ಧರ್ಮಶಾಲಾ: ಪ್ಲೇ ಆಫ್ ರೇಸ್ನಲ್ಲಿ ಕ್ಷೀಣ ಅವಕಾಶ ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆತಿಥೇಯ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಈ ತಂಡ ಯಾವುದು ಎಂಬುದು ಪಂದ್ಯದ ಕೌತುಕ.
ಒಂದೇ ದೋಣಿಯ ಎರಡು ಪಯಣಿಗರಾದ ರಾಜಸ್ಥಾನ್ ಮತ್ತು ಪಂಜಾಬ್ ಈ ಪಂದ್ಯದಲ್ಲಿ ಯಾರೇ ಗೆದ್ದರೂ ಕೂಡ ಪ್ಲೇ ಆಫ್ ಪ್ರವೇಶಿಸುವುದು ಕಷ್ಟಕರ. ಏಕೆಂದರೆ ಇತ್ತಂಡಗಳ ರನ್ರೇಟ್ ಕಳಪೆಯಾಗಿದೆ. ಜತೆಗೆ ತನಗಿಂತ ಮೇಲಿರುವ ತಂಡಗಳು ಸೋಲು ಕಂಡರೆ ಮಾತ್ರ ಆಗ ತಂಡಕ್ಕೆ ಪ್ಲೇ ಆಫ್ ಟಿಕೆಟ್ ಸಿಗುವ ಸಾಧ್ಯತೆಯೊಂದು ಇದೆ.
ಆರಂಭಿಕ ಹಂತದಲ್ಲಿ ಅಬ್ಬರ ಆಟವಾಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ರಾಜಸ್ಥಾನ್ ಆ ಬಳಿಕ ಸತತ ಪಂದ್ಯಗಳನ್ನು ಸೋಲುತ್ತಾ ಸಾಗಿ ಇದೀಗ ಟೂರ್ನಿಯ ನಿರ್ಗಮನದ ಬಾಗಿಲಿಗೆ ಬಂದು ನಿಂತಿದೆ. ವಿಶ್ವದ ಅಗ್ರ ಕ್ರಿಕೆಟಿಗರನ್ನು ಹೋಂದಿರುವ ತಂಡ ಎಂಬ ಖ್ಯಾತಿ ಪಡೆದಿದ್ದ ಸಂಜು ಪಡೆ ಕಳೆದ ಆರ್ಸಿಬಿ ವಿರುದ್ಧ ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು. ಕೇವಲ 59ರನ್ಗೆ ಆಲೌಟ್ ಆಗಿ ತೀವ್ರ ಮುಖಭಂಗ ಎದುರಿಸಿತ್ತು. ಈ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ತೋರಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2023: ಕೊಹ್ಲಿ ಸಂಪೂರ್ಣ ಬ್ಯಾಟಿಂಗ್ ಫಾರ್ಮ್ಗೆ ಮರಳಿದ್ದಾರೆ; ಪಾಂಟಿಂಗ್ ವಾರ್ನಿಂಗ್ ನೀಡಿದ್ದು ಯಾರಿಗೆ?
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಅರ್ಶ್ದೀಪ್ ಸಿಂಗ್.
ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೈಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಯಜ್ವೇಂದ್ರ ಚಹಲ್, ಟ್ರೆಂಟ್ ಬೌಲ್ಟ್