ನವದೆಹಲಿ: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮುಂಬರುವ ಐಪಿಎಲ್ (IPL 2024) ಆವೃತ್ತಿಗೆ ಪಂಜಾಬ್ ಕಿಂಗ್ಸ್ ತಂಡ ತನ್ನ ತವರು ಮೈದಾನವನ್ನು ಬದಲಿಸಿದೆ. ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಮೂಲಗಳ ಪ್ರಕಾರ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ಮೊಹಾಲಿಯಿಂದ ಅಪ್ರತಿಮ ಪಿಸಿಎ ಐಎಸ್ ಬಿಂದ್ರಾ ಕ್ರೀಡಾಂಗಣದಿಂದ ಮುಲ್ಲನ್ಪುರ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ. ಪಿಸಿಎ ಐಎಸ್ ಬಿಂದ್ರಾ ಕ್ರೀಡಾಂಗಣವು ಐಪಿಎಸ್ಗೆ ಪಿಬಿಕೆಎಸ್ಗೆ ಕಾಯಂ ತವರು ಸ್ಥಳವಾಗಿದೆ. ಆದರೆ, ಸೌಲಭ್ಯಗಳ ಹಿನ್ನೆಲೆಯಲ್ಲಿ ಬೇರೆ ಕಡೆಗೆ ಸ್ಥಳಾಂತರಗೊಳ್ಳಲಿದೆ.
🚨 Announcement 🚨
— Punjab Cricket Association (@pcacricket) December 31, 2023
The wait is over ! PCA New Cricket Stadium will be ready soon for IPL 2024@dilsherkhanna pic.twitter.com/u6mMr4uLSR
ಪಿಸಿಎ ಕಾರ್ಯದರ್ಶಿ ದಿಲ್ಶೇರ್ ಖನ್ನಾ ಇತ್ತೀಚೆಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ, ಐಪಿಎಲ್ ಫ್ರಾಂಚೈಸಿಯ ಪ್ರತಿನಿಧಿಗಳು ಮಲ್ಲನ್ಪುರ ಕ್ರೀಡಾಂಗಣವನ್ನು ತಪಾಸಣೆ ನಡೆಸಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಹೀಗಾಗಿ ಸುದ್ದಿಗೆ ಬಲ ಬಂದಿದೆ.
ಹೊಸದಾಗಿ ನಿರ್ಮಿಸಲಾದ ಈ ಸ್ಥಳವು ಮುಂಬರುವ ಋತುವಿನಲ್ಲಿ ಪಿಬಿಕೆಎಸ್ ಪಂದ್ಯಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚುತ್ತಿದೆ. ಜನವರಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ 20 ಐ ಮುಖಾಮುಖಿಗೆ ಮುಲ್ಲಾನ್ಪುರ ಕ್ರೀಡಾಂಗಣ ಆತಿಥ್ಯ ವಹಿಸುವ ಬಗ್ಗೆ ಆರಂಭಿಕ ಊಹಾಪೋಹಗಳಿದ್ದರೂ ಕೆಲಸಗಳು ಬಾಕಿ ಇರುವ ಕಾರಣ ಅದು ಅಷ್ಟೊಂದು ಸುಲಭವಾಗಿಲ್ಲ ಎಂದು ಹೇಳಲಾಗಿದೆ.
ಪಂಜಾಬ್ ಕಿಂಗ್ಸ್ ಹೊಸ ತವರು ಸ್ಟೇಡಿಯಮ್
ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನ ಅಧಿಕೃತ ಖಾತೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮುಲ್ಲನ್ಪುರ ಕ್ರೀಡಾಂಗಣದಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡುತ್ತಿರುವುದು ಕಂಡು ಬಂದಿದೆ. ದಿಲ್ಶೇರ್ ಖನ್ನಾ ಸಮಗ್ರ ಈ ಕುರಿತು ಮಾಹಿತಿ ನೀಡಿದ್ದಾರೆ. ಆಟದ ಪ್ರದೇಶ, ಮೈದಾನಗಳು ಮತ್ತು ಆಟಗಾರರು ಮತ್ತು ಪ್ರೇಕ್ಷಕರಿಗೆ ಪೂರೈಸುವ ಸೌಲಭ್ಯಗಳು ಸೇರಿದಂತೆ ಕ್ರೀಡಾಂಗಣದ ವಿವಿಧ ಅಂಶಗಳನ್ನು ತೋರಿಸಲಾಗಿದೆ.
ಕಾಯುವಿಕೆ ಮುಗಿದಿದೆ! ಐಪಿಎಲ್ 2024ಗಾಗಿ ಪಿಸಿಎ ಹೊಸ ಕ್ರಿಕೆಟ್ ಕ್ರೀಡಾಂಗಣ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ಬರೆಯಲಾಗಿದೆ.
ಮುಲ್ಲಾನ್ಪುರ್ ಕ್ರೀಡಾಂಗಣದ ವಿವರಣೆ
ವರದಿಗಳ ಪ್ರಕಾರ ಮುಲ್ಲನ್ಪುರ ಕ್ರೀಡಾಂಗಣವು ಸುಮಾರು 30,000 ಆಸನ ಸಾಮರ್ಥ್ಯವನ್ನು ಹೊಂದಿದೆ, ಪಾರ್ಕಿಂಗ್ ಸೌಲಭ್ಯಗಳು ಸುಮಾರು 1800 ಕಾರುಗಳಿಗೆ ಸ್ಥಳಾವಕಾಶ ಕಲ್ಪಿಸುವ ನಿರೀಕ್ಷೆಯಿದೆ.
ಪ್ರಸ್ತುತ ಕ್ರೀಡಾಂಗಣದ ಹೃದಯಭಾಗದಲ್ಲಿ 12 ಪಿಚ್ಗಳು ತಯಾರಿಯಲ್ಲಿವೆ. ಗೇಟ್ ಸಂಖ್ಯೆ 1 (ನಿಯೋಜಿತ ತಂಡದ ಪ್ರವೇಶದ್ವಾರ) ಬಳಿ ಆಯಕಟ್ಟಿನ ಸ್ಥಳದಲ್ಲಿರುವ ನೆಟ್ ಸೆಷನ್ ಪ್ರದೇಶವು ಆಟಗಾರರಿಗೆ ವಿಸ್ತಾರವಾದ ಡ್ರೆಸ್ಸಿಂಗ್ ಕೊಠಡಿಗಳಿವೆ. ಈ ಅತ್ಯಾಧುನಿಕ ಸೌಲಭ್ಯಗಳಲ್ಲಿ ಸೌನಾ ಬಾತ್, ಬಫೆ ಪ್ರದೇಶ, ಶವರ್ ಸೌಲಭ್ಯಗಳು ಮತ್ತು ಮಸಾಜ್ ಪ್ರದೇಶ ಸೇರಿವೆ.
ಈ ಸಂಭಾವ್ಯ ಬದಲಾವಣೆಯು ಅಭಿಮಾನಿಗಳಿಗೆ ಅಚ್ಚರಿ ಮೂಡಿಸುತ್ತಿದೆ. ಆಧುನಿಕ ಸೌಲಭ್ಯಗಳು ಮತ್ತು ಗಣನೀಯ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಮುಲ್ಲನ್ಪುರ್ ಕ್ರೀಡಾಂಗಣವು ಶೀಘ್ರದಲ್ಲೇ ಪಂಜಾಬ್ ಕಿಂಗ್ಸ್ ತವರು ಮೈದಾನವಾದರೆ ನಿರ್ವಹಣೆ ಹೆಚ್ಚು ಸುಲಭವಾಗಲಿದೆ.