1. ಇಸ್ರೋ ಮುಖ್ಯಸ್ಥ ಸೋಮನಾಥ್ ಸೇರಿ 68 ಮಂದಿ, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಈ ಬಾರಿ 68 ಮಂದಿಗೆ ನೀಡಲಾಗಿದೆ. ಇದರ ಜತೆಗೆ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇವರಲ್ಲಿ ನೂರು ವರ್ಷ ದಾಟಿದ ಇಬ್ಬರಿಗೆ ಪ್ರಶಸ್ತಿ ನೀಡಿರುವುದು ವಿಶೇಷವಾಗಿದೆ.ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗೆ ಎರಡು ಎಕರೆ ಸ್ವಂತ ಜಾಗ ನೀಡಿದ್ದ ಹುಚ್ಚಮ್ಮ, ರಾಮನಗರ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡಗೆ ಹಾಗೂ ಇಸ್ರೋ ಸಂಸ್ಥೆಯ ಮುಖ್ಯಸ್ಥರಾದ ಸೋಮನಾಥ್ ಅವರಿಗೂ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇವರಲ್ಲಿ 13 ಮಹಿಳೆಯರು, ಒಬ್ಬರು ಮಂಗಳಮುಖಿಗೆ ಸಹ ಪ್ರಶಸ್ತಿ ದೊರೆತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
ಈ ಸುದ್ದಿಯನ್ನೂ ಓದಿ : Rajyotsava Awards: ವಿಜ್ಞಾನಿಯಿಂದ ಪತ್ರಿಕಾ ವಿತರಕರವರೆಗೆ; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ
Karnataka Rajyotsava : ಎಂಇಎಸ್ ಕರಾಳ ದಿನ ಆಚರಿಸಿದ್ರೆ ಕ್ರಮ ಗ್ಯಾರಂಟಿ; ಕನ್ನಡ ಗೌರವಿಸದಿದ್ರೆ ರಾಜ್ಯ ಬಿಟ್ಟು ತೊಲಗಿ
2. ಹೃದಯಾಘಾತ ಹೆಚ್ಚಳಕ್ಕೆ ಕೋವಿಡ್ ಕಾರಣವಲ್ಲ: ಡಾ.ಸಿ.ಎನ್. ಮಂಜುನಾಥ್
ಬೆಂಗಳೂರು: ಕೋವಿಡ್‌ನಿಂದಲೇ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಹೆಚ್ಚಿದೆ ಎಂದು ಹೇಳಲು ಆಗಲ್ಲ. ಕೋವಿಡ್ ಲಸಿಕೆಯಿಂದ ಹೃದಯಾಘಾತ ಹೆಚ್ಚಿಲ್ಲ, ಕೋವಿಡ್ ಬಂದವರು ಕೆಲಸ ಮಾಡಬಾರದು ಎಂಬುವುದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
3. ಮೈ ಭಾರತ್‌ಗೆ ಮೋದಿ ಚಾಲನೆ; ಯುವಕರ ಏಳಿಗೆಗೆ ನಾಂದಿ ಎಂದ ಪ್ರಧಾನಿ
ನವದೆಹಲಿ: ದೇಶದ ಯುವಕರಲ್ಲಿ ನಾಯಕತ್ವ ಗುಣ, ಯುವಕರ ಏಳಿಗೆ, ಕೌಶಲ ಅಭಿವೃದ್ಧಿ ಸೇರಿ ಯುವಕರನ್ನೇ ಗುರಿಯಾಗಿಸಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ಮೇರಾ ಯುವ ಭಾರತ್ (My Bharat) ಸ್ವಾಯತ್ತ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ (ಅಕ್ಟೋಬರ್ 31) ಚಾಲನೆ ನೀಡಿದರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತ್ (Mera Yuva Bharat) ವೆಬ್‌ಪೋರ್ಟಲ್‌ಗೂ ಪ್ರಧಾನಿ ಚಾಲನೆ ನೀಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
4. ಮೋದಿ ಸರ್ಕಾರದಿಂದ ಕರ್ನಾಟಕದ ವಿರುದ್ಧ ನಿರಂತರ ದ್ವೇಷ; ಶೇಖಾವತ್‌ಗೆ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕಳೆದ ಕೆಲವು ದಿನಗಳಿಂದ ನಡೆಸುತ್ತಿರುವ ಕೇಂದ್ರ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆಗಳನ್ನು ಕೇಳುವ ಉತ್ತರ ಕೊಡಿ ಮೋದಿ (AnswerMadi Modi) ಅಭಿಯಾನ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಾಕ್ಸಮರಕ್ಕೆ ಕಾರಣವಾಗಿದೆ. ಈ ಅಭಿಯಾನ ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Union Minister Gajendra Singh Shekhawat) ಉತ್ತರ ಕೊಟ್ಟಿದ್ದು, ಸುಳ್ಳು ಸುದ್ದಿ ಹರಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಈಗ ಇದಕ್ಕೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು, ನೀರಿನ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ನಡೆಸಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
ಈ ಸುದ್ದಿಯನ್ನೂ ಓದಿ : Karnataka Drought: ಬಿಜೆಪಿ ನಾಯಕರು ಕೇಂದ್ರದಿಂದ ಬರ ಪರಿಹಾರ ಕೊಡಿಸಲಿ: ಡಿಕೆಶಿ
5. ಕೇರಳ ಸ್ಫೋಟ; 3 ಸಾವಿರ ರೂ. ವ್ಯಯಿಸಿ ಬಾಂಬ್ ತಯಾರಿಸಿದ ಆರೋಪಿ, ಲಾಡ್ಜ್‌ನಲ್ಲಿದ್ದಿದ್ದು 10 ನಿಮಿಷ!
ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕ್ರೈಸ್ತ ಸಮುದಾಯದ ಕನ್ವೆನ್ಶನ್ ಸೆಂಟರ್‌ನಲ್ಲಿ (Convention Centre) ಬಾಂಬ್ ಸ್ಫೋಟ (Kerala Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಡಾಮಿನಿಕ್ ಮಾರ್ಟಿನ್ (Dominic Martin) ಕುರಿತು ಹಲವು ವರದಿಗಳು ಲಭ್ಯವಾಗಿವೆ. ಆತನು ಕೇವಲ 3 ಸಾವಿರ ರೂಪಾಯಿ ಖರ್ಚು ಮಾಡಿ ಬಾಂಬ್ ತಯಾರಿಸಿರುವ ಆತ, ಕೇವಲ 10 ನಿಮಿಷಕ್ಕಾಗಿ ಲಾಡ್ಜ್ ಬುಕ್ ಮಾಡಿದ್ದ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
6. ಪಿಸಿಬಿಗೆ ಚಳ್ಳೆ ಹಣ್ಣು ತಿನ್ನಿಸಿ ಬಿರಿಯಾನಿ, ಕಬಾಬ್ ತಿಂದ ಪಾಕ್ ಆಟಗಾರರು; ಆದರೂ ಸಿಕ್ಕಿಬಿದ್ದರು
ಕರಾಚಿ: ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಪಾಕ್(Pakistan Team) ಆಟಗಾರರು ಫಿಟ್‌ನೆಸ್ ಕಾಯ್ದುಕೊಳ್ಳಲು ತಮ್ಮ ಪ್ರೀತಿಯ ಬಿರಿಯಾನಿ ತ್ಯಜಿಸಬೇಕು, ಅದರ ಬದಲಿಗೆ ಮೆಡಿಟರೇನಿಯನ್ ಕಬಾಬ್ಗಳು (Mediterranean Kebabs), ಮೊಟ್ಟೆಗಳು ಮತ್ತು ಪ್ರೋಟೀನ್‌ಯುಕ್ತ ಆಹಾರವನ್ನು ಮಾತ್ರ ಸೇವಿಸಬೇಕು ಎಂದು ಆಟಗಾರರಿಗೆ ಪಾಕ್ ಕ್ರಿಕೆಟ್ ಮಂಡಳಿ ಖಡಕ್ ಸೂಚನೆ ನೀಡಿತ್ತು. ಆದರೆ ಪಾಕ್ ಆಟಗಾರರು ತಮ್ಮ ಕ್ರಿಕೆಟ್ ಮಂಡಳಿಗೆ ಚಳ್ಳೆ ಹಣ್ಣು ತಿನ್ನಿಸಿ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಕೋಲ್ಕತ್ತಾದ ಪ್ರಸಿದ್ಧ ಝಮ್ ಝಮ್ ಬಿರಿಯಾನಿ ತಿಂದು ತೇಗಿದ್ದಾರೆ. ಆದರೆ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
ಈ ಸುದ್ದಿಯನ್ನೂ ಓದಿ: ಪಾಕಿಸ್ತಾನ ವಿರುದ್ಧ ಧರಿಸಿದ್ದ ಕೊಹ್ಲಿಯ ಗ್ಲೌಸ್ ಭಾರಿ ಮೊತ್ತಕ್ಕೆ ಹರಾಜು!
7. ಇಸ್ರೇಲ್ ಮೇಲೆ ದಾಳಿಗೆ ಆದೇಶಿಸಿದ್ದ ಹಮಾಸ್ ಉಗ್ರನ ಹತ್ಯೆ
ಜೆರುಸಲೇಂ: ಹಮಾಸ್ ಉಗ್ರರನ್ನು ನಿರ್ನಾಮಗೊಳಿಸುವ ಶಪಥ ಮಾಡಿರುವ ಇಸ್ರೇಲ್ ಸೇನೆಯು ಗಾಜಾ ನಗರದ ಮೇಲಿನ ದಾಳಿಯನ್ನು (Israel Palestine War) ತೀವ್ರಗೊಳಿಸಿದೆ. ನೂರಾರು ಯುದ್ಧ ಟ್ಯಾಂಕರ್‌ಗಳನ್ನು ಗಾಜಾ ಗಡಿಯಲ್ಲಿ (Gaza City) ನಿಯೋಜಿಸುವ ಮೂಲಕ ಪೂರ್ಣ ಪ್ರಮಾಣದ ದಾಳಿಗೆ ಇಸ್ರೇಲ್ ಸಿದ್ಧವಾಗಿದೆ. ಇದರ ಬೆನ್ನಲ್ಲೇ, ಉಗ್ರರ ನಿರ್ನಾಮದಲ್ಲಿ ಇಸ್ರೇಲ್ ಸೇನೆಗೆ ಭಾರಿ ಮುನ್ನಡೆ ದೊರೆತಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿಗೆ ಆದೇಶಿಸಿದ್ದ ಹಮಾಸ್ ಉಗ್ರ ಸಂಘಟನೆಯ ಕಮಾಂಡರ್‌ನನ್ನು ಇಸ್ರೇಲ್ ಸೈನಿಕರು ಹತ್ಯೆಗೈದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
8. ಕೇಂದ್ರ ಸರ್ಕಾರದಿಂದ ಸಂಸದರ ಫೋನ್ ಹ್ಯಾಕ್? ಏನಿದು ಕೇಸ್?
ನವದೆಹಲಿ: ಕೇಂದ್ರ ಸರ್ಕಾರವು ಪೆಗಾಸಸ್ ಸಾಫ್ಟ್‌ವೇರ್ ಬಳಸಿ ಪ್ರತಿಪಕ್ಷ ನಾಯಕರ ಮೊಬೈಲ್‌ಗಳನ್ನು ಕದ್ದಾಲಿಸಿದೆ ಎಂಬ ಆರೋಪದ ಬೆನ್ನಲ್ಲೇ ಪ್ರತಿಪಕ್ಷಗಳ ಸಂಸದರಿಂದ ಮತ್ತೊಂದು ಆರೋಪ ಕೇಳಿಬಂದಿದೆ. ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಸಂಸದ ಐ ಫೋನ್‌ಗಳನ್ನು (iPhones) ಹ್ಯಾಕ್ (Hacking Alert) ಮಾಡುತ್ತಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿ ಹಲವು ಸಂಸದರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ, ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರವು, ಪ್ರಕರಣವನ್ನು ತನಿಖೆಗೆ ಆದೇಶಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
9. ಸಿಬಿಐಗೆ ಸಿಡಿ ಕೇಸ್ ಕೊಡುವಂತೆ ಸಿದ್ದರಾಮಯ್ಯಗೆ ಪತ್ರ ಬರೆದ ರಮೇಶ್ ಜಾರಕಿಹೊಳಿ
ಬೆಳಗಾವಿ: ನನ್ನ ಸಿಡಿ ಕೇಸ್ ಅನ್ನು ಸಿಬಿಐಗೆ ವಹಿಸುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರ ಬರೆದಿದ್ದೇನೆ. ಜತೆಗೆ ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆಗೂ ಸಹ ಪತ್ರ ಬರೆದಿದ್ದೇನೆ. ಇನ್ನು ಈ ಸಿ.ಡಿ. ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರ ಪಾತ್ರ ಇದೆ. ಅವರ ಪಾತ್ರ ಇಲ್ಲವೆಂದು ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi), ಈ ತನಿಖೆಯನ್ನು ಸರ್ಕಾರ ಸಿಬಿಐಗೆ ಕೊಟ್ಟರೆ ಸರಿ, ಇಲ್ಲವಾದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ವರೆಗೂ ಹೋಗುತ್ತೇನೆ. ಈ ಷಡ್ಯಂತ್ರದ ಹಿಂದೆ ಪ್ರಭಾವಿ ನಾಯಕನ ಕೈವಾಡ ಇದೆ ಎಂದು ನಾನು ಪತ್ರ ಬರೆದಿದ್ದೇನೆ ಎಂದು ಹೇಳಿದರು. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics ) ಮತ್ತೆ ಸಿಡಿ ಚರ್ಚೆ ಮುನ್ನೆಲೆಗೆ ಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.
10.. ಶ್ರೀಲಂಕಾ ಮಾತ್ರವಲ್ಲ; ಇನ್ನು ವೀಸಾ ಇಲ್ಲದೆ ಥೈಲ್ಯಾಂಡ್‌ಗೂ ತೆರಳಬಹುದು
ನವ ದೆಹಲಿ: ಇನ್ನು ಮುಂದೆ ನೀವು ಥೈಲ್ಯಾಂಡ್‌ಗೆ (Thailand) ವೀಸಾ ಇಲ್ಲದೆ (Visa Free) ಪ್ರಯಾಣಿಸಬಹುದು. ಹೌದು, ಇಂತಹದ್ದೊಂದು ಮಹತ್ವದ ನಿರ್ಧಾರವನ್ನು ಥೈಲ್ಯಾಂಡ್ ಪ್ರಕಟಿಸಿದೆ. ಭಾರತ ಮತ್ತು ತೈವಾನ್ ಪ್ರಯಾಣಿಕರು ಮುಂದಿನ ತಿಂಗಳಿನಿಂದ 2024ರ ಮೇ ತನಕ ಅಂದರೆ 6 ತಿಂಗಳ ಕಾಲ ವೀಸಾ ರಹಿತರಾಗಿ ಥೈಲ್ಯಾಂಡ್‌ಗೆ ತೆರಳಬಹುದು ಎಂದು ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇಶದತ್ತ ಆಕರ್ಷಿಸಿ ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಕ್ ಮಾಡಿ.