ಆಕ್ಲೆಂಡ್: ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ಆಟಗಾರನಾಗಿರುವ ನ್ಯೂಜಿಲ್ಯಾಂಡ್ನ ರಚಿನ್ ರವೀಂದ್ರ(Rachin Ravindra) ಅವರು ಚೆನ್ನೈ ತಮಡದ ಅಭಿಮಾನಿಗೆ ಆಟೋಗ್ರಾಫ್ ನೀಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭ್ಯಾಸಕ್ಕೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಸಿಎಸ್ಕೆ ತಂಡದ ಅಭಿಮಾನಿಯೊಬ್ಬ ದಾರಿ ಮಧ್ಯೆ ಕಂಡ ತಕ್ಷಣ ರಚಿನ್ ಕಾರಿನಿಂದ ಇಳಿದು ಆತನ ಬಳಿ ಇದ್ದ ಚೆನ್ನೈ ಸೂಪರ್ ಸಿಂಗ್ಸ್ನ ಪೋಸ್ಟರ್ ಮೇಲೆ ತಮ್ಮ ಸಹಿ ಹಾಕಿದ್ದಾರೆ.
ರಚಿನ್ ಅವರು ಚೆನ್ನೈ ಪರ ಆಡುವ ಮುನ್ನವೇ ತಂಡದ ಅಭಿಮಾನಿಯನ್ನು ಪ್ರೀತಿಯಿಂದ ಕಂಡ ಗುಣವನ್ನು ಸಿಎಸ್ಕೆ ಅಭಿಮಾನಿಗಳು ಕೊಂಡಾಡಿದ್ದಾರೆ. ನೀವು ಐಪಿಎಲ್ ಆರಂಭಕ್ಕೂ ಮುನ್ನವೇ ನಮ್ಮ ಮನ ಗೆದ್ದಿದ್ದೀರ ಎಂದು ಈ ವಿಡಿಯೊಗೆ ಕಮೆಂಟ್ ಮಾಡಿದ್ದಾರೆ. ರಚಿನ್ ಅವರನ್ನು ಡಿಸೆಂಬರ್ 19ರಂದು ದುಬೈನಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ 1.80 ಕೋಟಿ ರೂ. ನೀಡಿ ಖರೀದಿಸಿತು.
Rachin Ravindra is a CSKian 👌
— Johns. (@CricCrazyJohns) January 1, 2024
– Rachin giving autograph to a CSK fan. pic.twitter.com/sstjHhwy9N
ರಚಿನ್ ಅವರಿಗೆ ಇದು ಚೊಚ್ಚಲ ಐಪಿಎಲ್ ಟೂರ್ನಿಯಾಗಿದೆ. ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್ ಆಟಗಾರನಾಗಿರುವ ರಚಿನ್ ರವೀಂದ್ರ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಮಿಂಚಿದ್ದರು. ಚೊಚ್ಚಲ ಬಾರಿ ವಿಶ್ವಕಪ್ನಲ್ಲಿ ಆಡಿದ್ದ ಅವರು 3 ಶತಕ ಬಾರಿಸಿ ಗಮನಸೆಳೆದಿದ್ದರು. ಅಲ್ಲದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿ ಅನೇಕರ ದಾಖಲೆಗಳನ್ನು ಮುರಿದಿದ್ದರು. ಒಟ್ಟಾರೆ ಅವರು 10 ಪಂದ್ಯಗಳನ್ನು ಆಡಿ 578 ರನ್ ಬಾರಿಸಿದ್ದರು.
ಇದನ್ನೂ ಓದಿ IPL 2024 : ಲಕ್ನೊ ತಂಡದೊಳಗೆ ಭರ್ಜರಿ ಸರ್ಜರಿ, ತಂಡದಿಂದ ಮತ್ತೊಬ್ಬರ ನಿರ್ಗಮನ
ಚೆನ್ನೈ ತಂಡದಲ್ಲಿ ಈ ಬಾರಿ ಒಟ್ಟು ನಾಲ್ಕು ಆಟಗಾರರು ನ್ಯೂಜಿಲ್ಯಾಂಡ್ ತಂಡದವರಾಗಿದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ಬದಲು ಚೆನ್ನೈ ಸೂಪರ್ ಕಿವೀಸ್ ಎಂದು ಹೊಸ ಹೆಸರಿಟ್ಟಿದ್ದಾರೆ. ಮಿಚೆಲ್ ಸ್ಯಾಂಟ್ನರ್ ಮತ್ತು ಡೆವೋನ್ ಕಾನ್ವೆ ಅವರನ್ನು ಚೆನ್ನೈ ತಂಡ ತನ್ನ ಬಳಿಯೇ ಉಳಿಸಿಕೊಂಡಿತ್ತು. ಈ ಬಾರಿಯ ಹರಾಜಿನಲ್ಲಿ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಅವರನ್ನು ಖರೀದಿ ಮಾಡಿದೆ. ಹೀಗಾಗಿ ಕಿವೀಸ್ನ ನಾಲ್ಕು ಆಟಗಾರರು ಈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ತಂಡದಲ್ಲಿದ್ದ ಶಾರ್ದೂಲ್ ಠಾಕೂರ್ ಅವರು ಮತ್ತೆ ಚೆನ್ನೈ ಸೇರಿದ್ದಾರೆ.
ಸಿಎಸ್ಕೆ ಹರಾಜಿನಲ್ಲಿ ಖರೀದಿಸಿದ ಆಟಗಾರರು
ರಚಿನ್ ರವೀಂದ್ರ- 1.80 ಕೋಟಿ (ಮೂಲ ಬೆಲೆ 50 ಲಕ್ಷ ರೂ.)
ಶಾರ್ದೂಲ್ ಠಾಕೂರ್- 4 ಕೋಟಿ (ಮೂಲ ಬೆಲೆ 2 ಕೋಟಿ ರೂ.)
ಡೇರಿಲ್ ಮಿಚೆಲ್- 14 ಕೋಟಿ (ಮೂಲ ಬೆಲೆ 1 ಕೋಟಿ ರೂ.)
ಸಮೀರ್ ರಿಝ್ವಿ- 8.40 ಕೋಟಿ (ಮೂಲ ಬೆಲೆ 20 ಲಕ್ಷ ರೂ.)
ಮುಸ್ತಫಿಜುರ್ ರೆಹಮಾನ್- 2 ಕೋಟಿ (ಮೂಲ ಬೆಲೆ 2 ಕೋಟಿ ರೂ.)
ಅವಿನಾಶ್- 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)