Site icon Vistara News

IPL 2023 : ಟಿ20 ಮಾದರಿಯಲ್ಲಿ ನಾಲ್ಕನೇ ಹ್ಯಾಟ್ರಿಕ್​ ವಿಕೆಟ್​ ವಿಶ್ವ ದಾಖಲೆ ಸೃಷ್ಟಿಸಿದ ರಶೀದ್​ ಖಾನ್​

rashid-khan-took-the-fourth-hat-trick-wicket-in-t20-format

#image_title

ಅಹಮದಾಬಾದ್​: ಗುಜರಾತ್​ ಜಯಂಟ್ಸ್​ ತಂಡದ ಸ್ಪಿನ್​ ಬೌಲರ್ ರಶೀದ್​ ಭಾನುವಾರ (ಏಪ್ರಿಲ್​9) ಹಲವು ಹ್ಯಾಟ್ರಿಕ್​ಗಳ ಸಾಧನೆ ಮಾಡಿದ್ದಾರೆ. ಜಿದ್ದಾಜಿದ್ದಿನಿಂದ ನಡೆದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಪಂದ್ಯದ 16ನೇ ಓವರ್​ನಲ್ಲಿ (IPL 2023) ಅವರು ಈ ಸಾಧನೆ ಮಾಡಿದ್ದಾರೆ. ಇದು ಅವರ ಪಾಲಿಗೆ ಐಪಿಎಲ್​ನಲ್ಲಿ ಮೊದಲ ಹ್ಯಾಟ್ರಿಕ್​ ಸಾಧನೆ. ಐಪಿಎಲ್​ 2023ನೇ ಆವೃತ್ತಿಯಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಹಾಗೂ ಒಟ್ಟಾರೆಯಾಗಿ ಟಿ20 ಮಾದರಿಯಲ್ಲಿ ಅವರದ್ದು ನಾಲ್ಕನೇ ಹ್ಯಾಟ್ರಿಕ್​​ ಸಾಧನೆ ಎನಿಸಿಕೊಂಡಿದೆ.

ಐಪಿಎಲ್​ 16ನೇ ಆವೃತ್ತಿಯ 13ನೇ ಪಂದ್ಯದಲ್ಲಿ ರಶೀದ್ ಖಾನ್​ ಈ ಸಾಧನೆ ಮಾಡಿದ್ದರೆ ಹಾರ್ದಿಕ್​ ಪಾಂಡ್ಯ ಅಲಭ್ಯತೆಯಲ್ಲಿ ಅವರು ತಂಡದ ಹಂಗಾಮಿ ನಾಯಕರಾಗಿಯೂ ಇದ್ದರು. ಕೋಲ್ಕೊತಾ ತಂಡದ ಬ್ಯಾಟರ್​ಗಳಾದ ಆ್ಯಂಡ್ರೆ ರಸೆಲ್​, ಸುನೀಲ್​ ನರೈನ್ ಹಾಗೂ ಶಾರ್ದುಲ್ ಠಾಕೂರ್ ಅವರನ್ನು ಔಟ್​ ಮಾಡುವ ಮೂಲಕ ಅವರು ಹ್ರಾಟ್ರಿಕ್ ಸಾಧನೆ ಮಾಡಿದರು.

ರಶೀದ್​ ಸಾಧನೆ ವಿಡಿಯೊ ಇಲ್ಲಿದೆ

ರಶೀದ್ ಇದೀಗ ಟಿ20 ಮಾದರಿಯಲ್ಲಿ ಗರಿಷ್ಠ ಹ್ಯಾಟ್ರಿಕ್​ ವಿಕೆಟ್ ಪಡೆದ ವಿಶ್ವ ದಾಖಲೆ ಮಾಡಿದರು. ಆ್ಯಂಡ್ಯೂ ಟೈ, ಮೊಹಮ್ಮದ್​ ಶಮಿ, ಅಮಿತ್ ಮಿಶ್ರಾ, ಆ್ಯಂಡ್ರೆ ರಸೆಲ್​ ಹಾಗೂ ಇಮ್ರಾನ್ ತಾಹಿರ್​ ಟಿ20 ಮಾದರಿಯಲ್ಲಿ ಮೂರು ಬಾರಿ ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ.

ಹ್ಯಾಟ್ರಿಕ್​ ಸಾಧನೆ ಮಾಡುವ ಮೊದಲು ಅಬ್ದುಲ್​ ರಶೀದ್ ತಮ್ಮ ಮೂರು ಓವರ್​ಗಳಲ್ಲಿ 35 ರನ್ ಬಾರಿಸಿದ್ದರು. ಆದರೆ, ತಮ್ಮ ಸ್ಪೆಲ್​ನ ಕೊನೇ ಓವರ್​ನಲ್ಲಿ ಉತ್ತಮ ಸಾಧನೆ ಮಾಡುವ ಜತೆಗೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಆದರೆ, ರಿಂಕು ಸಿಂಗ್ ಕೊನೇ ಓವರ್​ನಲ್ಲಿ ಐದು ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿದ ಹಿನ್ನೆಲೆಯಲ್ಲಿ ರಶೀದ್​ ಸಾಧನೆ ಗೌಣವಾಯಿತು.

ರಿಂಕು ಸಾಧನೆ ಈ ರೀತಿ ಇದೆ

ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ಬ್ಯಾಟರ್​ ರಿಂಕು ಸಿಂಗ್​ ಐಪಿಎಲ್​ (IPL 2022) ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರೀಗ ತಂಡವೊಂದರ ಗೆಲುವಿಗಾಗಿ ಕೊನೇ ಓವರ್​​ನಲ್ಲಿ ಸತತವಾಗಿ ಐದು ಸಿಕ್ಸರ್​ ಬಾರಿಸಿದ ಬ್ಯಾಟರ್​​. ಐಪಿಎಲ್​ 16ನೇ ಆವೃತ್ತಿಯ ಭಾನುವಾರದ ಡಬಲ್​ ಹೆಡರ್​ನ ಗುಜರಾತ್​ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಪಂದ್ಯದ ಕೊನೇ ಓವರ್​ನಲ್ಲಿ ಕೆಕೆಆರ್ ಗೆಲುವಿಗೆ 29 ರನ್​ಗಳು ಬೇಕಾಗಿದ್ದವು. ಯಶ್​ ದಯಾಳ್​ ಎಸೆದ ಮೊದಲ ಎಸೆತದಲ್ಲಿ ಒಂದು ರನ್​ ಗಳಿಸಿದ ಕೋಲ್ಕೊತಾ ಗೆಲುವಿಗೆ ಉಳಿದ ಐದು ಎಸೆತಗಳಲ್ಲಿ 28 ರನ್​ ಬೇಕಾಗಿತ್ತು. ಸ್ಟ್ರೈಕ್​ನಲ್ಲಿದ್ದ ರಿಂಕು ಸಿಂಗ್​ ಮುಂದಿನ ಐದು ಎಸೆತಗಳಲ್ಲಿ ಸತತವಾಗಿ ಐದು ಸಿಕ್ಸರ್​ ಸಿಡಿಸಿದರು. ಬೌಲರ್​ ಯಶ್​ ದಯಾಳ್​ ಕುಸಿತು ಕುಳಿತರು.

ಅದೇ ರೀತಿ ರಿಂಕು ಸಿಂಗ್ ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ್ದರು. ಆದರೆ ಕೊನೇ ಏಳು ಎಸೆತದಲ್ಲಿ 40 ರನ್​ ಬಾರಿಸಿದರು. ಅದರಲ್ಲಿ ಆರು ಸಿಕ್ಸರ್​ ಹಾಗೂ ಫೋರ್ ಸೇರಿಕೊಂಡಿವೆ. (6, 4, 6, 6, 6, 6, 6) ಈ ಮೂಲಕ ಅವರು ವಿರೋಚಿತ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದರು.

Exit mobile version