ನವ ದೆಹಲಿ : ೨೦೧೯ನೇ ಸಾಲಿನ ವಿಶ್ವ ಚಾಂಪಿಯನ್ ಪಿ. ವಿ ಸಿಂಧೂ ಮುಂಬರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್ (World Championship) ಟೂರ್ನಿಗೆ ಅಲಭ್ಯರಾಗಿದ್ದಾರೆ. ಬರ್ಮೀಂಗ್ಹಮ್ ಕಾಮನ್ವೆಲ್ತ್ ಗೇಮ್ಸ್ ವೇಳೆಯಲ್ಲಿ ಅವರು ಗಾಯಗೊಂಡಿದ್ದು, ಫಿಸಿಯೊ ವಿಶ್ರಾಂತಿ ಸೂಚಿಸಿರುವ ಕಾರಣ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಈ ಬಗ್ಗೆ ಶನಿವಾರ ಸಂಜೆ ಟ್ವೀಟ್ ಮಾಡಿರುವ ಅವರು ಶೀಘ್ರದಲ್ಲೇ ಗುಣಮುಖರಾಗಿ ಬರುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ನಾನು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಖುಷಿಯಲ್ಲಿದ್ದೇ. ದುರದೃಷ್ಟವಶಾತ್ ನಾನು ವಿಶ್ವ ಚಾಂಪಿಯನ್‌ಷಿಪ್‌ನಿಂದ ಹೊರಗುಳಿಯಬೇಕಾಗಿದೆ. ಬರ್ಮಿಂಗ್ಹಮ್‌ನಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಡುವ ಗಾಯದ ಆತಂಕಕ್ಕೆ ಒಳಗಾದೆ. ಆದರೆ, ಕೋಚ್ ಹಾಗೂ ತರಬೇತುದಾರರ ನೆರವಿನಿಂದ ಸಾಧ್ಯವಾದಷ್ಟು ಆಡಿದೆ. ಆದರೆ, ಫೈನಲ್ ಪಂದ್ಯ ಮುಕ್ತಾಯಗೊಂಡ ಬಳಿಕ ನೋವು ಹೆಚ್ಚಾಯಿತು. ಹೈದರಾಬಾದ್‌ಗೆ ಮರಳಿದ ತಕ್ಷಣ ಎಮ್‌ಆರ್‌ಐ ಸ್ಕ್ಯಾನ್‌ಗೆ ಒಳಗಾದೆ. ನನ್ನ ಎಡಗಾಲಿನ ಮಾಂಸಖಂಡದಲ್ಲಿ ಒತ್ತಡ ಗಾಯ ಉಂಟಾಗಿದೆ. ವೈದ್ಯರು ಕೆಲವು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಅಭ್ಯಾಸಕ್ಕೆ ಮರಳುವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | CWG- 2022 | ಪಿ. ವಿ ಸಿಂಧೂ ಸುಂದರ ಆಟಕ್ಕೆ ಒಲಿದ ಬಂಗಾರ, ಬರ್ಮಿಂಗ್ಹಮ್‌ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ