Site icon Vistara News

Badminton: ಚೀನಾದ ವಾಂಗ್‌ ಜಿ ಯಿ ಮಣಿಸಿದ ಪಿ. ವಿ ಸಿಂಧೂಗೆ ಸಿಂಗಾಪುರ ಓಪನ್‌ ಚಾಂಪಿಯನ್‌ ಪಟ್ಟ

badminton

ಸಿಂಗಾಪುರ: ಭಾರತದ ಮುಂಚೂಣಿ ಬ್ಯಾಡ್ಮಿಂಟನ್‌ (Badminton) ಆಟಗಾರ್ತಿ ಪಿ ವಿ ಸಿಂಧೂ, ಇಲ್ಲಿ ಮುಕ್ತಾಯಗೊಂಡ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಇದು ಅವರಿಗೆ 2022ನೇ ಸಾಲಿನಲ್ಲಿ ದೊರೆತ ಮೂರನೇ ಪ್ರಶಸ್ತಿಯಾಗಿದ್ದು, ಈ ಹಿಂದೆ ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಹಾಗೂ ಸ್ವಿಸ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ವಿಶ್ವದ ಏಳನೇ ಶ್ರೇಯಾಂಕದ ಆಟಗಾರ್ತಿ ಪಿ. ವಿ ಸಿಂಧೂ, ಚೀನಾದ ವಾಂಗ್‌ ಜಿ ಯಿ ವಿರುದ್ಧ 21-9, 11-21, 21-15 ಗೇಮ್‌ಗಳಿಂದ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟರು. ಇದು ಹೈದರಾಬಾದ್‌ ಮೂಲದ ಬ್ಯಾಡ್ಮಿಂಟನ್‌ ಪ್ರತಿಭೆಯ ಮುಡಿಗೇರಿದ ಚೊಚ್ಚಲ ಸಿಂಗಾಪುರ ಓಪನ್‌ ಪ್ರಶಸ್ತಿ ಹಾಗೂ ವರ್ಲ್ಡ್‌ ಟೂರ್‌ನ ಸೂಪರ್‌ ಸೀರಿಸ್‌ 500 ವಿಭಾಗದಲ್ಲಿ ಮೊದಲ ಬಂಗಾರದ ಪದಕ.

ಜಿದ್ದಾಜಿದ್ದಿನಿಂದ ಕೂಡಿದ್ದ ಹಣಾಹಣಿಯಲ್ಲಿ ಮೊದಲ ಗೇಮ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಷಟ್ಲರ್‌, ಮೊದಲ ಗೇಮ್‌ನಲ್ಲಿ ಜಯ ಗಳಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ಪರಾಜಯ ಎದುಸಿದರು. ಆದರೆ, ಮೂರನೇ ಗೇಮ್‌ನಲ್ಲಿ ಸಂಪೂರ್ಣ ಪಾರ್ಮಯ ಸಾಧಿಸಿ ಗೆಲುವಿನ ಕೇಕೆ ಹಾಕಿದರು.

ಇದನ್ನೂ ಓದಿ | Badminton | ಸಿಂಧೂ ಗೆದ್ದರು, ಸೈನಾ ಮತ್ತದೇ ಕತೆ

ಸಿಂಧೂ ಸೆಮಿಫೈನಲ್‌ ಪಂದ್ಯದಲ್ಲಿ ಜಪಾನ್‌ನ ಸಹೇನಾ ಕವಕಮಿ ವಿರುದ್ಧ 21-15, 21-7 ಗೇಮ್‌ಗಳಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದಿದ್ದರು.

ಇದನ್ನೂ ಓದಿ | Malaysia Open: ಸಿಂಧೂ, ಪ್ರಣಯ್‌ ಕ್ವಾರ್ಟರ್‌ಫೈನಲ್ಸ್‌ಗೆ

Exit mobile version