Site icon Vistara News

Rachin Ravindra : ಮಗನ ಹೆಸರಲ್ಲಿರುವುದು ಸಚಿನ್​- ದ್ರಾವಿಡ್ ಅಲ್ಲ, ರಚಿನ್ ಅಪ್ಪ ಯೂಟರ್ನ್​

Rachin Ravindra

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ರಚಿನ್ ರವೀಂದ್ರ (Rachin Ravindra) ನ್ಯೂಜಿಲೆಂಡ್ ಪರ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಪಂದ್ಯಾವಳಿಯಲ್ಲಿ ಪಾದಾರ್ಪಣೆ ಮಾಡಿದ ಅವರು ಅಮೋಘ ಪ್ರದರ್ಶನ ನೀಡಿ ಮೂರು ಶತಕಗಳನ್ನು ಗಳಿಸಿದ್ದಾರೆ. ಅವರು ತಂಡದ ಸೆಮಿಫೈನಲ್ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರು ಚರ್ಚೆಯಲ್ಲಿರು ಅಥ್ಲೀಟ್ ಆಗಿದ್ದಾರೆ. ಅವರ ಮೂಲ ಬೆಂಗಳೂರು ಎಂಬುದು ಆಸಕ್ತಿಯ ಸಂಗತಿಯಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಅವರ ಹೆಸರು ಭಾರತೀಯ ಬ್ಯಾಟಿಂಗ್ ಮಾಂತ್ರಿಕರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರಿನ ಮೊದಲ ಅಕ್ಷಗಳಿಂದ ಸಂಯೋಜನೆಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ಅವರ ತಂದೆ ಈ ಹಿಂದೆ ಹೇಳಿಕೊಂಡಿದ್ದರು ಎಂಬುದಾಗಿಯೂ ಉಲ್ಲೇಖಿಸಲಾಗಿತ್ತು. ಆದರೆ, ಅವರ ತಂದೆ ಇದೀಗ ಯೂಟರ್ನ್​ ಹೊಡೆದಿದ್ದು ಮಗನ ಹೆಸರಿಗೂ ಸಚಿನ್​-ದ್ರಾವಿಡ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ವಿಶ್ವಕಪ್​ನ ಅಧಿಕೃತ ಪ್ರಸಾರಕರೊಂದಿಗಿನ ನೇರ ಚಾಟ್​ ವೇಳೆ ಯುವ ಆಟಗಾರನ ವಿಶಿಷ್ಟ ಹೆಸರಿನ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದರು. ಆದರೀಗ ಆ ಹೆಸರು ಅಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ನ್ಯೂಜಿಲೆಂಡ್​ಗೆ ವಲಸೆ ಬಂದಿದ್ದ ಬೆಂಗಳೂರು ಮೂಲದ ಅವರ ತಂದೆ, ರಚಿನ್ ಹೆಸರನ್ನು ಸೂಚಿಸಿದ್ದು ಪತ್ನಿ ಎಂಬುದಾಗಿ ಹೇಳಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಸಚಿನ್ ಮತ್ತು ರಾಹುಲ್ ಅವರ ಹೆಸರುಗಳು ಆತನ ಹೆಸರಿನ ಜತೆಗೆ ಬೆರೆತುಕೊಂಡಿದೆ ಎಂಬುದಾಗಿ ರಚಿನ್ ಅಪ್ಪ ರವಿ ಕೃಷ್ಣಮೂರ್ತಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ICC World Cup 2023 : 9 ಬೌಲರ್​ಗಳನ್ನು ಬಳಸಿ ನೂತನ ಮೈಲುಗಲ್ಲು ಸ್ಥಾಪಿಸಿದ ಭಾರತ

“ರಚಿನ್ ಜನಿಸಿದಾಗ, ನನ್ನ ಹೆಂಡತಿ ಹೆಸರನ್ನು ಸೂಚಿಸಿದಳು. ಮತ್ತು ನಾವು ಅದರ ಬಗ್ಗೆ ಚರ್ಚಿಸಲು ಹೆಚ್ಚು ಸಮಯವನ್ನು ಕಳೆಯಲಿಲ್ಲ. ಹೆಸರು ಚೆನ್ನಾಗಿತ್ತು, ಉಚ್ಚರಿಸಲು ಸುಲಭವಾಗಿತ್ತು ಮತ್ತು ಚಿಕ್ಕದಾಗಿತ್ತು, ಆದ್ದರಿಂದ ನಾವು ಅದನ್ನೇ ಒಪ್ಪಿಕೊಂಡೆವು. ಕೆಲವು ವರ್ಷಗಳ ನಂತರವೇ ಈ ಹೆಸರು ರಾಹುಲ್ ಮತ್ತು ಸಚಿನ್ ಅವರ ಹೆಸರುಗಳ ಮಿಶ್ರಣವಾಗಿದೆ ಎಂಬುದು ನಮಗೆ ಅರಿವಾಯಿತು. ನಮ್ಮ ಮಗುವನ್ನು ಕ್ರಿಕೆಟಿಗನನ್ನಾಗಿ ಮಾಡುವ ಉದ್ದೇಶದಿಂದ ಅವರ ಹೆಸರನ್ನು ಇಟ್ಟಿಲ್ಲ ಎಂಬುದಾಗಿ ಅವರ ತಂದೆ ರವಿ ಕೃಷ್ಣಮೂರ್ತಿ ಹೇಳಿದ್ದಾರೆ.

ದಾಖಲೆಗಳನ್ನು ಬರೆದ ರಚಿನ್​

ಹೆಸರಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಆದರೆ ರಚಿನ್ ಅವರ ಕ್ರಿಕೆಟ್​ ಅಷ್ಟೇ ಆಕರ್ಷಣೀಯವಾಗಿದೆ. ಅವರು ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ತ್ವರಿತವಾಗಿ ಬರೆಯುತ್ತಿದ್ದಾರೆ. ಅವರು ಈಗಾಗಲೇ 25 ನೇ ವಯಸ್ಸಿನಲ್ಲಿ ವಿಶ್ವಕಪ್​​ನಲ್ಲಿ ಹೆಚ್ಚು ರನ್ ಮತ್ತು ಶತಕಗಳನ್ನು ಗಳಿಸುವಂತಹ ತೆಂಡೂಲ್ಕರ್ ಅವರ ಒಂದೆರಡು ದಾಖಲೆಗಳನ್ನು ಮುರಿದಿದ್ದಾರೆ. ಪ್ರಸ್ತುತ, ಅವರು 565 ರನ್ ಗಳಿಸಿದ್ದು, ರನ್ ಸ್ಕೋರಿಂಗ್ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಭಾರತದ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ನಂತರದ ಸ್ಥಾನದಲ್ಲಿದ್ದಾರೆ.ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಮುಖಾಮುಖಿ ಸಮೀಪಿಸುತ್ತಿದ್ದಂತೆ, ಎಲ್ಲರ ಕಣ್ಣುಗಳು ನಿಸ್ಸಂದೇಹವಾಗಿ ಕಿವೀಸ್ ಆಲ್​ರೌಂಡರ್ ಮೇಲೆ ನೆಟ್ಟಿವೆ.

ರವೀಂದ್ರ ಅವರ ಅಜ್ಜಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಅವರ ಆಶೀರ್ವಾದ ಪಡೆಯಲು ಅವರ ಮನೆಗೆ ಹೋಗಿದ್ದರು. ಈ ವೇಳೆ ಅವರ ಅಜ್ಜಿ ಮೊಮ್ಮಗನ ದೃಷ್ಟಿ ತೆಗೆದಿದ್ದರು. ಕಾಗೆ ಕಣ್ಣು, ಗೂಬೆ ಕಣ್ಣು ಎಂದು ದೃಷ್ಟಿ ತೆಗೆದು ಮೊಮ್ಮಗನನ್ನು ಸುರಕ್ಷಿತವಾಗಿ ಇಡುವಂತೆ ದೇವರಿಗೆ ಪ್ರಾರ್ಥನೆ ಮಾಡಿದ್ದರು. ಈ ವಿಡಿಯೊ ವೈರಲ್ ಆಗಿತ್ತು. ಭಾರತಕ್ಕೆ ಇದು ಸತತ ನಾಲ್ಕನೇ ವಿಶ್ವಕಪ್​ನಲ್ಲಿ ನಾಲ್ಕನೇ ಸೆಮಿಫೈನಲ್ ಪಂದ್ಯವಾಗಿದೆ. ಆದಾಗ್ಯೂ, 2019 ರಲ್ಲಿ ಇಂಗ್ಲೆಂಡ್​​ನಲ್ಲಿ ನಡೆದ ಹಿಂದಿನ ವಿಶ್ವಕಪ್ನ ಸೆಮಿಫೈನಲ್​ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಸೋತಿತ್ತು.

Exit mobile version