ಬೆಂಗಳೂರು: ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಐಪಿಎಲ್ (IPL 2024) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಈ ಕುರಿತು ಮಾತುಕತೆ ನಡೆಯುತ್ತಿದೆ ಎಂಬುದಾಗಿ ವರದಿಯಾಗಿದೆ. ಎಲ್ಲವೂ ನಿಗದಿಯಂತೆ ನಡೆದರೆ, ದ್ರಾವಿಡ್ ಅವರು ಐಪಿಎಲ್ 2024 ಕ್ಕೆ ಮುಂಚಿತವಾಗಿ ಎಲ್ಎಸ್ಜಿ ಮಾರ್ಗದರ್ಶಕರಾಗಬಹುದು. ಆದರೆ ಇದೆಲ್ಲವೂ ದ್ರಾವಿಡ್ ಮತ್ತು ಬಿಸಿಸಿಐ ನಡುವಿನ ಮಾತುಕತೆಯನ್ನು ಆಧರಿಸಿರುತ್ತದೆ.
ಏಕದಿನ ವಿಶ್ವಕಪ್ ಮುಕ್ತಾಯದೊಂದಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗುವ ಬಿಸಿಸಿಐ ಮತ್ತು ದ್ರಾವಿಡ್ ನಡುವಿನ ಒಪ್ಪಂದ ಕೊನೆಗೊಂಡಿದೆ. 2021 ರ ಟಿ 20 ವಿಶ್ವಕಪ್ ನಂತರ ಅವರನ್ನು ಈ ವರ್ಷದ ವಿಶ್ವಕಪ್ ವರೆಗೆ ಎರಡು ವರ್ಷಗಳ ಒಪ್ಪಂದಕ್ಕಾಗಿ ಪುರುಷರ ತಂಡದ ಹೆಡ್ ಕೋಚ್ ಆಗಿ ನೇಮಿಸಲಾಗಿತ್ತು. ರವಿಶಾಸ್ತ್ರಿ ಅವರ ಅಧಿಕಾರಾವಧಿ ಮುಗಿದ ನಂತರ ದ್ರಾವಿಡ್ ಈ ಹುದ್ದೆಯನ್ನು ವಹಿಸಿಕೊಳ್ಳುವಂತೆ ಮನವೊಲಿಸುವಲ್ಲಿ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಪ್ರಸ್ತುತ ಕಾರ್ಯದರ್ಶಿ ಜಯ್ ಶಾ ಯಶಸ್ವಿಯಾಗಿದ್ದರು. ಆದರೆ, ಅವರಿಗೆ ಇದೀಗ ಹುದ್ದೆಯನ್ನು ಮುಂದುವರಿಯು ಉದ್ದೇಶವಿಲ್ಲ ಎಂದು ಹೇಳಲಾಗಿದೆ.
ಉತ್ತಮ ಪ್ರದರ್ಶನ ನೀಡಿದ್ದ ಭಾರತ
ದ್ರಾವಿಡ್ ಮುಂದಾಳತ್ವದಲ್ಲಿ ಭಾರತ ಕ್ರಿಕೆಟ್ ತಂಡ ಐಸಿಸಿ ಟ್ರೋಫಿಯನ್ನು ಗೆಲ್ಲಲಿಲ್ಲ. ಆದರೆ ದ್ವಿಪಕ್ಷೀಯ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಭಾರತ ಪ್ರಸ್ತುತ ಎಲ್ಲಾ ಮೂರು ಸ್ವರೂಪಗಳಲ್ಲಿ ನಂ.1 ಶ್ರೇಯಾಂಕದ ತಂಡವಾಗಿದೆ. ವಿಶ್ವಕಪ್ನಲ್ಲಿ ಸತತ 10 ಪಂದ್ಯಗಳನ್ನು ಗೆದ್ದಿದ್ದರೂ ಫೈನಲ್ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಅಡೆತಡೆಯನ್ನು ದಾಟಲು ವಿಫಲಗೊಂಡಿದ್ದರು.
ದೈನಿಕ್ ಜಾಗರಣ್ ಪ್ರಕಾರ, ದ್ರಾವಿಡ್ ಅವರ ಭವಿಷ್ಯದ ಕ್ರಮದ ಬಗ್ಗೆ ತಿಳಿಯಲು ಬಿಸಿಸಿಐ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ. ಆದರೆ ಅವರು ವಿಸ್ತರಣೆಯನ್ನು ಕೋರುವ ಸಾಧ್ಯತೆಯಿಲ್ಲ. ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿದ್ದಾರೆ ಎನ್ನಲಾಗಿದೆ. ತಂಡದ ಬಿಡುವಿಲ್ಲದ ವೇಳಾಪಟ್ಟಿ ಮತ್ತು ನಿರಂತರ ಪ್ರಯಾಣದಿಂದಾಗಿ ಅವರು ಭಾರತದ ಮುಖ್ಯ ತರಬೇತುದಾರರಾಗಿ ಮುಂದುವರಿಯುವುದಿಲ್ಲ ಎಂದು ಹೇಳಲಾಗಿದೆ.
ಐಪಿಎಲ್ ಫ್ರಾಂಚೈಸಿಯೊಂದಿಗಿನ ಒಡನಾಟವು ದ್ರಾವಿಡ್ಗೆ ಅನುಕೂಲಕರವಾಗಿದೆ. ಐಪಿಎಲ್ ಕೇವಲ ಎರಡು ತಿಂಗಳ ಕಾಲ ನಡೆಯಲಿದ್ದು. ಇದು ದ್ರಾವಿಡ್ ಅವರಿಗೆ ಕುಟುಂಬದೊಂದಿಗೆ ಇರಲು ಮತ್ತು ತರಬೇತುದಾರರಾಗಿ ಆಟದೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿಸುತ್ತದೆ.
ಎಲ್ಎಸ್ಜಿಯಿಂದ ಡಿಮ್ಯಾಂಡ್
ಎಲ್ಎಸ್ಜಿ ಮ್ಯಾನೇಜ್ಮೆಂಟ್ ದ್ರಾವಿಡ್ ತಮ್ಮ ಸಹಾಯಕ ಸಿಬ್ಬಂದಿಯ ಭಾಗವಾಗಬೇಕೆಂದು ಬಯಸಿದ್ದರು. ಆದರೆ ಟೀಮ್ ಇಂಡಿಯಾದೊಂದಿಗಿನ ಲೆಜೆಂಡರಿ ಕ್ರಿಕೆಟಿಗನ ಒಡನಾಟದಿಂದಾಗಿ ಅದು ಸಾಧ್ಯವಾಗಿರಲಿಲ್ಲ ಒಂದು ವೇಳೆ ದ್ರಾವಿಡ್ ಭಾರತದ ಮುಖ್ಯ ಕೋಚ್ ಆಗಿ ಮುಂದುವರಿಯದಿದ್ದರೆ ಅವರು ‘ದಿ ವಾಲ್’ ಜೊತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ : ICC World Cup 2023 : ಭಾರತದ ಅಭಿಮಾನಿಗಳ ಬಾಯಿ ಮುಚ್ಚಿಸ್ತೇವೆ; ಕಮಿನ್ಸ್ ಮಾತಿನ ಅರ್ಥವೇನು?
ಗೌತಮ್ ಗಂಭೀರ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ತೆರಳಿದ ನಂತರ ಎಲ್ಎಸ್ಜಿಯಲ್ಲಿ ಮೆಂಟರ್ ಹುದ್ದೆ ಖಾಲಿ ಇದೆ. ಗಂಭೀರ್ ಕಳೆದ ಎರಡು ವರ್ಷಗಳಿಂದ ಎಲ್ಎಸ್ಜಿಯ ಮಾರ್ಗದರ್ಶಕರಾಗಿದ್ದರು ಮತ್ತು ತಂಡವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮಾಜಿ ಆರಂಭಿಕ ಆಟಗಾರ ಈಗ ಏಳು ವರ್ಷಗಳ ಕಾಲ ನಾಯಕತ್ವ ವಹಿಸಿದ್ದ ಕೆಕೆಆರ್ಗೆ ಮರಳಲು ನಿರ್ಧರಿಸಿದ್ದಾರೆ.
ಎಲ್ಎಸ್ಜಿ ಈಗಾಗಲೇ ತಮ್ಮ ಮುಖ್ಯ ಕೋಚ್ ಆಂಡಿ ಫ್ಲವರ್ ಅವರೊಂದಿಗೆ ಬೇರ್ಪಟ್ಟಿದೆ. ಜಸ್ಟಿನ್ ಲ್ಯಾಂಗರ್ ಮುಂದಿನ ಋತುವಿನಿಂದ ತಂಡದ ಉಸ್ತುವಾರಿ ವಹಿಸಲಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಅವರು ದ್ರಾವಿಡ್ ಅವರನ್ನು ಸೇರಿಸಿಕೊಳ್ಳಲಿದೆ.
ಭಾರತದ ಹೆಡ್ ಕೋಚ್ ಯಾರು?
ದ್ರಾವಿಡ್ ಅವರು ವಿಸ್ತರಣೆಗೆ ಒಪ್ಪದಿದ್ದರೆ ಪ್ರಸ್ತುತ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಭಾರತದ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ದ್ರಾವಿಡ್ ಅವರಿಗೆ ವಿರಾಮ ನೀಡಿದಾಗಲೆಲ್ಲಾ ಲಕ್ಷ್ಮಣ್ ಅವರ ಸ್ಥಾನವನ್ನು ತುಂಬುತ್ತಿದ್ದರು. ಎನ್ಸಿಎ ಲಕ್ಷ್ಮಣ್ ಅವರ ಒಡನಾಟವು ಅವರಿಗೆ ಇಡೀ ವ್ಯವಸ್ಥೆಯ ಬಗ್ಗೆ ಅವರಿವು ಮೂಡಸದೆ. ಅವರು ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ತವರು ಟಿ 20 ಐ ಸರಣಿಗೆ ಮಧ್ಯಂತರ ತರಬೇತುದಾರರಾಗಿ ಯುವ ಭಾರತೀಯ ತಂಡದೊಂದಿಗೆ ಇದ್ದಾರೆ.