Site icon Vistara News

IPL 2023: ಟಾಸ್​ ಗೆದ್ದ ರಾಜಸ್ಥಾನ್​; ಕೆಕೆಆರ್​ಗೆ ಬ್ಯಾಟಿಂಗ್​ ಆಹ್ವಾನ

shimron hetmyer and andre russell

ಕೋಲ್ಕೊತಾ: ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳುವ ಮಹತ್ವದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಟಾಸ್​​ ಗೆದ್ದ ರಾಜಸ್ಥಾನ್ ರಾಯಲ್ಸ್​​ ತಂಡದ ನಾಯಕ ಸಂಜು ಸ್ಯಾಮ್ಸನ್​ ಅವರು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್​ ಸೋತ ನಿತೀಶ್​ ರಾಣಾ ಪಡೆ ಮೊದಲು ಬ್ಯಾಟಿಂಗ್​ ನಡೆಸಲಿದೆ. ಉಭಯ ತಂಡಗಳ ಈ ಹಣಾಹಣಿ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆಯುತ್ತಿದೆ.

ಕೆಕೆಆರ್ ಈ ಋತುವಿನಲ್ಲಿ ನಿಧಾನಗತಿಯ ಆರಂಭ ಹೊಂದಿತ್ತು. ಬಳಿಕ ಗೆಲುವಿನ ಲಯ ಪಡೆದುಕೊಂಡಿತು. ಹೀಗಾಗಿ ಆ ತಂಡ ಇನ್ನೂ ಪ್ಲೇಆಫ್ ಸ್ಪರ್ಧೆಯಲ್ಲಿದೆ. ಅತ್ತ ರಾಜಸ್ಥಾನ್​ ತಂಡ ಆರಂಭಿಕ ಪಂದ್ಯದಲ್ಲಿ ಸತತ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಆ ಬಳಿಕ ಸತತ ಸೋಲಿನಿಂದ ಕಂಗೆಟ್ಟು ಇದೀಗ 5ನೇ ಸ್ಥಾನದಲ್ಲಿದೆ. ಪ್ಲೇ ಆಫ್​ ಟಿಕೆಟ್​ ಪಡೆಯ ಬೇಕಿದ್ದರೆ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಕೋಲ್ಕತಾದಲ್ಲಿ ನಡೆಯಲಿರುವ ಈ ಪಂದ್ಯ ಹೈ ವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್​

ಕೆಕೆಆರ್​: ರಹ್ಮನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ, ವರುಣ್ ಚಕ್ರವರ್ತಿ.

ರಾಜಸ್ಥಾನ್​ ರಾಯಲ್ಸ್​ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ಜೋ ರೂಟ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮಾಯರ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್​.

ಇದನ್ನೂ ಓದಿ IPL 2023: ತಂದೆಯಾಗುವ ಖಷಿಯಲ್ಲಿ ಆರ್​ಸಿಬಿ ಆಲ್​ರೌಂಡರ್​

ಇತ್ತಂಡಗಳ ಮುಖಾಮುಖಿ

ಒಟ್ಟು ಪಂದ್ಯಗಳು- 27

ಕೋಲ್ಕತಾ ನೈಟ್ ರೈಡರ್ಸ್ ಗೆಲುವು- 14

ರಾಜಸ್ಥಾನ್ ರಾಯಲ್ಸ್ – 12

ಪಂದ್ಯದ ವಿವರ

ಪಂದ್ಯ ಸಮಯ: ಸಂಜೆ 07:30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಆ್ಯಪ್ ಮತ್ತು ವೆಬ್

Exit mobile version