Site icon Vistara News

ಮಂಕಡಿಂಗ್​ ಮಾಡದೆ ಜಾನ್ಸೆನ್​ಗೆ ಜೀವದಾನ ನೀಡಿದ ಅಶ್ವಿನ್​; ಅಚ್ಚರಿ ಎಂದ ನೆಟ್ಟಿಗರು

R Ashwin

ಜೊಹಾನ್ಸ್​ಬರ್ಗ್​: ಹಿಂದೊಮ್ಮೆ ಐಪಿಎಲ್​ನಲ್ಲಿ ಜಾಸ್​ ಬಟ್ಲರ್​ ಅವರನ್ನು ಮಂಕಡಿಂಗ್(Mankadig)​ ಔಟ್​ ಮಾಡಿ ಭಾರೀ ಟ್ರೋಲ್ ಮತ್ತು ಟೀಕೆ ಎದುರಿಸಿದ್ದ ಟೀಮ್​ ಇಂಡಿಯಾದ ಅನುಭವಿ ಸ್ಪಿನ್ನರ್​ ಆರ್​.ಅಶ್ವಿನ್(R Ashwin),​ ದಕ್ಷಿಣ ಆಫ್ರಿಕಾ ವಿರುದ್ಧ ಇಂದು ಮುಕ್ತಾಯ ಕಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಮಂಕಡಿಂಗ್ ಮಾಡಲು ಮುಂದಾಗಿ ಬಳಿಕ ಹಿಂದೆ ಸರಿದ ಘಟನೆ ನಡೆದಿದೆ. ಅಶ್ವಿನ್​ ಮಂಕಡಿಂಗ್​ ಪ್ರಯತ್ನದ ಫೋಟೊ ವೈರಲ್​ ಆಗಿದೆ.

​ಮೂರನೇ ದಿನದಾಟದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಾರ್ಕೊ ಜಾನ್ಸೆನ್(Marco Jansen)​ ಅವರು ಅಶ್ವಿನ್​ ಓವರ್​ನಲ್ಲಿ ಬೌಲಿಂಗ್​ ನಡೆಸುವ ಮುನ್ನವೇ ನಾನ್​ ಸ್ಟ್ರೇಕ್​ ಬಿಟ್ಟು ಮುಂದೆ ಸಾಗಿದ್ದರು. ಈ ವೇಳೆ ಮಂಕಡಿಂಗ್​ ಮಾಡುವಂತೆ ಅಶ್ಚಿನ್​ ಎಚ್ಚರಿಸಿದರೆ. ಆದರೆ, ಮಂಕಡಿಂಗ್​ ಮಾಡಲಿಲ್ಲ. ಇದರ ಫೋಟೊಗಳು ವೈರಲ್​ ಆಗಿದ್ದು ಕೆಲ ನೆಟ್ಟಿಗರು ಮತ್ತೆ ಅಶ್ವಿನ್​ ಅವರನ್ನು ಟ್ರೋಲ್​ ಮಾಡಿದ್ದಾರೆ.

ಅಶ್ವಿನ್​ಗೆ ಐಪಿಎಲ್​ ವೇಳೆ ಎದುರಿಸಿದ ಟ್ರೋಲ್​ ಮತ್ತು ಮೀಮ್ಸ್​ಗಳು ನೆನೆಪಿಗೆ ಬಂದಿರಬೇಕು ಇದೇ ಕಾರಣಕ್ಕೆ ಅವರು ಮಂಕಡಿಂಗ್​ ಮಾಡಿಲ್ಲ ಎಂದು ಕೆಲ ನೆಟ್ಟಿಗರು ಸಾಮಾಜಿಕ ಮಾಧ್ಯಗಳಲ್ಲಿ ಕಮೆಂಟ್​ ಮಾಡಿದ್ದಾರೆ. ಈ ಪಂದ್ಯದಲ್ಲಿ ಅಶ್ವಿನ್​ ಕವಲ ಒಂದು ವಿಕೆಟ್​ ಮಾತ್ರ ಪಡೆದರು. ಬ್ಯಾಟಿಂಗ್​ನಲ್ಲಿಯೂ ಸಂಪೂರ್ಣ ವೈಫಲ್ಯ ಕಂಡರು. ಮೊದಲ ಇನಿಂಗ್ಸ್​ನಲ್ಲಿ 8 ರನ್ ಬಾರಿಸಿದರೆ, ದ್ವಿತೀಯ ಇನಿಂಗ್ಸ್​ನಲ್ಲಿ ಶೂನ್ಯ ಸುತ್ತಿದರು.

ಅಶ್ವಿನ್​ ಅವರು ಪಂಜಾಬ್​ ಕಿಂಗ್ಸ್​ ಪರ ಆಡುತ್ತಿದ್ದ ವೇಳೆ ಬಟ್ಲರ್​ ಅವರನ್ನು ಮಂಕಡಿಂಗ್​ ಮೂಲಕ ಔಟ್​ ಮಾಡಿ ಭಾರಿ ಸುದ್ದಿಯಾಗಿದ್ದರು. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಕೆಲವರು ಅಶ್ವಿನ್​ ಅವರನ್ನು ಟೀಕಿಸಿದ್ದರು. ಇದೀಗ ಈ ನಿಯಮ ಜಾರಿಯಲ್ಲಿದ್ದರೂ ಅಶ್ವಿನ್​ ಮಂಕಡಿಂಗ್​ ಮಾಡದೆ ಇರುವುದು ಅಚ್ಚರಿ ತಂದಿದೆ.

ಇದನ್ನೂ ಓದಿ IND vs SA: ಇನಿಂಗ್ಸ್​, 32 ರನ್​ಗಳ ಸೋಲಿಗೆ ತುತ್ತಾದ ಭಾರತ

ಏನಿದು ಮಂಕಡಿಂಗ್​ ಔಟ್​

ಕ್ರಿಕೆಟ್‌ ಆಟದಲ್ಲಿ ಬೌಲರ್‌ ಒಬ್ಬ ಚೆಂಡನ್ನು ಬ್ಯಾಟರ್​ನತ್ತ ಎಸೆಯುವ ಮೊದಲೇ ನಾನ್‌ ಸ್ಟ್ರೈಕ್‌ ನಲ್ಲಿರುವ ಬ್ಯಾಟರ್​ ಕ್ರೀಸ್‌ ಬಿಟ್ಟಿದ್ದರೆ ಆಗ ಬೌಲರ್‌ ಆತನನ್ನು ರನೌಟ್‌ ಮಾಡುವ ಅವಕಾಶವನ್ನು ಕ್ರಿಕೆಟ್‌ ಕಾನೂನಿನ 41.46 ನಿಯಮ ನೀಡುತ್ತದೆ. ನಾನ್‌ ಸ್ಟ್ರೈಕ್​ನಲ್ಲಿರುವ ಬ್ಯಾಟರ್​ ಒಬ್ಬನನ್ನು ಆತನ ಅರಿವಿಗೆ ಬರದಂತೆ ರನೌಟ್‌ ಮಾಡುವ ವಿಧಾನ ಇದಾಗಿದೆ. ಈ ಅವಕಾಶ ಆ ಓವರ್‌ ಬೌಲಿಂಗ್‌ ಮಾಡುತ್ತಿರುವ ಬೌಲರ್​ಗೆ ಮಾತ್ರವೇ ಇರುತ್ತದೆ. ಮತ್ತು ಇದು ಸಂಪೂರ್ಣವಾಗಿ ಬೌಲರೊಬ್ಬನ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿರುತ್ತದೆ.

ಮಂಕಡಿಂಗ್ ಹೆಸರು ಬರಲು ಕಾರಣವೇನು?

1947ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕ್ವೀನ್ಸ್‌ ಲ್ಯಾಂಡ್‌ ವಿರುದ್ಧದ ಪಂದ್ಯವೊಂದರಲ್ಲಿ ಭಾರತದ ಎಡಗೈ ಸ್ಪಿನ್ನರ್‌ ವೀನೂ ಮಂಕಡ್‌ ಅವರು ಬಿಲ್‌ ಬ್ರೌನ್‌ ಅವರನ್ನು ನಾನ್‌ ಸ್ಟ್ರೈಕ್‌ ಭಾಗದಲ್ಲಿ ರನೌಟ್‌ ಮಾಡಿದ್ದರು. ಆ ಬಳಿಕ ಕ್ರಿಕೆಟ್‌ ನ ಈ ವಿಚಿತ್ರ ನಿಯಮಕ್ಕೆ ‘ಮಂಕಡ್‌’ ನಿಯಮ ಎಂದೇ ಪ್ರಸಿದ್ಧಿ ಪಡೆಯಿತು.

Exit mobile version