ನ್ಯೂಯಾರ್ಕ್: ಟೀಮ್ ಇಂಡಿಯಾ ಇಂದು(ಬುಧವಾರ) ಐರ್ಲೆಂಡ್(India vs Ireland) ವಿರುದ್ಧ ತನ್ನ ಮೊದಲ ಟಿ20 ವಿಶ್ವಕಪ್(T20 World Cup 2024) ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಮುಖ್ಯ ಕೋಚ್(head coach Rahul Dravid) ರಾಹುಲ್ ದ್ರಾವಿಡ್(Rahul Dravid) ಅವರು ಉರ್ದುವಿನಲ್ಲಿ(Dravid Speaks Urdu) ಮಾತನಾಡಿ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ್ರಾವಿಡ್ ತಮ್ಮ ತಂಡದ ತಯಾರಿಯ ಬಗ್ಗೆ ಮಾತನಾಡುವ ವೇಳೆಯಲ್ಲಿ ಉರ್ದು ಭಾಷೆಯಲ್ಲಿಯೂ ಮಾತನಾಡಿದರು. ‘ಈ ಸ್ವರೂಪದ ಕ್ರಿಕೆಟ್ನಲ್ಲಿ ಯಾರನ್ನೂ ಕಡೆಗಣಿಸಲು ಅಥವಾ ಯಾರನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಉರ್ದುವಿನಲ್ಲಿ ಹೇಳಿ ಜೋರಾಗಿ ನಕ್ಕಿದ್ದಾರೆ. ಜತೆಗೆ ವೆಲ್ ಡನ್ ರಾಹುಲ್ ಎಂದು ಸ್ವತಃ ತಮ್ಮನ್ನು ತಾವೇ ಪ್ರಶಂಶಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿದ್ದ ಪತ್ರಕರ್ತರು ಕೂಡ ಜೋರಾಗಿ ನಗಾಡಿದ್ದಾರೆ. ದ್ರಾವಿಡ್ ಉರ್ದುವಿನಲ್ಲಿ ಮಾತನಾಡಿದ ವಿಡಿಯೊ ವೈರಲ್(viral video) ಆಗಿದೆ.
ಇದನ್ನೂ ಓದಿ Rahul Dravid: ಕೋಚ್ ಹುದ್ದೆಯಲ್ಲಿ ಮುಂದುವರಿಯಲ್ಲ; ಅಧಿಕೃತ ಹೇಳಿಕೆ ನೀಡಿದ ದ್ರಾವಿಡ್
ಟಿ20 ವಿಶ್ವಕಪ್ ಟೂರ್ನಿ ಬಳಿಕ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈಗಾಗಲೇ ಅವರು ತಮ್ಮ ಈ ನಿರ್ಧಾರವನ್ನು ಕೂಡ ಪ್ರಕಟಿಸಿದ್ದಾರೆ. ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು. ದ್ರಾವಿಡ್ ಕೋಚ್ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್-19 ಕ್ರಿಕೆಟ್ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್ ತಂಡದಲ್ಲಿ ಸಿಗಲಿಲ್ಲ.
ದ್ರಾವಿಡ್ಗೆ ಟೀಮ್ ಇಂಡಿಯಾದ ಕೋಚಿಂಗ್ ಬಗ್ಗೆ ಮೊದಲಿನಿಂದಲೇ ಆಸಕ್ತಿ ಇರಲಿಲ್ಲ. ಆದರೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರ ಒತ್ತಾಯದ ಮೇರೆಗೆ ದ್ರಾವಿಡ್ ಕೋಚ್ ಹುದ್ದೆ ವಹಿಸಿಕೊಂಡಿದ್ದರು. ಕೊನೆಯ ಬಾರಿಗೆ ಕೋಚಿಂಗ್ ನಡೆಸುತ್ತಿರುವ ದ್ರಾವಿಡ್ ಟಿ20 ವಿಶ್ವಕಪ್ನಲ್ಲಾದರೂ ಕಪ್ ಗೆದ್ದು ಗೆಲುವಿನ ವಿದಾಯ ಸಿಗಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಶಯ.