ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ (Commonwealth Games) ಉದ್ಘಾಟನಾ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ಭಾರತೀಯ ತಂಡದ ಧ್ವಜಧಾರಿಗಳಾಗಿ ಪಥ ಸಂಚಲನದಲ್ಲಿ ತಂಡವನ್ನು ಮುನ್ನಡೆಸಿದರು.
ಭಾರತ ಇದುವರೆಗೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಒಟ್ಟಾರೆ 503 ಪದಕಗಳನ್ನು ಗೆದ್ದಿದ್ದು, ಶೇ.60ರಿಂದ 70ರಷ್ಟು ಕೊಡುಗೆ ಶೂಟಿಂಗ್ ನೀಡಿವೆ. ಅಂತೆಯೇ ನಮ್ಮ ಕುಸ್ತಿಪಟುಗಳು ಪಾರಮ್ಯ ಮೆರೆದಿದ್ದಾರೆ. ಹೀಗಾಗಿ ಹಾಲಿ ಆವೃತ್ತಿಯಲ್ಲಿ ಭಾರತಕ್ಕೆ ಪದಕಗಳ ಸಾಧ್ಯತೆಗಳ ಬಗ್ಗೆ ಕುತೂಹಲ ಉಂಟಾಗಿದೆ.
ಮೊದಲ ದಿನ ಕ್ರಿಕೆಟ್, ಬಾಕ್ಸಿಂಗ್ ಮತ್ತು ಹಾಕಿ: ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ದಿನ ( ಜುಲೈ ೨೯) ಭಾರತ ಕೆಲವು ಮಹತ್ವದ ಪಂದ್ಯಗಳಲ್ಲಿ ಭಾಗವಹಿಸಲಿದೆ. ಇದರಲ್ಲಿ ಹಾಕಿ, ಬಾಕ್ಸಿಂಗ್ ಮತ್ತು ಕ್ರಿಕೆಟ್ ಸೇರಿದೆ.
ಕ್ರಿಕೆಟ್: ಭಾರತದ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯ ಸಂಜೆ ೩.೩೦ಕ್ಕೆ ನಡೆಯಲಿದೆ. ಭಾರತೀಯ ತಂಡದ ನೇತೃತ್ವವನ್ನು ಹರ್ಮನ್‌ಪ್ರೀತ್ ಕೌರ್ ವಹಿಸಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್, sony Live ವಾಹಿನಿಯಲ್ಲಿ ನೇರ ಪ್ರಸಾರ ಇರಲಿದೆ.
ಬಾಕ್ಸಿಂಗ್: ಭಾರತದ ಪ್ರಮುಖ ಬಾಕ್ಸರ್‌ಗಳು ಕೂಡ ಸ್ಪರ್ಧಿಸಲಿದ್ದಾರೆ.
ಹಾಕಿ: ಭಾರತದ ಮಹಿಳಾ ಹಾಕಿ ತಂಡವು ಘಾನಾ ವಿರುದ್ಧ ಸಂಜೆ ೫.೩೦ಕ್ಕೆ ಆಡಲಿದೆ. ಭಾರತೀಯ ಬ್ಯಾಡ್ಮಿಂಟನ್ ತಂಡ (mixed team) ಸಂಜೆ ೬.೩೦ಕ್ಕೆ ಪಾಕಿಸ್ತಾನವನ್ನು ಎದುರಿಸಲಿದೆ.