ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ಕರ್ನಾಟಕದ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್ ಅವರು ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಇದರೊಂದಿಗೆ ಮೊದಲ ಬಾರಿಗೆ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರಿಗೆ ಈ ಗೌರವ ಡಾಕ್ಟರೇಟ್ ದೊರೆತಿದೆ.
ರಾಜಸ್ಥಾನದ ಉದಯಪುರದ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯದ ಅಧ್ಯಕ್ಷ ಡಾ.ಪದ್ಮಕಲಿ ಬ್ಯಾನರ್ಜಿ ಮತ್ತು ಡಾ.ನಿಧಿಪತಿ ಸಿಂಗಾನಿಯಾ ಅವರು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟರ್ಗೆ ಈ ಉನ್ನತ ಗೌರವ ಡಾಕ್ಟರೇಟ್ ಪದವಿ ಸಿಕ್ಕಿದ್ದು, ವಿಜಯಪುರದ ಜತೆಗೆ ಕರ್ನಾಟಕಕ್ಕೂ ಈ ಪ್ರಶಸ್ತಿ ಮೂಲಕ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ | IND VS PAK | ಟ್ವೀಟ್ ಸಮರ ನಿಲ್ಲಿಸಿ; ವಾಸಿಂ ಅಕ್ರಂ ಖಡಕ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?