Site icon Vistara News

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

women's Cricket team

ಬೆಂಗಳೂರು: ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ವಿರುದ್ಧದ 5 ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು (Womens Cricket Team) ಎಲ್ಲಾ ಪಂದ್ಯಗಳನ್ನು ಗೆದ್ದು 0-5 ಅಂತರದ ಗೆಲುವು ಸಾಧಿಸಿದೆ. ಪ್ರವಾಸಿ ಭಾರತ ತಂಡ ಈ ಮೂಲಕ ಆತಿಥೇಯ ತಂಡಕ್ಕೆ ಭರ್ಜರಿ ಮುಖಭಂಗ ಮಾಡಿದೆ/. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ 20 ವಿಶ್ವಕಪ್​​ಗೆ ತಯಾರಿ ನಡೆಸುತ್ತಿರುವ ಭಾರತಕ್ಕೆ ಈ ಸರಣಿ ವಿಶೇಷವಾಗಿ ಮಹತ್ವದ್ದಾಗಿದೆ.

ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಒವರ್​ಗಳಲ್ಲಿ 5 ವಿಕೆಟ್​​ ನಷ್ಟಕ್ಕೆ 156 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ಗೆ 135 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಐದನೇ ಓವರ್​ನಲ್ಲಿ ಶಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಂಡಿತು. ನಂತರ ಉಪನಾಯಕಿ ಸ್ಮೃತಿ ಮಂದಾನ ಮತ್ತು ದಯಾಳನ್ ಹೇಮಲತಾ ಅವರು 8 ಓವರ್ ಗಳಲ್ಲಿ ಸ್ಕೋರ್ ಅನ್ನು 62-2 ಕ್ಕೆ ಕೊಂಡೊಯ್ದರು, ಸ್ಮೃತಿ ಓವರ್ ನ ಕೊನೆಯ ಎಸೆತದಲ್ಲಿ ಔಟಾದರು.

ಇದನ್ನೂ ಓದಿ: IPL 2024 : ಲಕ್ನೊ ತಂಡದ ನಾಯಕನ ಸ್ಥಾನದಿಂದ ರಾಹುಲ್ ಔಟ್​?

ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಹೇಮಲತಾ 60 ರನ್ ಗಳ ಜೊತೆಯಾಟವನ್ನು ನಿರ್ಮಿಸಿದರು, ಆದರೆ ಭಾರತವು ಸತತ ಎಸೆತಗಳಲ್ಲಿ ಎರಡೂ ವಿಕೆಟ್ ಗಳನ್ನು ಕಳೆದುಕೊಂಡಿತು. ಸಜನಾ ಸಜೀವನ್ ಕೂಡ ಅಗ್ಗವಾಗಿ ಔಟಾದರು. ಈ ವೇಳೆ ಭಾರತವು 124 ರನ್​ಗೆ 5 ವಿಕೆಟ್ ಕಳೆದುಕೊಂಡಿತು. ರಿಚಾ ಘೋಷ್ ಅವರ ನಿರ್ಣಾಯಕ ಹಂತದಲ್ಲಿ 21 ಎಸೆತಗಳಲ್ಲಿ 28 ರನ್ ಗಳಿಸುವ ಮೂಲಕ ತಂಡವನ್ನು 156 ರನ್​ಗಳತ್ತ ಮುನ್ನಡೆಸಿದರು. ಬಾಂಗ್ಲಾ ಪರ ಶೊರಿಫಾ ಖತುನ್ (28ಕ್ಕೆ 2) ಹಾಗೂ ನಹೀದಾ ಅಕ್ತರ್ (27ಕ್ಕೆ 2) ತಲಾ 2 ವಿಕೆಟ್ ಪಡೆದರು.

ಬಾಂಗ್ಲಾ ಬ್ಯಾಟರ್​ಗಳನ್ನು ಕಾಡಿದ ರಾಧಾ

ಭಾರತೀಯ ಬೌಲರ್​ಗಳು ನಿಯಮಿತವಾಗಿ ವಿಕೆಟ್​ಗಳನ್ನು ಉರುಳಿಸಿದ ಕಾರಣ ಬಾಂಗ್ಲಾದೇಶದ ಬ್ಯಾಟರ್​ಗಳಿಗೆ ಚೇತರಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿಲ್ಲ. ಇದು ಆತಿಥೇಯರ ಮೇಲೆ ಒತ್ತಡ ಹೇರಿತು. ಮೂರು ಬೌಂಡರಿಗಳನ್ನು ಹೊಡೆದ ನಂತರ ಅಪಾಯಕಾರಿಯಾಗಿ ಕಾಣುತ್ತಿದ್ದ ಶೋಭನಾ ಮೊಸ್ತಾರಿ ಅವರನ್ನು ಟಿಟಾಸ್ ಸಧು ತನ್ನ ಎರಡನೇ ಓವರ್​ನಲ್ಲಿ ಔಟ್ ಮಾಡಿದರು. ರಾಧಾ ಯಾದವ್ ತಮ್ಮ ಮೊದಲ ಓವರ್​ನಲ್ಲಿ ದಿಲಾರಾ ಅಕ್ಟರ್ ಅವರನ್ನು ಔಟ್ ಮಾಡುವ ಮೂಲಕ ಪ್ರಭಾವ ಬೀರಿದರು.

9 ನೇ ಓವರ್​ನಲ್ಲಿ ಬಾಂಗ್ಲಾದೇಶದ ನಾಯಕಿನಿಗರ್ ಸುಲ್ತಾನಾ ಮತ್ತು ರುಬಿಯಾ ಹೈದರ್ ಅವರ ವಿಕೆಟ್​​ಗಳನ್ನು ಪಡೆದ ರಾಧಾ ಬಾಂಗ್ಲಾದೇಶವನ್ನು 48 ರನ್​ಗಳಿಗೆ 5 ವಿಕೆಟ್​ ಕಳೆದುಕೊಳ್ಳುವಂತೆ ನೋಡಿಕೊಂಡರು. ರಿತು ಮೋನಿ ಅವರ ಹೋರಾಟದ ಇನಿಂಗ್ಸ್​ ಹೊರತಾಗಿಯೂ ಬಾಂಗ್ಲಾದೇಶವು 21 ರನ್​ಗಳಿಂದ ಸೋತಿತು. ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಆಶಾ ಶೋಭನಾ ಭಾರತದ ಪರ 2 ವಿಕೆಟ್ ಪಡೆದರು.

ಸಿಲ್ಹೆಟ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಧಾ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ರಾಧಾ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು ಮತ್ತು ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಸರಣಿಯ ಆಟಗಾರ್ತಿ ಪ್ರಶಸ್ತಿಯನ್ನೂ ಪಡೆದರು.

ಸಂಕ್ಷಿಪ್ತ ಸ್ಕೋರ್: ಭಾರತ ಮಹಿಳಾ ತಂಡ: 156/5 (20 ಓವರ್ )[ಹೇಮಲತಾ 37(28), ಸ್ಮೃತಿ ಮಂದಾನ 33(25); ರಬೆಯಾ ಖಾನ್ 2/28 (4), ನಹೀದಾ ಅಕ್ಟರ್ 2/27 (4)]

ಬಾಂಗ್ಲಾದೇಶ ಮಹಿಳಾ ತಂಡ : 135-6 (20 ಓವರ್ ಗಳು) [ರಿತು ಮೋನಿ 37(33), ಶೋರಿಫಾ ಖತುನ್ 28(21); ರಾಧಾ ಯಾದವ್ 3/24 (4), ಆಶಾ ಶೋಭನಾ 2/25 (4)] 21 ರನ್ ಗಳಿಂದ.

Exit mobile version