ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗ ಮತ್ತು ನೆಚ್ಚಿನ ತಂಡ ಯಾವುದೆಂದು ನ್ಯಾಷನಲ್ ರಶ್ಮಿಕಾ ಮಂದಣ್ಣ (Rashimka Mandanna)ಹೇಳಿದ್ದಾರೆ. ಅವರಿಗೆ ತಮ್ಮದೇ ರಾಜ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೇವರಿಟ್ ಹಾಗೂ ಆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಎಂದರೆ ನೆಚ್ಚು. ಪುಷ್ಪಾ: ದಿ ರೈಸ್ – ಪಾರ್ಟ್ ಸೇರಿದಂತೆ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಪಾತ್ರ ವಹಿಸಿರುವ ರಶ್ಮಿಕಾ, ವಿರಾಟ್ ಕೊಹ್ಲಿಯನ್ನು ಸೊಕ್ಕಿನ ಮನುಷ್ಯ ಎಂದು ಹೇಳಿದ್ದಾರೆ. ಆದಾಗ್ಯೂ ಅವರೇ ಇಷ್ಟ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುವುದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ ರಶ್ಮಿಕಾ. ನಾನು ಅದೇ ಪ್ರದೇಶದವಳಾಗಿರುವ ಕಾರಣ ಅಲ್ಲಿನ ಫ್ರಾಂಚೈಸಿ ಇಷ್ಟ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಹಾಲಿ ಆವೃತ್ತಿಯಲ್ಲಿ ಆರ್ಸಿಬಿಯ ಒಂದು ಪಂದ್ಯವನ್ನು ವೀಕ್ಷಿಸಬೇಕು ಎಂಬುದಾಗಿಯೂ ಹೇಳಿದ್ದಾರೆ.
ನಾನು ಬೆಂಗಳೂರಿನವಳು, ನಾನು ಕರ್ನಾಟಕದವಳು. ನಮ್ಮ ರಾಜ್ಯದಲ್ಲಿ ‘ಈ ಸಲಾ ಕಪ್ ನಮ್ದೇ’ ಎಂಬುದಾಗಿಯೂ ಹೇಳುತ್ತಿದ್ದಾರೆ. ಹಾಗಾಗಿ ನಾನು ಯಾವತ್ತಿದ್ದರೂ ಆರ್ಸಿಬಿ ಫ್ಯಾನ್. ಈ ಬಾರಿ ಆರ್ಸಿಬಿಯ ಪಂದ್ಯವೊಂದನ್ನು ನೋಡುವ ಬಯಕೆಯಿದೆ. ಸ್ಟೇಡಿಯಮ್ನಲ್ಲಿ ಹೋಗಿ ನೋಡುವೆ ಎಂದು ರಶ್ಮಿಕಾ ಮಂದಣ್ಣ ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಬೈಟ್ನಲ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಹಾಲಿ ಋತುವಿನಲ್ಲಿ ಅತ್ಯದ್ಭುತ ಫಾರ್ಮ್ನಲ್ಲಿ ಇದ್ದಾರೆ. ಎಂಟು ಪಂದ್ಯಗಳಲ್ಲಿ 333 ರನ್ ಗಳಿಸಿರುವ 34ರ ಹರೆಯದ ವಿರಾಟ್ ಐಪಿಎಲ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕಾಯಂ ನಾಯಕ ಫಾಫ್ ಡು ಪ್ಲೆಸಿಸ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿರುವುದರಿಂದ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆರ್ಸಿಬಿ ತಂಡಕ್ಕೆ ಲಕ್ನೊ ಸೂಪರ್ ಜಯಂಟ್ಸ್ ಎದುರಾಳಿ
ಹಾಲಿ ಋತುವಿನ ಆರಂಭದಲ್ಲಿ ಲಕ್ಕೊ ಸೂಪರ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತ್ತು. ಹೀಗಾಗಿ ಲಕ್ನೊ ವಿರುದ್ಧ ಸೋಮವಾರ ಸಂಜೆ ನಡೆಯಲಿರುವ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವುದಕ್ಕೆ ಹವಣಿಸಲಿದೆ. ಆರ್ಸಿಬಿ ತಂಡ ಪ್ರಸ್ತುತ ಐಪಿಎಲ್ ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಸೇರಿದಂತೆ ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಇದನ್ನೂ ಓದಿ ವ: IPL 2023 : ಡೇವಿಡ್ ವಿಲ್ಲಿ ಬದಲಿ ಆಟಗಾರನಾಗಿ ಆರ್ಸಿಬಿಗೆ ಕೇದಾರ್ ಜಾಧವ್ ಆಯ್ಕೆ
ಆರ್ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ನದ್ದೇ ಚಿಂತೆ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಅತ್ಯಂ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಫಾಫ್, ವಿರಾಟ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮವಾಗಿ ಆಡುತ್ತಿದ್ದರೂ ಉಳಿದವರಿಂದ ಬೆಂಬಲ ದೊರಕುತ್ತಿಲ್ಲ. ಈ ಮೂವರು ಔಟಾದ ಬಳಿಕ ಆರ್ಸಿಬಿಯ ಸ್ಥಿತಿ ಶೋಚನೀಯವಾಗಿರುತ್ತದೆ. ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್ ಹಾಗೂ ವಿಜಯ್ ಕುಮಾರ್ ವೈಶಾಖ್ ಎದುರಾಳಿ ತಂಡಕ್ಕೆ ಬೇಕಾಬಿಟ್ಟಿ ರನ್ ಬಿಟ್ಟುಕೊಡುತ್ತಿದ್ದಾರೆ. ಇಲ್ಲೂ ತಂಡ ಸಾಕಷ್ಟು ಸುಧಾರಣೆ ಕಂಡುಕೊಳ್ಳಬೇಕಾಗಿದೆ.