Site icon Vistara News

IPL 2023 : ಟಾಸ್ ಗೆದ್ದ ರಾಜಸ್ಥಾನ್​ ತಂಡದಿಂದ ಮೊದಲು ಬ್ಯಾಟಿಂಗ್ ಆಯ್ಕೆ

#image_title

ಮುಂಬಯಿ: ಐಪಿಎಲ್ 16ನೇ ಆವೃತ್ತಿಯಲ್ಲಿ ಭಾನುವಾರದ ಡಬಲ್​ ಹೆಡರ್​ನ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪ್ರವಾಸಿ ರಾಜಸ್ಥಾನ್ ರಾಯಲ್ಸ್​ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಮುಂಬೈ ತಂಡ ಮೊದಲು ಫೀಲ್ಡಿಂಗ್ ಮಾಡಬೇಕಾಗಿದೆ. ಇದು ಐಪಿಎಲ್​ ಇತಿಹಾಸದ 1000ನೇ ಪಂದ್ಯವಾಗಿದೆ.

ಇಲ್ಲಿನ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ. ದೊಡ್ಡ ಸ್ಕೋರ್​ನ ಮತ್ತೊಂದು ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ. ಟಾಸ್ ಗೆದ್ದ ಬಳಿಕ ಮಾತನಾಡಿದ ರಾಜಸ್ಥಾನ್ ತಂಡ ನಾಯಕ ಸಂಜು ಸ್ಯಾಮ್ಸನ್​, ನಾವು ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತೇವೆ. ವಿಕೆಟ್ ಉತ್ತಮವಾಗಿ ಕಾಣುತ್ತಿದ್ದು, ನಮ್ಮ ಸಾಮರ್ಥ್ಯಕ್ಕೆ ಪೂರಕವಾಗಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಪ್ರಯತ್ನಿಸುತ್ತಿದ್ದೇವೆ. ನಾವು ಉತ್ತಮ ಗುಣಮಟ್ಟದ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ತಂಡವು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದೆ. ಟೀಮ್ ಮ್ಯಾನೇಜ್ಮೆಂಟ್ ತಂಡದ ಉತ್ಸಾಹ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮುಂಬಯಿ ತಂಡದ ನಾಯಕ ರೋಹಿತ್ ಶರ್ಮ ತಮಗೆ ಜನುಮದಿನದ ಶುಭಾಶಯ ಹೇಳಿದ ರವಿ ಶಾಸ್ತ್ರಿಗೆ ಧನ್ಯವಾದ ಹೇಳಿದರು. ಬಳಿಕ ಮಾತನಾಡಿ, ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್​ ವಿರುದ್ಧ ನಮಗೆ ಜಯ ಲಭಿಸಿತ್ತು. ಇದು ಉತ್ತಮ ಟ್ರ್ಯಾಕ್ ಆಗಿರುವ ಕಾರಣ ಮೊದಲು ಬೌಲಿಂಗ್ ಮಾಡುವುದು ನನ್ನ ನಿರ್ಧಾರವಾಗಿತ್ತು. ನಾವು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದೇವೆ. ಆದರೆ, ಸ್ಥಿರತೆ ಕೊರತೆ ಎದುರಾಗಿತ್ತು ಎಂಬುದ ಹೇಳಿದರು.

1000ನೇ ಪಂದ್ಯದ ಸಮಾರಂಭ

1000ನೇ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಮೊದಲು ಸಣ್ಣ ಸಮಾರಂಭ ಏರ್ಪಡಿಸಲಾಗಿತ್ತು. ಇತ್ತಂಡಗಳ ನಾಯಕರಾದ ರೋಹಿತ್​ ಶರ್ಮಾ ಹಾಗೂ ಸಂಜು ಸ್ಯಾಮ್ಸನ್​ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಸ್ಮರಣಿಕೆಗಳನ್ನು ನೀಡಿದರು. ಬಳಿಕ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಅವರಿಗೂ ಸ್ಮರಣಿಕೆಗಳನ್ನು ನೀಡಲಾಯಿತು. ಎಂಟು ತಂಡಗಳ ಧ್ವಜಗಳನ್ನು ಭಾರತದ ಧ್ವಜದೊಂದಿಗೆ ಹಾರಿಸಲಾಯಿತು.

ಇದನ್ನೂ ಓದಿ: IPL 2023 : ಲಾಸ್ಟ್​ ಬಾಲ್​ ಥ್ರಿಲ್​, ಚೆನ್ನೈ ವಿರುದ್ಧ ಪಂಜಾಬ್​ ತಂಡಕ್ಕೆ 4 ವಿಕೆಟ್​ ವಿಜಯ

ತಂಡಗಳು:

ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್, ಅರ್ಷದ್ ಖಾನ್.

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೇರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಲ್.

Exit mobile version