Site icon Vistara News

Ranji Trophy: ರಣಜಿ; ಸೆಮಿಫೈನಲ್​ನಲ್ಲಿ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು

mayank agarwal

#image_title

ಬೆಂಗಳೂರು: ರಣಜಿ ಟ್ರೋಫಿ(Ranji Trophy) ಕ್ರಿಕೆಟ್‌ ಟೂರ್ನಿಯ 4 ಸೆಮಿಫೈನಲ್‌(ranji trophy semi final) ತಂಡಗಳು ಅಂತಿಮಗೊಂಡಿದ್ದು, ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು ಎದುರಾಗಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ಹಾಗೂ ಬಂಗಾಳ ಮುಖಾಮುಖಿಯಾಗಲಿದೆ.

8 ಬಾರಿ ಚಾಂಪಿಯನ್‌ ಕರ್ನಾಟಕ ತಂಡ ಕಳೆದ ವರ್ಷ ಕ್ವಾರ್ಟರ್‌ ಫೈನಲ್​ನಲ್ಲಿಯೇ ಸೋತು ಹೊರಬಿದ್ದಿದ್ದು. ಆದರೆ ಈ ಬಾರಿ ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ. ಫೆ.8ರಿಂದ ಆರಂಭವಾಗಲಿರುವ ಸೆಮಿ ಕಾದಾಟದಲ್ಲಿ ಸೌರಾಷ್ಟ್ರ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಸೌರಾಷ್ಟ್ರ ತಂಡದ ನಾಯಕ, ಪ್ರಮುಖ ವೇಗಿ ಜೈದೇವ್​ ಉನಾದ್ಕತ್​ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್​ ಇಂಡಿಯಾ ಪರ ಸ್ಥಾನ ಪಡೆದ ಕಾರಣ ಪ್ರಮುಖ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಲಾಭವನ್ನು ಮಯಾಂಕ್​ ಅಗರ್ವಾಲ್ ಪಡೆ ಉತ್ತಮವಾಗಿ ಬಳಸಿಕೊಳ್ಳಬೇಕಿದೆ.

ಶನಿವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಸೌರಾಷ್ಟ್ರ ತಂಡ ಪಂಜಾಬ್‌ ವಿರುದ್ಧ 71 ರನ್‌ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶ ಪಡೆದಿತ್ತು. ಕಳೆದ ಬಾರಿ ಗುಂಪು ಹಂತದಲ್ಲೇ ಸೋತಿದ್ದ ಸೌರಾಷ್ಟ್ರ ಈ ಬಾರಿ ಉಪಾಂತ್ಯಕ್ಕೆ ಲಗ್ಗೆ ಇಟ್ಟಿತು. ಕರ್ನಾಟಕ ತಂಡ ಶುಕ್ರವಾರ ಉತ್ತರಾಖಂಡ ವಿರುದ್ಧ ಗೆದ್ದು ಸೆಮೀಸ್‌ಗೆ ತಲುಪಿತ್ತು. ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದ ರಾಜ್ಯ ತಂಡ ಕ್ವಾರ್ಟರ್‌ನಲ್ಲಿ ಉತ್ತರಾಖಂಡವನ್ನು ಇನ್ನಿಂಗ್‌್ಸ ಹಾಗೂ 281 ರನ್‌ಗಳಿಂದ ಮಣಿಸಿತ್ತು.

ಇದನ್ನೂ ಓದಿ Ranji Trophy | ತ್ರಿಶತಕ ಬಾರಿಸಿ ದಾಖಲೆ ಬರೆದ ಮುಂಬೈ ಬ್ಯಾಟರ್​ ಪೃಥ್ವಿ ಶಾ!

ಮಯಾಂಕ್​ ಪಡೆಗೆ ತವರಿನ ಲಾಭ

ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ಸೆಮಿಫೈನಲ್​ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ರಾಜ್ಯ ತಂಡ ಇದೇ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಿ ಮೇಲುಗೈ ಸಾದಿಸಿತ್ತು. ಆದ್ದರಿಂದ ಇದೀಗ ಸೆಮಿಫೈನಲ್​ನಲ್ಲಿಯೂ ತವರಿನ ಲಾಭ ಮಯಾಂಕ್​ ಪಡೆಗೆ ಲಭಿಸುವ ನಿರೀಕ್ಷೆಯಿದೆ. ಮಧ್ಯಪ್ರದೇಶ ಹಾಗೂ ಬಂಗಾಳ ನಡುವಿನ ಮತ್ತೊಂದು ಸೆಮಿಫೈನಲ್​ ಪಂದ್ಯ ಇಂದೋರ್‌ನ ಹೋಲ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸೆಮಿಫೈನಲ್‌ ವೇಳಾಪಟ್ಟಿ

ಫೆ.8-12 ಮಧ್ಯಪ್ರದೇಶ-ಬಂಗಾಳ, ಸ್ಥಳ: ಇಂದೋರ್‌

ಫೆ.8-12 ಕರ್ನಾಟಕ-ಸೌರಾಷ್ಟ್ರ, ಸ್ಥಳ: ಬೆಂಗಳೂರು

Exit mobile version