ಟೈಗೊಂಡ ಡೆಲ್ಲಿ-ಜೈಪುರ ಪಂದ್ಯ; ಮತ್ತೆ ಸೋಲು ಕಂಡ ತಲೈವಾಸ್​

ತಂಡದ ಪ್ರಮುಖ ರೇಡರ್​ ಸಚಿನ್​ ಅವರ ಅಬ್ಬರ ಈ ಪಂದ್ಯದಲ್ಲಿ ಅಷ್ಟಾಗಿ ಕಂಡು ಬರಲಿಲ್ಲ. 14 ರೇಡ್​ ನಡೆಸಿ 8 ಅಂಕ ಪಡೆದರು. ಡಿಫೆಂಡಿಂಗ್​ನಲ್ಲಿ ಕೃಷ್ಣ ಹಾಗೂ ಅಂಕಿತ್​ ಅಮೋಘ ಆಟ ಪ್ರದರ್ಶಿಸಿದರು. ಜಿದ್ದಿಗೆ ಬಿದ್ದವಂತೆ ಎದುರಾಳಿ ರೇಡರ್​ಗಳನ್ನು ಹಿಡಿದು ನಿಲ್ಲಿಸುವಲ್ಲಿ ಯಶಸ್ಸಿ ಕಂಡರು. ಕೃಷ್ಣ 5 ಅಂಕ ಗಳಿಸಿದರೆ, ಅಂಕಿತ್​ 4 ಅಂಕ ಪಡೆದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್​ ನೀಡಿದ ನಾಯಕ ನೀರಜ್​ ಕುಮಾರ್​ 3 ಅಂಕ ಕಲೆಹಾಕಿದರು. ರೇಡರ್​ ಸುಧಾಕರ್​ 5 ಅಂಕ ಸಂಪಾದಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಹರ್ಯಾಣ ಪರ ರೇಡರ್​ ವಿನಯ್​ 12, ರೈಟ್​ ಕಾರ್ನರ್​ ಡಿಫೆಂಡರ್​ ರಾಹುಲ್(6), ಲೆಫ್ಟ್​ ಕಾರ್ನರ್​ ಡಿಫೆಂಡರ್​ ಶಿವಂ(7) ಅಂಕ ಗಳಿಸಿದರು. ನಾಯಕ ಜೈದೀಪ್​ ಶೂನ್ಯ ಸುತ್ತಿದ್ದು ಹಾಗೂ ನಂಬುಗೆಯ ಆಟಗಾರ ಪ್ರಪಂಚನ್​ ರೇಡಿಂಗ್​ನಲ್ಲಿ ವಿಫಲವಾದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಜೈದೀಪ್ ಗ್ರೀನ್​ ಕಾರ್ಡ್​ ಕೂಡ ಪಡೆದರು. ಕಳೆದ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಬಾಹುಬಲಿ ಖ್ಯಾತಿಯ ರೇಡರ್​ ಸಿದ್ದಾರ್ಥ್​ ದೇಸಾಯಿ ಅವರನ್ನು ಈ ಪಂದ್ಯದಿಂದ ಹೊರಗಿಡಲಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Paris Olympics 2024 : ಆರು ಕಿಲೋಮೀಟರ್ ಮೆರವಣಿಗೆ ಆಸ್ಟರ್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು ಮತ್ತು 85 ದೋಣಿಗಳು 205 ರಾಷ್ಟ್ರಗಳ 6800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಸಾಗಿಸಿದವು. ಮಳೆಯ ಬೆದರಿಕೆ ಹೊರತಾಗಿಯೂ ಫ್ರೆಂಚ್ ರಾಜಧಾನಿಯ ಐತಿಹಾಸಿಕ ಸ್ಮಾರಕಗಳನ್ನು ದಾಟಿ ಸೀನ್ ನದಿಯಲ್ಲಿ ಮಹತ್ವಾಕಾಂಕ್ಷೆಯ ಪ್ರದರ್ಶನ ನಡೆಯಿತು.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ 2024ರ (Paris Olympics 2024) ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. 7500 ಅಥ್ಲೀಟ್​ಗಳು ದೊಡ್ಡ ಸಂಖ್ಯೆಯ ಪ್ರೇಕ್ಷಕರ ಮುಂದೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಬಾರಿ ವಿಶೇಷ ಎನಿಸುವಂಥ ಅಥ್ಲೀಟ್​ಗಳ ಪರೇಡ್​ ನಡೆಯಿತು. ಪ್ಯಾರಿಸ್ ನದಿಯ ಸೀನ್​ ನದಿಯಲ್ಲಿ ಅಥ್ಲೀಟ್​ಗಳನ್ನು ದೋಣಿಯಲ್ಲಿ ಕರೆದುಕೊಂಡು ಹೋಗಲಾಯಿತು. ಟೆನಿಸ್ ತಾರೆ ಶರತ್ ಕಮಾಲ್​ ಹಾಗೂ ಷಟ್ಲರ್ ಪಿ. ವಿ ಸಿಂಧೂ ಭಾರತದ 117 ಅಥ್ಲೀಟ್​ಗಳ ನಿಯೋಗದ ನೇತೃತ್ವ ವಹಿಸಿದ್ದರು. ಅವರು ತ್ರಿವರ್ಣ ಧ್ವಜ ಹಿಡಿದು ದೋಣಿಯಲ್ಲಿ ಸಾಗಿದರು.

ಆರು ಕಿಲೋಮೀಟರ್ ಮೆರವಣಿಗೆ ಆಸ್ಟರ್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು ಮತ್ತು 85 ದೋಣಿಗಳು 205 ರಾಷ್ಟ್ರಗಳ 6800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಸಾಗಿಸಿದವು. ಮಳೆಯ ಬೆದರಿಕೆ ಹೊರತಾಗಿಯೂ ಫ್ರೆಂಚ್ ರಾಜಧಾನಿಯ ಐತಿಹಾಸಿಕ ಸ್ಮಾರಕಗಳನ್ನು ದಾಟಿ ಸೀನ್ ನದಿಯಲ್ಲಿ ಮಹತ್ವಾಕಾಂಕ್ಷೆಯ ಪ್ರದರ್ಶನ ನಡೆಯಿತು. ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ, ಉದ್ಘಾಟನಾ ಸಮಾರಂಭವು ಮುಖ್ಯ ಕ್ರೀಡಾಂಗಣದ ಹೊರಗೆ ನಡೆಯುತ್ತಿದೆ. ಸುಮಾರು 300,000 ಜನರು ನದಿಯ ದಡದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸ್ಟ್ಯಾಂಡ್​ಗಳಲ್ಲ ಕುಳಿತು ವೀಕ್ಷಿಸಿದರು. ಇನ್ನೂ 200,000 ಜನರು ಬಾಲ್ಕನಿಗಳು ಮತ್ತು ಅಪಾರ್ಟ್ಮೆಂಟ್​ಗಳಲ್ಲಿ ಕುಳಿತು ವೀಕ್ಷಿಸಿದರು.

ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ‘ಪೆರೇಡ್ ಆಫ್ ದಿ ನೇಷನ್ಸ್’ ನೊಂದಿಗೆ ಪ್ರಾರಂಭವಾಯಿತು, ಮಳೆ ಅಡ್ಡಿಪಡಿಸಿದ ಹೊರತಾಗಿಯೂ ಕಾರ್ಯಕ್ರಮ ವರ್ಣರಂಜಿತವಾಗಿ ಆರಂಭಗೊಂಡಿತು. ಫ್ರೆಂಚ್ ಫುಟ್ಬಾಲ್ ದಂತಕಥೆ ಜಿನೆಡಿನ್ ಜಿಡಾನೆ ಪ್ಯಾರಿಸ್​​ನ ಬೀದಿಗಳಲ್ಲಿ ಒಲಿಂಪಿಕ್ ಜ್ಯೋತಿ ಜತೆ ಓಡಿದರು.

ಕ್ರೀಡಾಪಟುಗಳು ಮಾತ್ರವಲ್ಲ, ವಿಶ್ವ ನಾಯಕರು ಶುಕ್ರವಾರ ಮಧ್ಯಾಹ್ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಎಲಿಸೀ ಪ್ಯಾಲೇಸ್ ಕಚೇರಿಗೆ ಆಗಮಿಸಿದ್ದರು/ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಅತಿಥಿಗಳನ್ನು ಎಲಿಸಿಯ ಅಂಗಳದಲ್ಲಿ ರೆಡ್​ ಕಾರ್ಪೆಟ್ ಸ್ವಾಗತ ನೀಡಿರು. ಸೀನ್ ನದಿಯಲ್ಲಿ ಸಮಾರಂಭಕ್ಕೆ ಮೊದಲು ಸುಮಾರು 85 ರಾಷ್ಟ್ರ ಅಥವಾ ಸರ್ಕಾರದ ಮುಖ್ಯಸ್ಥರಿಗೆ ಸ್ವಾಗತ ನೀಡಲಾಯಿತು.

ಅಮೆರಿಕದ ಗಾಯಕಿ ಲೇಡಿ ಗಾಗಾ ಸಂಜೆಯ ವೇಳೆ ತಮ್ಮ ಪ್ರದರ್ಶನ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಪ್ಯಾರಿಸ್​ನಾದ್ಯಂತ ಅನೇಕ ಐತಿಹಾಸಿಕ ಸ್ಥಳಗಳ ಕಲಾವಿದರಿಂದ ಸಿಂಕ್ರೊನೈಸ್ಡ್ ನೃತ್ಯ ಪ್ರದರ್ಶನಗಳು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದವು.

ಮೊದಲ ದಿನದಂದು ಭಾರತಕ್ಕೆ 16 ಸ್ಪರ್ಧೆಗಳು

ಸ್ಪರ್ಧೆಗಳು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಆರಂಭಿಕ ದಿನದಂದು ಭಾರತವು 16 ಸ್ಪರ್ಧೆಗಳಲ್ಲಿ 6ರಲ್ಲಿ ಭಾಗವಹಿಸಲಿದೆ. ಅವುಗಳೆಂದರೆ, ರೋಯಿಂಗ್, ಬ್ಯಾಡ್ಮಿಂಟನ್, ಶೂಟಿಂಗ್, ಟೇಬಲ್ ಟೆನಿಸ್, ಟೆನಿಸ್ ಮತ್ತು ಹಾಕಿ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

ಬಹುನಿರೀಕ್ಷಿತ ಕ್ರೀಡಾಕೂಟದ ಪ್ರಾರಂಭಕ್ಕೆ ಮುಂಚಿತವಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಪ್ರತಿನಿಧಿಸುವ 117 ಅಥ್ಲೀಟ್​ಗಳ ಭಾರತದ ನಿಯೋಗಕ್ಕೆ ಶುಭಾಶಯಗಳನ್ನು ಕಳುಹಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​ ಆರಂಭವಾಗುತ್ತಿದ್ದು ಭಾರತೀಯ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಪ್ರತಿಯೊಬ್ಬ ಕ್ರೀಡಾಪಟುವೂ ಭಾರತದ ಹೆಮ್ಮೆ.. ಅವರೆಲ್ಲರೂ ತಮ್ಮ ಅಸಾಧಾರಣ ಪ್ರದರ್ಶನಗಳು ನಮಗೆ ಸ್ಫೂರ್ತಿ ನೀಡುವ ಮೂಲಕ ನಿಜವಾದ ಕ್ರೀಡಾ ಮನೋಭಾವವನ್ನು ಬೆಳಗಿಸಲಿ ಮತ್ತು ಸಾಕಾರಗೊಳಿಸಲಿ ಎಂದು ಪ್ರಧಾನಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

Paris Olympics 2024 : ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ಸೇಲಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೆನಿಸ್ ಸೇರಿದಂತೆ 16 ಕ್ರೀಡೆಗಳಲ್ಲಿ 117 ಕ್ರೀಡಾಪಟುಗಳು 69 ಪದಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: 2024 ರ ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) ಉದ್ಘಾಟನಾ ಸಮಾರಂಭವು ನಡೆಯುತ್ತಿರುವುದರಿಂದ ಫ್ರಾನ್ಸ್​​ನ ರಾಜಧಾನಿಯಲ್ಲಿ ಸಂಭ್ರಮ ಜೋರಾಗಿದೆ. ಸಾವಿರಾರು ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಜತೆಗೆ ಕ್ರೀಡಾಪ್ರೇಮಿಗಳು ಹಾಗೂ ಆಯೋಜಕರ ದೊಡ್ಡ ದಂಡು ಅಲ್ಲಿ ನೆರೆದಿದೆ. ಅಂತೆಯೇ ಭಾರತದಿಂದ ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ಸೇಲಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೆನಿಸ್ ಸೇರಿದಂತೆ 16 ಕ್ರೀಡೆಗಳಲ್ಲಿ 117 ಕ್ರೀಡಾಪಟುಗಳು 69 ಪದಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ಬಹುನಿರೀಕ್ಷಿತ ಕ್ರೀಡಾಕೂಟದ ಪ್ರಾರಂಭಕ್ಕೆ ಮುಂಚಿತವಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಪ್ರತಿನಿಧಿಸುವ 117 ಅಥ್ಲೀಟ್​ಗಳ ಭಾರತದ ನಿಯೋಗಕ್ಕೆ ಶುಭಾಶಯಗಳನ್ನು ಕಳುಹಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​ ಆರಂಭವಾಗುತ್ತಿದ್ದು ಭಾರತೀಯ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಪ್ರತಿಯೊಬ್ಬ ಕ್ರೀಡಾಪಟುವೂ ಭಾರತದ ಹೆಮ್ಮೆ.. ಅವರೆಲ್ಲರೂ ತಮ್ಮ ಅಸಾಧಾರಣ ಪ್ರದರ್ಶನಗಳು ನಮಗೆ ಸ್ಫೂರ್ತಿ ನೀಡುವ ಮೂಲಕ ನಿಜವಾದ ಕ್ರೀಡಾ ಮನೋಭಾವವನ್ನು ಬೆಳಗಿಸಲಿ ಮತ್ತು ಸಾಕಾರಗೊಳಿಸಲಿ ಎಂದು ಪ್ರಧಾನಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಮತ್ತು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಭಾರತದ ಧ್ವಜಧಾರಿಯಾಗಿ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪರೇಡ್​ನಲ್ಲಿ 7,500 ಸ್ಪರ್ಧಿಗಳು ಸೀನ್ ನದಿಯ ಆರು ಕಿಲೋಮೀಟರ್ (ನಾಲ್ಕು ಮೈಲಿ) ಉದ್ದದ ಉದ್ದಕ್ಕೂ 85 ದೋಣಿಗಳಲ್ಲಿ ಪ್ರಯಾಣಿಸಲಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ಒಂದು ವರ್ಷ ವಿಳಂಬವಾಗಿ ಖಾಲಿ ಕ್ರೀಡಾಂಗಣದಲ್ಲಿ ತೆರೆಯಲ್ಪಟ್ಟ 2020 ರ ಟೋಕಿಯೊ ಒಲಿಂಪಿಕ್ಸ್​ಗೆ ಹೋಲಿಸಿದರೆ, ಪ್ಯಾರಿಸ್​​ನ ಮಹತ್ವಾಕಾಂಕ್ಷೆಯ ನಡಿಗೆ 300,000 ಉತ್ಸಾಹಭರಿತ ಪ್ರೇಕ್ಷಕರು ಮತ್ತು ವಿಶ್ವದಾದ್ಯಂತದ ವಿಐಪಿಗಳು ಮತ್ತು ಸೆಲೆಬ್ರಿಟಿಗಳ ಪ್ರೇಕ್ಷಕರ ಮುಂದೆ ನಡೆಯಲಿದೆ. ಸ್ಪರ್ಧೆಗಳು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಆರಂಭಿಕ ದಿನದಂದು ಭಾರತವು 16 ಸ್ಪರ್ಧೆಗಳಲ್ಲಿ 6ರಲ್ಲಿ ಭಾಗವಹಿಸಲಿದೆ. ಅವುಗಳೆಂದರೆ, ರೋಯಿಂಗ್, ಬ್ಯಾಡ್ಮಿಂಟನ್, ಶೂಟಿಂಗ್, ಟೇಬಲ್ ಟೆನಿಸ್, ಟೆನಿಸ್ ಮತ್ತು ಹಾಕಿ.

Continue Reading

ಪ್ರಮುಖ ಸುದ್ದಿ

ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

ICC Champions Trophy: 2024-2026ರ ಅವಧಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಎಲ್ಲಾ ಸ್ವರೂಪಗಳಲ್ಲಿ 61 ಪಂದ್ಯಗಳನ್ನು ಆಡಲಿದೆ. 11 ಟೆಸ್ಟ್, 26 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಲಿದೆ. ಅಂತಾರಾಷ್ಟ್ರೀಯ ದೂರದರ್ಶನ ಹಕ್ಕುಗಳನ್ನು ಮಾರಾಟ ಮಾಡಲು ಮುಂದಾಗಿದೆ.

VISTARANEWS.COM


on

Pakistan Cricket Board
Koo

ಬೆಂಗಳೂರು: ಬಿಸಿಸಿಐ ಶಾಲಾ ಮಕ್ಕಳ ಕ್ರಿಕೆಟ್​ನ ಸಣ್ಣ ಟೂರ್ನಿಯನ್ನು ಆಯೋಜಿಸಿದರೂ ಮಾಧ್ಯಮಗಳು ಅದರ ಪ್ರಸಾರದ ಹಕ್ಕನ್ನು ಪಡೆಯಲು ಕ್ಯೂ ನಿಲ್ಲುತ್ತಾರೆ. ಕೊಟ್ಯಂತರ ರೂಪಾಯಿ ಸುರಿದು ಅದರ ಹಕ್ಕನ್ನು ಪಡೆಯಲು ಮುಂದಾಗುತ್ತಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ಹಾಕಿದ ಅಂತಾರಾಷ್ಟ್ರೀಯ ಬಿಡ್​ ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಮಂಡಳಿ (PCB) ತನ್ನ ನಿರೀಕ್ಷೆಗಳನ್ನು ಪೂರೈಸದ ಕಾರಣ ಅಂತರರಾಷ್ಟ್ರೀಯ ಮಾಧ್ಯಮ ಹಕ್ಕುಗಳನ್ನು ಪಡೆಯುವಲ್ಲಿ ಮತ್ತೊಮ್ಮೆ ಹಿನ್ನಡೆಯನ್ನು ಎದುರಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy) ಮುನ್ನ ಇದು ದೊಡ್ಡ ಹಿನ್ನಡೆಯಾಗಿದೆ.

ಆಗಸ್ಟ್ 2024 ರಿಂದ ಡಿಸೆಂಬರ್ 2026 ರವರೆಗೆ ದೂರದರ್ಶನ, ಡಿಜಿಟಲ್, ಆಡಿಯೋ, ವೆಬ್ ಮತ್ತು ಮೊಬೈಲ್ ಪ್ಲಾಟ್​ಫಾರ್ಮ್​​ಗಳಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡಲು ಪಿಸಿಬಿ ಇತ್ತೀಚೆಗೆ ಎಲ್ಲಾ ಜಾಗತಿಕ ಟೆಂಡರ್​ಗಳನ್ನು ಪ್ರಕಟಿಸಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡದ ತವರು ಸರಣಿಯು ಆಗಸ್ಟ್ 21 ರಿಂದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಪಾಕಿಸ್ತಾನವು ಅಕ್ಟೋಬರ್​ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಲಿದೆ. ತಂಡದ ಫ್ಯೂಚರ್ ಟೂರ್ ಪ್ರೋಗ್ರಾಮ್ಸ್ (ಎಫ್​ಟಿಪಿ) ವೇಳಾಪಟ್ಟಿಯ ಪ್ರಕಾರ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿವೆ.

2024-2026ರ ಅವಧಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಎಲ್ಲಾ ಸ್ವರೂಪಗಳಲ್ಲಿ 61 ಪಂದ್ಯಗಳನ್ನು ಆಡಲಿದೆ. 11 ಟೆಸ್ಟ್, 26 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಲಿದೆ. ಅಂತಾರಾಷ್ಟ್ರೀಯ ದೂರದರ್ಶನ ಹಕ್ಕುಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಭಾರೀ ನಿರಾಸೆ

ಅಂತರರಾಷ್ಟ್ರೀಯ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರೀಕ್ಷೆಗಳನ್ನು ಪೂರೈಸಲಾಗಲಿಲ್ಲ. ಅವರಿಗೆ ಸಲ್ಲಿಕೆಯಾದ ಬಿಡ್​ ಮೂಲ ಮೌಲ್ಯದ ಅರ್ಧದಷ್ಟು ಮಾತ್ರ ಇತ್ತು. ಕ್ರಿಕೆಟ್ ಮಂಡಳಿಯು ಮೂರು ವರ್ಷಗಳ ಅಂತಾರರಾಷ್ಟ್ರೀಯ ಮಾಧ್ಯಮ ಹಕ್ಕುಗಳಿಗಾಗಿ ಸುಮಾರು 584 ಕೋಟಿ ರೂಪಾಯಿ (ಪಾಕಿಸ್ತಾನ) ನಿಗದಿ ಮಾಡಿತ್ತು. ಆದರೆ, ಪ್ರಸಾರಕು ಅದರ ಅರ್ಧದಷ್ಟು ಮೊತ್ತಕ್ಕೆ ಪ್ರಸ್ತಾಪ ಸಲ್ಲಿಸಿದೆ.

ಪಾಕ್ ಕಂಪನಿಯಿಂದ ಸಲ್ಲಿಕೆ

ಪಾಕಿಸ್ತಾನದ ಮಾಧ್ಯಮ ಸಮೂಹ ಮತ್ತು ಖಾಸಗಿ ಕಂಪನಿಯ ಒಕ್ಕೂಟವು ವಿದೇಶಿ ಬಿಡ್ದಾರರಾದ ವಿಲ್ಲೋ ಮತ್ತು ಸ್ಪೋರ್ಟ್ಸ್ ಫೈವ್ ಅವರೊಂದಿಗೆ ಹರಾಜಿನಲ್ಲಿ ಭಾಗವಹಿಸಿತು. ಈ ಪೈಕಿ ಸ್ಪೋರ್ಟ್ಸ್ ಫೈವ್ 218 ಡಾಲರ್​ಗೆ ಬಿಡ್ ಸಲ್ಲಿಸಿದೆ. ಪಾಕಿಸ್ತಾನದ ಕಂಪನಿಯು ಸುಮಾರು 114 ಕೋಟಿ ಪಾಕಿಸ್ತಾನ ರೂಪಾಯ ಬಿಡ್ ಮಾಡಿದರೆ, ವಿಲ್ಲೋ ಸಂಸ್ಥೆಯು 62 ಕೋಟಿ ರೂಪಾಯಿ ಬಿಡ್ ಮಾಡಿತು. ಮೀಸಲು ಬೆಲೆಯನ್ನು ತಲುಪದ ಕಾರಣ ಮಂಡಳಿಯು ಬಿಡ್ದಾರರಿಗೆ ಬೆಲೆಯನ್ನು ಹೆಚ್ಚಿಸಲು ಸೂಚಿಸಿದೆ.

ಇದನ್ನೂ ಓದಿ: Dinesh Karthik : ಇಷ್ಟದ ಐಪಿಎಲ್​ ತಂಡ ಯಾವುದೆಂದು ಬಹಿರಂಗಪಡಿಸಿದ ದಿನೇಶ್ ಕಾರ್ತಿಕ್​

ಎರಡನೇ ಸುತ್ತಿನಲ್ಲಿ, ಸ್ಪೋರ್ಟ್ಸ್ ಫೈವ್ ತಮ್ಮ ಬಿಡ್ ಅನ್ನು ಅದೇ ಮೊತ್ತ ಉಳಿಸಿಕೊಂಡರೆ, ಪಾಕಿಸ್ತಾನಿ ಕಂಪನಿಯು ತಮ್ಮ ಬಿಡ್ ಅನ್ನು ಸ್ವಲ್ಪ ಏರಿಸಿತು. ಆದಾಗ್ಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಮೀಸಲು ಬೆಲೆಯನ್ನು ಪೂರೈಸದ ಕಾರಣ ಎರಡೂ ಪ್ರಸ್ತಾಪಗಳನ್ನು ತಿರಸ್ಕರಿಸಿದೆ.

ಹೊಸ ಟೆಂಡರ್​

ನ್ಯೂಜಿಲೆಂಡ್ ವಿರುದ್ಧದ ತವರು ಸರಣಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮಹಿಳಾ ಸರಣಿಗೆ ಹೊಸ ಟೆಂಡರ್ ನೀಡಲಾಗಿದೆ. ಈ ಸುತ್ತಿನಲ್ಲಿ, ಪಾಕಿಸ್ತಾನಿ ಕಂಪನಿಗಳು ಒಟ್ಟಾಗಿ 2.7 ಕೋಟಿ ಪಾಕಿಸ್ತಾನಿ ರೂಪಾಯಿಗಳು), ವಿಲ್ಲೋ 2 ಕೋಟಿ ರೂಪಾಟಿ ಮತ್ತು ಸ್ಪೋರ್ಟ್ಸ್ ಫೈವ್ 1.39 ಕೋಟಿ ರೂಪಾಯಿ ಬಿಡ್ ಮಾಡಿದವು.

Continue Reading

ಪ್ರಮುಖ ಸುದ್ದಿ

Dinesh Karthik : ಇಷ್ಟದ ಐಪಿಎಲ್​ ತಂಡ ಯಾವುದೆಂದು ಬಹಿರಂಗಪಡಿಸಿದ ದಿನೇಶ್ ಕಾರ್ತಿಕ್​

Dinesh Karthik :

VISTARANEWS.COM


on

Dinesh Karthik
Koo

ಬೆಂಗಳೂರು: ಭಾರತದ ಮಾಜಿ ಬ್ಯಾಟರ್​ ದಿನೇಶ್ ಕಾರ್ತಿಕ್ ತಮ್ಮ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯ ಬಗ್ಗೆ ಮಾತನಾಡಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಾವು ಆಡಿದ ಅತ್ಯುತ್ತಮ ತಂಡ ಎಂದು ಕರೆದಿದ್ದಾರೆ. ಇದೇ ವೇಲೆ ಅವರು ವಾಸಿಸಲು ಇಷ್ಟಪಡುವ ನಗರದ ಬಗ್ಗೆಯೂ ಮಾತನಾಡಿದರು.

ದಿನೇಶ್ ಕಾರ್ತಿಕ್ ಭಾರತೀಯ ಕ್ರಿಕೆಟ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಕೀಪರ್-ಬ್ಯಾಟರ್​ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಸ್ಥಿರವಾಗಿ ರನ್ ಗಳಿಸಿದ್ದರು. ಇದಲ್ಲದೆ, ಅವರು ಇಂಡಿಯನ್ ಪ್ರೀಮಿಯರ್ ಲೀಗ್​​​ನಲ್ಲಿ ವೃತ್ತಿಜೀವನದುದ್ದಕ್ಕೂ ಅದ್ಭುತವಾಗಿ ಆಡಿದರು.

ದಿನೇಶ್ ಕಾರ್ತಿಕ್ ಐಪಿಎಲ್​​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಗುಜರಾತ್ ಲಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ. ಅವರು ತಂಡಗಳಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. 2024 ರ ಆರಂಭದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಕೊನೆಯ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡುತ್ತಾ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ಅಭಿಮಾನಿಗಳಿಂದ ಅಪಾರ ಪ್ರೀತಿ ಪಡೆದಿದ್ದರು. ಲೀಗ್​​ನ ಕೊನೆಯ ಆವೃತ್ತಿಯಲ್ಲಿ, ಕೀಪರ್-ಬ್ಯಾಟರ್​ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರು 15 ಪಂದ್ಯಗಳಲ್ಲಿ 187.36 ಸ್ಟ್ರೈಕ್ ರೇಟ್ ನಲ್ಲಿ 326 ರನ್ ಗಳಿಸಿದ್ದಾರೆ. ತಮ್ಮ ತಂಡವು ಪ್ಲೇಆಫ್ ತಲುಪಲು ಸಹಾಯ ಮಾಡಿದ್ದರು. ಸಂವಾದದ ಅವಧಿಯಲ್ಲಿ ದಿನೇಶ್ ಕಾರ್ತಿಕ್ ಅವರನ್ನು ನೀವು ಆಡಿದ ನೆಚ್ಚಿನ ಐಪಿಎಲ್ ತಂಡವನ್ನು ಹೆಸರಿಸಲು ಕೋರಲಾಯಿತು. ಈ ವೇಳೆ ಆರ್​ಸಿಬಿ ಎಂದರು. ಜತೆಗೆ ಅದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಫ್ರಾಂಚೈಸಿ ಅತ್ಯುತ್ತಮ ಅಭಿಮಾನಿ ಬಳಗ ಹೊಂದಿದೆ ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಾಗ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಅಲ್ಲದೆ ಪ್ರೀತಿ ತೋರುತ್ತಾರೆ ಎಂದು ವಿವರಿಸಿದರು. ಈ ತಂಡದೊಂದಿಗೆ ಆಡುವಾಗ ಆನಂದಿಸಿದ್ದಾರೆ. ಮೋಜಿನ ಸಮಯವನ್ನು ಕಳೆದಿದ್ದಾರೆ ಎಂದು ಹೇಳಿದ್ದಾರೆ.

ಆರ್​ಸಿಬಿ ಪರ ಆಡಲು ನನ್ನ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಇದು ಉತ್ತಮ ಅಭಿಮಾನಿಗಳನ್ನು ಹೊಂದಿದೆ. ಅದು ಆ ತಂಡಕ್ಕಾಗಿ ಆಡುವ ಉತ್ತಮ ವಿಷಯ. ಅವರು ನಿಮ್ಮನ್ನು ಪ್ರೀತಿಸುತ್ತಾರೆ. ನೀವು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ ಅವರು ನಿಮ್ಮ ಮೇಲೂ ಕಠಿಣವಾಗಿ ಟೀಕೆ ಮಾಡುತ್ತಾರೆ. ಆರ್​ಸಿಬಿಯಲ್ಲಿ ಆಡಿರುವುದು ನಿಜವಾದ ಮೋಜಿನ ಸಮಯ ಎಂದು ಹೇಳಿದರು.

ದಿನೇಶ್ ಕಾರ್ತಿಕ್ ಐಪಿಎಲ್​​ನಲ್ಲಿ 257 ಪಂದ್ಯಗಳನ್ನು ಆಡಿದ್ದು, 26.32 ಸರಾಸರಿಯಲ್ಲಿ 4,842 ರನ್ ಗಳಿಸಿದ್ದಾರೆ. ಅವರು ಈಗ ಪಂದ್ಯಾವಳಿಯ ಮುಂದಿನ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಗದರ್ಶಕರಾಗಿ ಸೇರಲಿದ್ದಾರೆ.

ದಿನೇಶ್ ಕಾರ್ತಿಕ್ ನೆಚ್ಚಿನ ನಗರ

ದಿನೇಶ್ ಕಾರ್ತಿಕ್ ಅವರಿಗೆ ಲಂಡನ್ ನೆಚ್ಚಿನ ನಗರವಾಗಿದೆ. ಇದರ ಹಿಂದಿನ ಕಾರಣ ವಿವರಿಸುವಾಗ ಅವರು ಮತ್ತು ಅವರ ಕುಟುಂಬವು ಅಲ್ಲಿ ವಾಸಿಸಲು ಇಷ್ಟಪಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Venkatesh Iyer : ಟೀಮ್ ಇಂಡಿಯಾದಿಂದ ನಿರ್ಲಕ್ಷ್ಯ, ಹೊಸ ತಂಡ ಸೇರಿದ ವೆಂಕಟೇಶ್ ಅಯ್ಯರ್​

ಲಂಡನ್. ನನಗೆ ಮತ್ತು ನನ್ನ ಕುಟುಂಬಕ್ಕೆ ಇಷ್ಟದ ನಗರ. ಮಳೆಯಾಗದಿದ್ದಾಗ ನಾನು ನಗರ ಮತ್ತು ಹವಾಮಾನ ಪ್ರೀತಿಸುತ್ತೇನೆ. ಮಳೆಯಾಗದಿದ್ದಾಗ ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

ದಿನೇಶ್ ಕಾರ್ತಿಕ್ 2004ರಿಂದ 2022ರ ಅವಧಿಯಲ್ಲಿ 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ತಮ್ಮ 19 ನೇ ವಯಸ್ಸಿನಲ್ಲಿ ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಟೆಸ್ಟ್ನಲ್ಲಿ 1025 ರನ್, ಏಕದಿನದಲ್ಲಿ 1725 ರನ್ ಮತ್ತು ಟಿ 20ಐನಲ್ಲಿ 686 ರನ್ ಗಳಿಸಿದ್ದಾರೆ. 2007ರ ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದರು.

Continue Reading
Advertisement
Aadhaar Update
ವಾಣಿಜ್ಯ3 mins ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ18 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ1 hour ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ1 hour ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ1 hour ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ1 hour ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Mumbai Spa
ಪ್ರಮುಖ ಸುದ್ದಿ7 hours ago

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ12 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ13 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ14 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ15 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌