Site icon Vistara News

Rambai: ಟ್ರ್ಯಾಕ್​ಗಿಳಿದ ಎರಡೇ ವರ್ಷಗಳಲ್ಲಿ 200 ಪದಕ ಗೆದ್ದ 106 ವರ್ಷದ ಗಟ್ಟಿಗಿತ್ತಿ

Rambai Maan, a runaway success at 106

ಬೆಂಗಳೂರು: ಸಾಧನೆ ಎಂಬುದು ಯಾರ ಸ್ವತ್ತಲ್ಲ. ಅದನ್ನು ಸಿದ್ಧಿಸಿಕೊಳ್ಳಲು ಬರುವ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಛಾತಿ ಬೆಳೆಸಿಕೊಳ್ಳಬೇಕು. ಆತ್ಮಸ್ಥೈರ್ಯ, ಅಚಲ ಗುರಿ ಹೊಂದಬೇಕು ಎಂಬುದಕ್ಕೆ 106 ವರ್ಷದ ರಾಮ್‌ಬಾಯಿ(Rambai) ಹೆಸರಿನ ಅಜ್ಜಿಯೇ ಇದಕ್ಕೆ ಉತ್ತಮ ನಿದರ್ಶನ. ಈ ವಯಸ್ಸಿನಲ್ಲಿಯೂ ಅವರು 18ನೇ ನ್ಯಾಷನಲ್‌ ಓಪನ್‌ ಅಥ್ಲೆಟಿಕ್ಸ್(Athletics) ಚಾಂಪಿಯನ್‌ಶಿಪ್​ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಡೆಹ್ರಾಡೂನ್​ನಲ್ಲಿ ನಡೆದಿದ್ದ 100 ಮೀಟರ್ ಹಾಗೂ 200 ಮೀಟರ್‌ ಓಟ ಜತೆಗೆ ಶಾಟ್​ಪುಟ್‌ ಸ್ಪರ್ಧೆಳಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಮೂರು ಚಿನ್ನದ ಪದಕ್ಕೆ ಮುತ್ತಿಕ್ಕಿದ್ದಾರೆ. ಅಚ್ಚರಿ ಎಂದರೆ ರಾಮ್‌ಬಾಯಿ ಅವರು ಕ್ರೀಡಾ ಕ್ಷೇತ್ರಕ್ಕೆ ಬಂದಿದ್ದೇ 104ನೇ ವಯಸ್ಸಿನಲ್ಲಿ. ಅಂದರೆ ಎರಡು ವರ್ಷಗಳ ಹಿಂದೆ. ಅವರು ಕ್ರೀಡಾಕ್ಷೇತ್ರಕ್ಕೆ ಬರಲು ಅವರ ಮೊಮ್ಮಗಳೇ ಕಾರಣ. ಶರ್ಮಿಳಾ ಸಂಗ್ವಾನ್‌ ಅವರು, 100 ವಯಸ್ಸಿನ ಕೌರ್‌ ಅವರ ಅಥ್ಲೆಟಿಕ್ಸ್‌ ಸಾಧನೆಯನ್ನು ತಮ್ಮ ಅಜ್ಜಿಗೆ ಹೇಳುವ ಮೂಲಕ ಅವರನ್ನು ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದರು. ಇದೀಗ ಅವರ ಅಜ್ಜಿ ಇತಿಹಾಸದ ಪುಟ ಸೇರಿದ್ದಾರೆ.

ಹರ್ಯಾಣದ ಚಾರ್ಕಿ ದಾದ್ರಿಯ(Charkhi Dadri district in Haryana) ಕದ್ಮಾ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ್ದ ರಾಮ್‌ಬಾಯಿ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕೃಷಿ ಕಾಯಕದಲ್ಲಿ ಕಳೆದಿದ್ದರು. ಈ ಸಾಧನೆಯ ಬಳಿಕ ಪ್ರತಿಕ್ರಿಕೆ ನೀಡಿದ ರಾಮ್‌ಬಾಯಿ, “ಅಸಾಧ್ಯವಾದುದನ್ನು ಸಾಧ್ಯವಾಗಿಸುವುದೇ ಧ್ಯೇಯವಾಗಬೇಕು. ಎಲ್ಲ ಕಷ್ಟವನ್ನು ಎದುರಿಸಬೇಕು. ಬದುಕು ಅಂದುಕೊಂಡಷ್ಟು ಸುಲಭವಲ್ಲ. ನಿಷ್ಠೆ, ಪ್ರಾಮಾಣಿಕತೆಯಿಂದ ಕಲಿಯಬೇಕು. ಕಷ್ಟಪಟ್ಟಲ್ಲಿ ಮಾತ್ರ ಫಲ ಸಿಗಲು ಸಾಧ್ಯ. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ” ಎಂದರು.

ಇದನ್ನೂ ಓದಿ Adipurush Movie: ಕಟ್ಟಪ್ಪ ಬಾಹುಬಲಿ ಕೊಂದಿದ್ದು ಯಾಕೆ ಅಂತ ಗೊತ್ತಾಯ್ತು; ಸೆಹ್ವಾಗ್ ಟ್ವೀಟ್‌ ವೈರಲ್‌!

ಅಜ್ಜಿಯ ಫಿಟ್​ನೆಸ್​ ಗುಟ್ಟು

ಫಿಟ್ ಆಗಿರಲು ಈ ಅಜ್ಜಿ ಪ್ರತಿನಿತ್ಯ 5 ಕಿಲೋಮೀಟರ್ ಓಡುತ್ತಾರೆ. ಶುದ್ಧ ಸಸ್ಯಾಹಾರಿ ಆಹಾರ ಸೇವಿಸುವ ಇವರು ನಿತ್ಯ ದೇಸಿ ತುಪ್ಪ ಹಾಗೂ ಮೊಸರು ಸೇವಿಸುತ್ತಾರೆ. ಜತೆಗೆ ತಾವು ತರಾರಿಸುವ ಎಲ್ಲ ಅಡುಗೆಗೂ ಎಣ್ಣೆಯ ಬದಲು ತುಪ್ಪವನ್ನೇ ಬಳಕೆ ಮಾಡುತ್ತಾರೆ. ಇದು ಅಜ್ಜಿಯ ಫಿಟ್​ನೆಸ್​ ರಹಸ್ಯವಾಗಿದೆ.

ಅಚ್ಚರಿ ಈ ಎಂದರೆ ಅಜ್ಜಿಯ ಮಗಳು ಸಂತ್ರಾ ದೇವಿ(70), ಮತ್ತು ಮೊಮ್ಮಗಳು ಶರ್ಮಿಳಾ(42) ಕೂಟ ಜತೆಯಾಗಿಯೇ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಮೂಲಕ ಕುಟುಂಬದ ಮೂರು ತಲೆಮಾರುಗಳು ಒಟ್ಟಿಗೆ ಟ್ರ್ಯಾಕ್‌ನಲ್ಲಿ ಇಳಿದು ಕಮಾಲ್​ ಮಾಡುತ್ತಿದ್ದಾರೆ. 2 ವರ್ಷಗಳ ಹಿಂದೆ ಕ್ರೀಡೆಯಲ್ಲಿ ತೊಡಗಿರುವ ಈ ಅಜ್ಜಿ ಬರೋಬ್ಬರಿ 200 ಪದಕ ಗೆದ್ದಿದ್ದಾರೆ.

Exit mobile version