ಚೆನ್ನೈ: ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್(Ravichandran Ashwin) ಅವರು ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ(TNPL) ಡಿಆರ್‌ಎಸ್(DRS) ಕೇಳಿರುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video) ಆಗಿದೆ. ಬುಧವಾರ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ.
ಡಿಂಡಿಗಲ್ ತಂಡವನ್ನು ಮುನ್ನಡೆಸುತ್ತಿರುವ ಆರ್. ಅಶ್ವಿನ್ ಅವರು ತಿರುಚ್ಚಿ ವಿರುದ್ದದ ಪಂದ್ಯದಲ್ಲಿ ಡಿಆರ್‌ಎಸ್ ತೀರ್ಪಿಗೆ ಮತ್ತೊಂದು ಡಿಆರ್‌ಎಸ್ ಪಡೆದ ಅಪರೂಪದ ಪ್ರಸಂಗ ನಡೆಯಿತು. 13ನೇ ಓವರ್ ನಡೆಸುತ್ತಿದ್ದ ಅಶ್ವಿನ್ ಅವರ ಅಂತಿಮ ಎಸೆತದಲ್ಲಿ ತಿರುಚ್ಚಿ ತಂಡದ ಆಟಗಾರ ರಾಜ್‌ಕುಮಾರ್ ಕೀಪರ್ ಕ್ಯಾಚ್ ಔಟ್ ಆದರು. ಇದನ್ನು ಅಂಪೈರ್ ಅವರು ಆರಂಭದಲ್ಲಿ ಔಟ್ ಎಂದು ತೀರ್ಪು ನೀಡಿದರು.
ಅಂಪೈರ್ ಅವರ ತೀರ್ಪಿಗೆ ಸಮಾಧಾನಗೊಳ್ಳದ ರಾಜ್‌ಕುಮಾರ್ ಅವರು ಡಿಆರ್‌ಎಸ್ ಮೊರೆ ಹೋದರು. ಈ ವೇಳೆ ಚೆಂಡು ಬ್ಯಾಟ್ಗೆ ತಗಲದಿರುವುದು ಸ್ಪಷ್ಟವಾಗಿ ಮೈದಾನದ ಪರದೆಯಲ್ಲಿ ಕಾಣಿಸಿತು. ಬ್ಯಾಟ್ ನೆಲಕ್ಕೆ ಬಡಿದ ಕಾರಣ ಶಬ್ದ ಬಂದಿರುವುದಾಗಿ ತೀರ್ಮಾನಿಸಿದ ಅಂಪೈರ್ ತಮ್ಮ ತೀರ್ಪನ್ನು ತಿದ್ದಿ ನಾಟ್ಔಟ್ ಎಂದು ಘೋಷಿಸಿದರು. ಆದರೆ ಆರ್ ಅಶ್ವಿನ್ ಅವರು ಅಂಪೈರ್ ಅವರ ತೀರ್ಪಿನ ಹೊರತಾಗಿಯೂ ಮತ್ತೆ ಡಿಆರ್‌ಎಸ್ ಮೊರೆ ಹೋದರು. ಆರಂಭದಲ್ಲಿ ಬ್ಯಾಟ್ ನೆಲಕ್ಕೆ ಬಡಿದರೂ ಮತ್ತೆ ಚೆಂಡಿಗೆ ಬಡಿದಿದೆ ಎಂಬುದು ಅಶ್ವಿನ್ ಅವರ ವಾದವಾಗಿತ್ತು,. ಅಶ್ವಿನ್ ಡಿಆರ್‌ಎಸ್ ಪಡೆದ ಕಾರಣ ಮತ್ತೆ ಟಿವಿ ಅಂಪೈರ್ ಇದನ್ನು ಪರೀಕ್ಷಿಸಿದರು. ಈ ವೇಳೆಯೂ ನಾಟ್ಔಟ್ ನಿರ್ಧಾರ ಪ್ರಕಟಗೊಂಡಿತು.
ಇದನ್ನೂ ಓದಿ Viral video: ಒಂದೇ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟ ನಾಯಕ; ವಿಡಿಯೊ ವೈರಲ್
2 reviews in one ball, one by batter and one by bowler (Ashwin).
— Johns. (@CricCrazyJohns) June 14, 2023
Rarest of incident in world cricket. pic.twitter.com/jB1zZ9qcmw
ಅನುಭವಿ ಆಟಗಾರನಾಗಿಯೂ ಅಶ್ವಿನ್ ಅವರು ಮತ್ತೊಂದು ಡಿಆರ್‌ಎಸ್ ಪಡೆದುಕೊಂಡಿರುವ ವಿಡಿಯೊ ಇದೀಗ ಎಲ್ಲೆಡೆ ವೈರಲ್ ಆಗಿದೆ. ಜತೆಗೆ ನೆಟ್ಟಿಗರು ಅವರನ್ನು ಟ್ರೋಲ್ ಕೂಡ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನ ನಂ.1 ಬೌಲರ್ ಆಗಿರುವ ಅಶ್ವಿನ್ಗೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಆಡುವ ಬಳಗದಲ್ಲಿ ಅವಕಾಶ ನೀಡದ ಕುರಿತು ಬಿಸಿಸಿಐ ಮತ್ತು ಟೀಮ್ ಇಂಡಿಯಾದ ವಿರುದ್ಧ ಹಲವು ಟೀಕೆಗಳು ಬಂದಿದ್ದವು. ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್, ಸುನೀಲ್ ಗವಾಸ್ಕರ್ ಸೇರಿ ಅನೇಕರು ಅಶ್ವಿನ್ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದಿನ ತಿಂಗಳು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಅವಕಾಶ ಪಡೆಯುವ ಸಾಧ್ಯತೆ ಇದೆ.