ನೋಯ್ಡಾ: ಆಕ್ರಮಣಕಾರಿಯ ಆಟವಾಡಿದ ಯು ಮುಂಬಾ(U Mumba) ತಂಡ ತೆಲುಗು ಟೈಟಾನ್ಸ್(Telugu Titans) ವಿರುದ್ಧ 52-34 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ದಿನದ 2ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ(Dabang Delhi K.C) ಆತಿಥೇಯ ಯುಪಿ ಯೋಧಾಸ್ಗೆ(U.P. Yoddhas) ಅಂಕಗಳಿಂದ ಸೋಲುಣಿಸಿದೆ.
ಇಲ್ಲಿನ ನೋಯ್ಡಾ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ(Pro Kabaddi League) ದಿನದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಯು ಮುಂಬಾ ಕಣಕ್ಕಿಳಿದಿತ್ತು. ಈ ಪಂದ್ಯ ಏಕಪಕ್ಷೀಯವಾಗಿ ಕಂಡುಬಂದಿತು. ಆರಂಭದಿಂದಲೇ ಅಬ್ಬರದ ಆಟವಾಡಿದ ಮುಂಬಾ ಆಟಗಾರರು ಎದುರಾಳಿ ತಂಡಕ್ಕೆ ಉಸಿರಾಡಲೂ ಕೂಡ ಸಮಯಾವಕಾಶ ನೀಡಲಿಲ್ಲ. ಎಲ್ಲ ಹಂತದಲ್ಲಿಯೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.
🚨FT | MUM 52-34 TEL
— Dugout Stories (@DugoutStories) December 30, 2023
A convincing victory for U Mumba against bottom placed Telugu Titans 😍💥#TTvMUM#ProKabaddi #ProKabaddiLeague #PKL #PKLSeason10 #HarSaansMeinKabaddi #TeluguTitans #UMumba #Sombir #AmirmohammadZafardanesh @ProKabaddi @umumba @Telugu_Titans pic.twitter.com/yIC5uRfH6O
ಬಿರುಗಾಳಿ ವೇಗದಲ್ಲಿ ರೇಡಿಂಗ್ ನಡೆಸಿದ ಗುಮಾನ್ ಸಿಂಗ್(10) ಮತ್ತು ಜೈ ಭಗವಾನ್(7) ಎದುರಾಳಿ ರಕ್ಷಣ ಕೋಟೆಯನ್ನು ಛಿದ್ರಗೊಳಿಸಿದರು. ಇವರಿಬ್ಬರ ರೇಡಿಂಗ್ ಆರ್ಭಟದ ಮಧ್ಯೆ ಇರಾನಿ ಆಟಗಾರ ಟ್ಯಾಕಲ್ ಮತ್ತು ರೇಡಿಂಗ್ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರುವ ಮೂಲಕ 8 ಅಂಕ ಗಳಿಸಿದರು.
ಮುಂಬಾ ತಂಡದ ಡಿಫೆಂಡಿಂಗ್ ಕೂಡ ಅತ್ಯಂತ ಬಲಶಾಲಿಯಾಗಿತ್ತು. ರೈಟ್ ಕಾರ್ನರ್ನಲ್ಲಿ ರಿಂಕು ಮತ್ತು ಲೆಫ್ಟ್ ಕಾರ್ನರ್ನಲ್ಲಿ ಸೋಂಬಿರ್ ತಲಾ 8 ಅಂಕ ಗಳಿಸಿದರು. ಜಿದ್ದಿಗೆ ಬಿದ್ದವರಂತೆ ಇವರಿಬ್ಬರು ಟ್ಯಾಕಲ್ ಮಾಡುವ ಮೂಲಕ ಪಂದ್ಯದಲ್ಲಿ ವಿಶೇಷವಾಗಿ ಗಮನಸೆಳೆದರು. ತೆಲುಗು ಪರ ಮಿಂಚಿದ ಆಟಗಾರರೆಂದರೆ ರಾಬಿನ್ ಚೌಧರಿ(7), ರಜನೀಶ್(8), ಪ್ರಫುಲ್ ಜವಾರೆ(7) ಅಂಕ ಗಳಿಸಿದರು. ಉಳಿದಂತೆ ಯಾವುದೇ ಆಟಗಾರರು ಕೂಡ ನಿರೀಕ್ಷಿತ ಮಟ್ಟದ ಆಟವಾಡುವಲ್ಲಿ ಯಶಸ್ಸು ಕಾಣಲಿಲ್ಲ.
ಇದನ್ನೂ ಓದಿ Pro Kabaddi: ಕೊನೆ ಕ್ಷಣದಲ್ಲಿ ಯೋಧಾಸ್ ವಿರುದ್ಧ ವಿರೋಚಿತ ಸೋಲು ಕಂಡ ಬುಲ್ಸ್
ಯುಪಿಗೆ ಸೋಲುಣಿಸಿದ ಡೆಲ್ಲಿ
ತವರಿನಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಇರಾದೆಯೊಂದಿಗೆ ಆಡಲಿಳಿದ ಯುಪಿ ಯೋಧಾಸ್ ತಂಡ ಬಲಿಷ್ಠ ದಬಾಂಗ್ ಡೆಲ್ಲಿ ವಿರುದ್ಧ ಸೋಲು ಕಂಡಿತು. ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ನವೀನ್ ಕುಮಾರ್ ಅವರ ಅನುಪಸ್ಥಿಯಲ್ಲಿಯೂ ಡೆಲ್ಲಿ ಈ ಪಂದ್ಯವನ್ನು ಗೆದ್ದು ಪಾರಮ್ಯ ಮೆರೆದದ್ದು ನಿಜಕ್ಕೂ ಮೆಚ್ಚಲೇ ಬೇಕು. ಮಂಡಿ ನೋವಿನ ಕಾರಣ ನವೀನ್ ಈ ಪಂದ್ಯಕ್ಕೆ ಅಲಭ್ಯರಾದರು. ಅವರ ಅನುಪಸ್ಥಿತಿಯಲ್ಲಿ ತಂಡದ ಸಂಪೂರ್ಣ ಜಬಾಬ್ದಾರಿ ವಹಿಸಿಕೊಂಡ ಅಶು ಮಲಿಕ್ ರೇಡಿಂಗ್ನಲ್ಲಿ 11 ಅಂಕ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.
दबंग दिल्ली के.सी. ने मचाया हाहाकार 💪🔥
— ProKabaddi (@ProKabaddi) December 30, 2023
यूपी योद्धाज़ को बड़े अंतर से हराते हुए दर्ज की अपनी चौथी जीत 🤩#ProKabaddi #ProKabaddiLeague #PKL #PKLSeason10 #HarSaansMeinKabaddi #UPvDEL #UPYoddhas #DabangDelhiKC pic.twitter.com/SSEKSPe4lN
ಅಶು ಮಲಿಕ್ಗೆ ಮಂಜಿತ್(6) ಮೀತೂ(4), ಆಶೀಶ್(5) ಮತ್ತು ಯೋಗೇಶ್(3) ಅಂಕ ಗಳಿಸಿ ಉತ್ತಮ ಸಾಥ್ ನೀಡಿದರು. ಯುಪಿ ಪರ ಕಳೆದ ಪಂದ್ಯದಲ್ಲಿ ಮಿಂಚಿದ್ದ ಪ್ರದೀಪ್ ನರ್ವಾಲ್ ಈ ಪಂದ್ಯದಲ್ಲಿ 7 ಅಂಕ ಗಳಿಸಿದರು. ಸುರೇಂದರ್ ಗಿಲ್ 4, ಡಿಫೆಂಡರ್ ಸುಮೀತ್ 7 ಅಂಕ ಕಲೆಹಾಕಿದರು.