Site icon Vistara News

IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

IPL 2024

ಜೈಪುರ: ಫಾರ್ಮ್​ಗೆ ಮರಳಿದ ಯಶಸ್ವಿ ಜೈಸ್ವಾಲ್ ಅವರ ಅಬ್ಬರದ ಶತಕ (104 ರನ್, 60 ಎಸೆತ, 9 ಫೋರ್, 7 ಸಿಕ್ಸರ್​) ಬ್ಯಾಟಿಂಗ್ ಹಾಗೂ ಸಂದೀಪ್​ ಶರ್ಮಾ (4 ಓವರ್, 18 ರನ್, 5 ವಿಕೆಟ್​​) ಅವರ ಮಾರಕ ಬೌಲಿಂಗ್ ದಾಳಿಯಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 38ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 9 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿದೆ. ಈ ಗೆಲುವು ಆರ್​ಆರ್​ ತಂಡಕ್ಕೆ ಸತತ ಮೂರು ಹಾಗೂ ಒಟ್ಟು ಏಳನೇ ವಿಜಯವಾಗಿದೆ. ಹೀಗಾಗಿ ಪ್ಲೇಆಫ್ ಹಂತಕ್ಕೆ ಬಹುತೇಕ ಏರಿದೆ. ಅತ್ತ ಮುಂಬೈ ತಂಡ ಟೂರ್ನಿಯಲ್ಲಿ ಐದನೇ ಸೋಲಿಗೆ ಒಳಗಾಗಿದೆ. ಹೀಗಾಗಿ ಪ್ಲೇಆಫ್​ ಪ್ರವೇಶದ ಹಾದಿ ದುರ್ಗಮ ಎನಿಸಿದೆ.

ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

ಯಶಸ್ವಿ ಶತಕದ ಮುಂದೆ ಮಂಕಾದ ಮುಂಬೈ ಬೌಲರ್​ಗಳು

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ನೆರವಾದರು. ಬಟ್ಲರ್​ 25 ಎಸೆತಕ್ಕೆ 35 ರನ್ ಬಾರಿಸ ಔಟಾದರೆ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ 60 ಎಸೆತಕ್ಕೆ ಅಜೇಯ 104 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್​ 28 ಎಸೆತಕ್ಕೆ 38 ರನ್​ ಬಾರಿಸಿ ಕೊನೇ ತನಕ ಉಳಿದರು.

ಸಂದೀಪ್​ ಮಾರಕ ದಾಳಿಗೆ ಬೆಚ್ಚಿ ಬಿದ್ದ ಮುಂಬೈ

ಬದಲಿ ಆಟಗಾರನಾಗಿ ಆರ್​ಆರ್​ ಬಳಗ ಸೇರಿದ್ದ ಸಂದೀಪ್​ ಶರ್ಮಾ ಆರ್​ಆರ್​ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದರು. ಅದಕ್ಕೆ ಬೆಚ್ಚಿ ಬಿದ್ದ ಮುಂಬೈ ತಂಡ ಆರಂಭದಲ್ಲಿಯೇ ಸತತವಾಗಿ ವಿಕೆಟ್​ ಕಳೆದುಕೊಂಡಿತು. ರೋಇತ್ ಶರ್ಮಾ 6 ರನ್ ಬಾರಿಸಿದರೆ ಇಶಾನ್ ಕಿಶನ್​ ಶೂನ್ಯಕ್ಕೆ ಔಟಾದರು. ಸೂರ್ಯಕುಮಾರ್ ಯಾದವ್​ 10 ರನ್​ಗೆ ಔಟಾಗಿ ನಿರ್ಗಮಿಸಿದರು. 20 ರನ್​ಗೆ 3 ವಿಕೆಟ್​ ಕಳೆದುಕೊಂಡ ಮುಂಬಯಿ ಸಂಕಷ್ಟಕ್ಕೆ ಬಿತ್ತು.

ಇದನ್ನೂ ಓದಿ: Hardik Pandya : ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​​ನಲ್ಲಿ ಮತ್ತೆ ವಿಫಲ; ಬೆಂಡೆತ್ತಿದ ಅಭಿಮಾನಿಗಳು

ಈ ವೇಳೆ ಆಡಲು ಬಂದ ತಿಲಕ್ ವರ್ಮಾ ಅಬ್ಬರದಿಂದ ಬ್ಯಾಟ್ ಬೀಸಿದರು. ಏತನ್ಮಧ್ಯೆ ಐದನೇ ಕ್ರಮಾಂಕದಲ್ಲಿ ಆಡಿದ ನಬಿ 23 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ ಆ ಬಳಿಕ ಅವಕಾಶ ಪಡೆದ ನೇಹಲ್ ವದೇರಾ 24 ಎಸೆಗಳಿಗೆ 49 ರನ್ ಬಾರಿಸಿದರು. ಈ ಹಂತದಲ್ಲಿ ಮುಂಬೈ 200 ರನ್​​ಗಳ ಗಡಿ ದಾಟುವ ಅವಕಾಶ ಸೃಷ್ಟಿಸಿತು. ಅದರೆ, ಆ ಬಳಿಕ ಬಂದ ಪಾಂಡ್ಯ ಎಸೆತಕ್ಕೆ ಒಂದು ರನ್​ಗಳಂತೆ 10 ರನ್​ಗೆ ಔಟಾದರು. ಅವರ ವೈಫಲ್ಯ ಉಳಿದವರಿಗೂ ತಟ್ಟಿತು. ಟಿಮ್ ಡೇವಿಡ್ 3 ರನ್ ಬಾರಿಸಿ ಔಟಾದರು. ಕೊನೇ ಓವರ್​ನಲ್ಲಿ ಸಂದೀಪ್ ಶರ್ಮಾ 3 ವಿಕೆಟ್ ಪಡೆದು ಐದು ವಿಕೆಟ್ ಸಾಧನೆ ಮಾಡಿದರು.

Exit mobile version