ಬೆಂಗಳೂರು: ರೇಡಿಂಗ್ ಮತ್ತು ಟ್ಯಾಕಲ್ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಪುಣೇರಿ ಪಲ್ಟಾನ್ ತಂಡ ಯು ಮುಂಬಾ ವಿರುದ್ಧ 43-32 ಅಂಕದ ಅಂತರದಿಂದ ಗೆದ್ದು ಬೀಗಿದೆ. ಪುಣೇರಿ ಪಲ್ಟಾನ್ ಪರ ಮಿಂಚಿನ ರೇಡಿಂಗ್ ದಾಳಿ ನಡೆಸಿದ ಮೋಹಿತ್ ಗೋಯತ್ 12 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಶುಕ್ರವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ(Pro Kabaddi) ಲೀಗ್‌ನ ದ್ವಿತೀಯ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಎಲ್ಲ ವಿಭಾಗದಲ್ಲಿಯೂ ಉತ್ತಮ ಆಟ ಪ್ರದರ್ಶಿಸಿ ಬಲಿಷ್ಠ ಮುಂಬೈಗೆ ಸೋಲುಣಿಸುವಲ್ಲಿ ಯಶಸ್ಸು ಕಂಡಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಉತ್ತು ನೀಡಿದ ಪುಣೇರಿ ಆಟಗಾರರು ಯಾವುದೇ ಹಂತದಲ್ಲಿಯೂ ಎದುರಾಳಿಗಳಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಅಂತಿಮವಾಗಿ 11 ಅಂಕದ ಮುನ್ನಡೆಯಿಂದ ಪಂದ್ಯವನ್ನು ಗೆದ್ದರು.
⚔ SUPER TACKLE SPECIAL ⚔
— ProKabaddi (@ProKabaddi) December 8, 2023
Paltan going strong in defence 🔥#ProKabaddi #PKL #PKLSeason10 #HarSaansMeinKabaddi #PUNvMUM #PuneriPaltan #UMumba pic.twitter.com/yx4wVuNq9N
ಮಿಂಚಿದ ಮೋಹಿತ್
ಯುವ ರೇಡರ್ ಮೋಹಿತ್ ಗೋಯತ್ ಈ ಪಂದ್ಯದಲ್ಲಿ ಒಟ್ಟು 12 ಅಂಕ ಗಳಿಸಿದರು. ಇದರಲ್ಲಿ 6 ಟಚ್, 3 ಬೋನಸ್ ಮತ್ತು 3 ಟ್ಯಕಾಲ್ ಅಂಕ ಒಳಗೊಂಡಿದೆ. ಪಂಕಜ್ ಅವರು 8 ಬಾರಿ ಎದುರಾಳಿ ಕೋಟೆಗೆ ನುಗ್ಗಿ 6 ಅಂಕ ಗಳಿಸಿದರು. ಉಳಿದಂತೆ ಡಿಫೆಂಡರ್ಗಳಾದ ಇರಾನಿ ಆಟಗಾರ ಅಸ್ಲಂ ಮುಸ್ತಫಾ(3), ಅಭಿನೇಶ್(3),ಸಂಕೇತ್ ಸಾವಂತ್(3), ಗೌರವ್(3) ಮತ್ತು ಮೊಹಮ್ಮದ್ರೇಜಾ ಚಿಯಾನೆಹ್(4) ಅಂಕ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಮುಂಬಾ ಪರ ವಿಶ್ವನಾಥ್(6), ಗುಮಾನ್ ಸಿಂಗ್(4), ಪ್ರಣಯ್(5) ಅಂಕ ಸಂಪಾದಿಸಿದರು.
मैट पर पुणेरी पलटन ने बिखेरा अपना जलवा 💥
— ProKabaddi (@ProKabaddi) December 8, 2023
मुम्बा के खिलाफ इस दमदार प्रदर्शन पर क्या है आपकी राय❓💬
फाइनल स्कोर 👉 43-32 #ProKabaddi #PKL #PKLSeason10 #HarSaansMeinKabaddi #PUNvMUM #PuneriPaltan #UMumba pic.twitter.com/eBqnG8cSVk
ಹ್ಯಾಟ್ರಿಕ್ ಸೋಲಿಗೆ ತುತ್ತಾದ ಬೆಂಗಳೂರು ಬುಲ್ಸ್
ದಿನದ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ತಂಡ ದಬಾಂಗ್ ಡೆಲ್ಲಿ ವಿರುದ್ಧ 38-31 ಅಂತರದ ಸೋಲು ಕಂಡಿತು. ಈ ಮೂಲಕ ಹ್ಯಾಟ್ರಿಕ್ ಸೋಲಿನ ಆಘಾತ ಎದುರಿಸಿತು. ಸತತ 2 ಸೋಲು ಕಂಡಿದ್ದ ಬುಲ್ಸ್ ತವರಿನಲ್ಲಾದರೂ ಗೆಲುವಿನ ಖಾತೆ ತೆರೆಯಬಹುದೆಂದು ಸ್ಥಳೀಯ ಕಬಡ್ಡಿ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಇದು ಹುಸಿಗೊಂಡಿತು.
ಇದನ್ನು ಓದಿ Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ
दिल्ली के मुंडों ने दर्ज की दबंग जीत 🔥
— ProKabaddi (@ProKabaddi) December 8, 2023
तूफानी प्रदर्शन ने उड़ाए बुल्स के होश 🤩
फाइनल स्कोर 👉 31-38#ProKabaddi #PKL #PKLSeason10 #HarSaansMeinKabaddi #BLRvDEL #BengaluruBulls #DabangDelhiKC pic.twitter.com/baijUCvsQ0
ದ್ವಿತೀಯಾರ್ಧದಲ್ಲಿ ಸಣ್ಣ ಮಟ್ಟದ ಹೋರಾಟ
ಮೊದಲ ಅವಧಿಯಲ್ಲಿ ನೀರಸ ಆಟವಾಡಿದ ಬುಲ್ಸ್ ದ್ವಿತೀಯಾರ್ಧದ ಆಟದಲ್ಲಿ ಫಿನಿಕ್ಸ್ನಂತೆ ಎದ್ದು ಬಂದು ಸತತವಾಗಿ ಅಂಕ ಗಳಿಸುತ್ತಾ ಸಾಗಿತು. ಮಪದಲ ಅವಧಿಯಲ್ಲಿ 5 ಅಂಕದ ಹಿನ್ನಡೆಯಲ್ಲಿದ್ದ ಬುಲ್ಸ್ 20-21 ಅಂಕದ ಪ್ರತಿರೋಧ ತೋರುವ ಮೂಲಕ ಡೆಲ್ಲಿಗೆ ತಿವಿಯುವ ಸೂಚನೆ ನೀಡಿತು. ಆದರೆ ಮತ್ತೆ ಬುಲ್ಸ್ ಆಟಗಾರರು ಹಲವು ಎಡವಟ್ಟುಗಳನ್ನು ಮಾಡಿಕೊಂಡು ಹಿನ್ನಡೆ ಅನುಭವಿಸಿದರು. ಕೊನೆಯ ಮೂರು ನಿಮಿಷದ ಆಟದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದರೂ ಗಲುವು ಮಾತ್ರ ಒಲಿಯಲಿಲ್ಲ. ನಾಯಕ ವಿಕಾಸ್ ಕಂಡೋಲಾ ಈ ಪಂದ್ಯದಲ್ಲಿ ಸಂಪೂರ್ಣ ವಿಫಲರಾದರು. 7 ರೇಡಿಂಗ್ ನಡೆಸಿ ಶೂನ್ಯ ಸುತ್ತಿದ್ದರು. ಭರವಸೆಯ ಆಟಗಾರ ಭರತ್ ಕುಮಾರ್ ಏಕಾಂಗಿಯಾಗಿ ಹೋರಾಟ ನಡೆಸಿ 15 ರೇಡಿಂಗ್ನಲ್ಲಿ 11 ಅಂಕ ಗಳಿಸಿದರು. ಸುಶೀಲ್ ಕುಮಾರ್ 5 ಅಂಕ ಗಳಿಸಿ ಭರತ್ಗೆ ಸಾಥ್ ನೀಡಿದರೂ ಉಳಿದ ಆಟಗಾರರಿಂದ ಉತ್ತಮ ಸಾಥ್ ಸಿಗದ ಕಾರಣ ತಂಡ ಅಂತಿಮವಾಗಿ 7 ಅಂಕದ ಹಿನ್ನಡೆಯಿಂದ ಸೋಲು ಕಂಡಿತು.