ಅಹಮದಾಬಾದ್: ಏಕದಿನ ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೆ ಕೆ.ಎಲ್ ರಾಹುಲ್ (KL Rahul) ಪಾತ್ರರಾಗಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ನಲ್ಲಿ ಮಿಚೆಲ್ ಮಾರ್ಷ್ ಕ್ಯಾಚ್ ಪಡೆಯುವ ಮೂಲಕ ರಾಹುಲ್ 2023 ರ ವಿಶ್ವಕಪ್ನಲ್ಲಿ ತಮ್ಮ 17 ನೇ ಬಲಿಯನ್ನು ಪಡೆದುಕೊಂಡರು. ಅವರು ಹಾಲಿ ಕೋಚ್ ಹಾಗೂ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದಿದ್ದಾರೆ.
2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ನಲ್ಲಿ ದ್ರಾವಿಡ್ 15 ಕ್ಯಾಚ್ಗಳು ಹಾಗೂ 1 ಸ್ಟಂಪಿಂಗ್ ದಾಖಲೆಯನ್ನು ಮಾಡಿದ್ದರು. ಭಾನುವಾರ ನಡೆದ ಫೈನಲ್ನಲ್ಲಿ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿದರು. ಮೂರು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿ ಅನಿಶ್ಚಿತತೆಯಲ್ಲಿದ್ದ ಭಾರತ ತಂಡಕ್ಕೆ ಚೇತರಿಸಿಕೊಳ್ಳಲು ಸಹಾಯ ಮಾಡಿದರು.
🚨 Milestone Alert 🚨
— BCCI (@BCCI) November 19, 2023
1⃣7⃣ dismissals as a wicketkeeper & counting! 👏 👏
KL Rahul now holds the record for the Most Dismissals in a World Cup edition for #TeamIndia as a wicketkeeper 🔝
Follow the match ▶️ https://t.co/uVJ2k8mWSt #CWC23 | #MenInBlue | #INDvAUS | #Final pic.twitter.com/o9kJvozcEF
ವಿಶ್ವ ಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತ ವಿಕೆಟ್ ಕೀಪರ್ಗಳ ವಿವರ
- ಕೆಎಲ್ ರಾಹುಲ್ 11 ಪಂದ್ಯ, 17 ವಿಕೆಟ್, 16 ಕ್ಯಾಚ್, 1 ಸ್ಪಂಪ್, 2023 ವರ್ಷ
- ರಾಹುಲ್ ದ್ರಾವಿಡ್ 11 ಪಂದ್ಯ 16 ವಿಕೆಟ್ 15 ಕ್ಯಾಚ್ 1 ಸ್ಟಂಪ್ 2003 ವರ್ಷ
- ಎಂಎಸ್ ಧೋನಿ 8 ಪಂದ್ಯ 15 ವಿಕೆಟ್ 15 ಕ್ಯಾಚ್ 0 ಸ್ಟಂಪ್ 2015 ವರ್ಷ
- ಸೈಯದ್ ಕಿರ್ಮಾನಿ 8 ಪಂದ್ಯ 14 ವಿಕೆಟ್ 12 ಕ್ಯಾಚ್ 2 ಸ್ಟಂಪ್ಡ್ 1983 ವರ್ಷ
- ಕಿರಣ್ ಮೋರೆ 6 ಪಂದ್ಯ 11 ವಿಕೆಟ್ 6 ಕ್ಯಾಚ್ 5 ಸ್ಟಂಪ್ 1987 ವರ್ಷ
1983ರಲ್ಲಿ ಕನಿಷ್ಠ ಮೊತ್ತ ಬಾರಿಸಿ ರಕ್ಷಿಸಿ ಟ್ರೋಫಿ ಗೆದ್ದಿದ್ದ ತಂಡ
ಆಸ್ಟ್ರೇಲಿಯಾ ತಂಡ ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಭಾರತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಗಿದೆ. ದೊಡ್ಡ ಮೊತ್ತ ಕೂಡಿಕೆಯಾಗುವ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಇದು ಕನಿಷ್ಠ ಮೊತ್ತವೆಂದು ಹೇಳಲಾಗುತ್ತಿದೆ. ಇದು ಭಾರತ ತಂಡದ ಗೆಲುವಿಗೆ ಸಾಕೇ ಎಂಬುದು ಪ್ರಶ್ನೆಯಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಫೈನಲ್ನಲ್ಲಿ ಏಳು ಬಾರಿ ಗೆದ್ದಿದೆ. ಮೊದಲು ಬೌಲಿಂಗ್ ಮಾಡಿದ ಐದು ತಂಡಗಳು ಜಯ ಸಾಧಿಸಿದೆ. ಹೀಗಾಗಿ ಭಾರತ ತಂಡ ತಾನು ಪೇರಿಸಿದ 240 ರನ್ಗಳನ್ನು ಕಾಪಾಡಿಕೊಳ್ಳುವುದೇ ಎಂದು ಕಾದು ನೋಡಬೇಕಾಗಿದೆ. ಆದರೆ, ಭಾರತ ತಂಡವೇ ಅತ್ಯಂತ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡು ಪ್ರಶಸ್ತಿ ಗೆದ್ದಿರುವ ಇತಿಹಾಸವಿದೆ.
ಇದನ್ನೂ ಓದಿ: ICC World Cup 2023 : ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಸೆಲೆಬ್ರಿಟಿಗಳ ದಂಡು
ಏಕದಿನ ವಿಶ್ವಕಪ್ ಫೈನಲ್ ನಲ್ಲಿ ರಕ್ಷಿಸಲಾದ ಅತ್ಯಂತ ಕಡಿಮೆ ಸ್ಕೋರ್ ಯಾವುದು?
1983ರ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 183 ರನ್ ಗಳಿಸಿತ್ತು. ಏಕದಿನ ವಿಶ್ವಕಪ್ ಫೈನಲ್ನಲ್ಲಿ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಅತ್ಯಂತ ಕಡಿಮೆ ಸ್ಕೋರ್ ಅದಾಗಿದೆ. ಮೊಹಿಂದರ್ ಅಮರ್ನಾಥ್ ಮತ್ತು ಮದನ್ ಲಾಲ್ ತಲಾ 3 ವಿಕೆಟ್ ಪಡೆದಿದ್ದರು. ಈ ಮೂಲಕ ಭಾರತದ ಬೌಲರ್ಗಳು ಬಲಿಷ್ಠ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೈನ್ಅಪ್ ಅನ್ನು 140 ರನ್ಗಳಿಗೆ ಸೀಮಿತಗೊಳಿಸಿ ಟ್ರೋಫಿ ಗೆದ್ದಿತ್ತು. ಇದು ವಿಶ್ವ ಕಪ್ ಇತಿಹಾಸದಲ್ಲಿ ತಂಡವೊಂದು ಕನಿಷ್ಠ ಮೊತ್ತವನ್ನು ರಕ್ಷಿಸಿ ಗೆದ್ದ ಸಂದರ್ಭವಾಗಿದೆ. 1992ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 249 ರನ್ ಬಾರಿಸಿದ್ದು ವಿಶ್ವಕಪ್ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಎರಡನೇ ಕನಿಷ್ಠ ಮೊತ್ತವಾಗಿದೆ.
ಏಕದಿನ ವಿಶ್ವಕಪ್ ಫೈನಲ್ ಚೇಸಿಂಗ್ನಲ್ಲಿ ಆಸ್ಟ್ರೇಲಿಯಾದ ದಾಖಲೆ ಏನು?
ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಒಟ್ಟು ಮೂರು ಬಾರಿ ಚೇಸ್ ಮಾಡಿ. ಎರಡು ಬಾರಿ ಗೆದ್ದಿದೆ ಮತ್ತು ಒಂದು ಬಾರಿ ಸೋತಿದೆ. 1975ರ ವಿಶ್ವಕಪ್ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 17 ರನ್ಗಳ ಸೋಲಿಗೆ ಒಳಗಾಗಿತ್ತು