Site icon Vistara News

Ravi Shastri: ರವಿಶಾಸ್ತ್ರಿಯ ಹಾಟ್‌ ಫೋಟೋ ಕಂಡು ದಂಗಾದ ನೆಟ್ಟಿಗರು; ಮೀಮ್ಸ್​ಗಳ ಮೂಲಕ ಟ್ರೋಲ್​

Ravi Shastri

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ ಮುಖ್ಯ ಕೋಚ್​ ರವಿಶಾಸ್ತ್ರಿ(Ravi Shastri) ಅವರು ಸದ್ಯ ಐಪಿಎಲ್(IPL 2024)​ ಕಾಮೆಂಟ್ರಿಯಲ್ಲಿ ಕಾರ್ಯ ನಿರತರಾಗಿದ್ದಾರೆ. ಈ ಮಧ್ಯೆ ಅವರು ತಮ್ಮ ಹೊಸ ಸ್ಟೈಲ್​ನ ಫೋಟೊವೊಂದನ್ನು ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು, ನಾನು ಹಾಟೀ​, ನಾನು ನಾಟೀ, ನಾನು ಸಿಕ್ಸ್ಟೀ… ಎಂದು ಬರೆದುಕೊಂಡಿದ್ದಾರೆ. ಈ ಹಾಟ್‌ ಫೋಟೋಗೆ ನೆಟ್ಟಿಗರು ಹಲವು ಮೀಮ್ಸ್​ಗಳ ಮೂಲಕ ಕಮೆಂಟ್​ ಮಾಡಿದ್ದಾರೆ.

ಇದೇ ವರ್ಷ ರವಿಶಾಸ್ತ್ರಿ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದರು. 61 ವರ್ಷದ ರವಿಶಾಸ್ತ್ರಿ 80 ಟೆಸ್ಟ್‌ ಹಾಗೂ 150 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಕಮೆಂಟ್ರಿ ಮೂಲಕವೂ ಜನಪ್ರಿಯತೆ ಗಳಿಸಿದ್ದಾರೆ. ಎರಡು ಸಲ ಟೀಮ್‌ ಇಂಡಿಯಾದ ಕೋಚ್‌ ಆಗಿ ಕರ್ತವ್ಯ ನಿಭಾಯಿಸಿದ್ದಾರೆ. 2014- 2016ರ ಆವಧಿಯಲ್ಲಿ ತಂಡದ ನಿರ್ದೇಶಕರಾಗಿದ್ದರು. ಆಸ್ಟ್ರೇಲಿಯದಲ್ಲಿ ಸತತ 2 ಸಲ ಟೆಸ್ಟ್‌ ಸರಣಿ ಜಯಿಸಿದ್ದು ರವಿಶಾಸ್ತ್ರಿ ಅವರ ಯಶಸ್ಸಿಗೆ ಸಾಕ್ಷಿ. ಭಾರತ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್​ ಗೆದ್ದ ತಂಡದ ಸದ್ಯನೂ ಕೂಡ ಆಗಿದ್ದಾರೆ.

ಇದನ್ನೂ ಓದಿ BCCI Awards: ಗಿಲ್​ಗೆ ವರ್ಷದ ಕ್ರಿಕೆಟಿಗ,ರವಿಶಾಸ್ತ್ರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಕಪಿಲ್​ ದೇವ್​ ಸಾರಥ್ಯದಲ್ಲಿ ಭಾರತ 1983ರಲ್ಲಿ ಲಂಡನ್​ನಲ್ಲಿ ನಡೆದ ವಿಶ್ವಕಪ್​ ಫೈನಲ್​ನಲ್ಲಿ ಬಲಿಷ್ಠ ವೆಸ್ಟ್​ ಇಂಡೀಸ್​ ತಂಡವನ್ನು ಮಣಿಸಿ ಕಪ್​ ಗೆದ್ದಿತ್ತು. ಟೂರ್ನಿಯಲ್ಲಿ ರವಿಶಾಸ್ತ್ರಿ ಒಟ್ಟು 4 ವಿಕೆಟ್​ ಮತ್ತು 40 ರನ್​ ಬಾರಿಸಿದ್ದರು. ಏಕದಿನ ಕ್ರಿಕೆಟ್​ನಲ್ಲಿ 3108 ರನ್​, ಟೆಸ್ಟ್​ನಲ್ಲಿ 3830 ರನ್​ ಬಾರಿಸಿದ್ದಾರೆ. ತಮ್ಮ ಕಂಚಿನ ಕಂಠದ ಕಾಮೆಂಟ್ರಿ ಮೂಲಕವೇ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.

ರವಿಶಾಸ್ತ್ರಿ ಅವರ ಈ ಫೋಟೊಗೆ ನೆಟ್ಟಿಗರು 60ರ ಹರೆಯದಲ್ಲೂ ಯಾವ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನೀವು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಆಮೀರ್​ ಖಾನ್​ ರೀತಿ ಕಾಣುತ್ತಿದ್ದೀರಿ ಎಂದು ಕಮೆಂಟ್​ ಮಾಡಿದ್ದಾರೆ.

ಟಿ20 ಕ್ರಿಕೆಟ್​ ಕ್ರೇಜ್​ ಮಧ್ಯೆ ಏಕದಿನ ಕ್ರಿಕೆಟ್​ ಅಳಿವಿನಂಚಿನಲ್ಲಿದ್ದು ಇದನ್ನೂ​ ಹೆಚ್ಚು ಆಕರ್ಷಿಸಲು ಕೆಲ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕೆಲ ತಿಂಗಳ ಹಿಂದೆ ರವಿಶಾಸ್ತ್ರಿ(ravi shastri) ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭವಿಷ್ಯದಲ್ಲಿ ಅದನ್ನು 40 ಓವರ್‌ಗಳ ಆಟಕ್ಕೆ ಇಳಿಸಬೇಕು ಎಂದು ಹೇಳಿದ್ದರು.

“1983ರಲ್ಲಿ ನಾವು ವಿಶ್ವ ಕಪ್ ಗೆದ್ದಾಗ ಅದು 60 ಓವರ್ ಪಂದ್ಯವಾಗಿತ್ತು. ನಂತರ ಪ್ರೇಕ್ಷಕರ ಗಮನ ಕಡಿಮೆಯಾದ ಕಾರಣ ಇದನ್ನೂ 50 ಓವರ್​ಗಳಿಗೆ ಇಳಿಸಲಾಯಿತು. ಇದೀಗ ಟಿ20 ಕ್ರಿಕೆಟ್ ಬಂದ ಬಳಿಕ ಏಕದಿನದ ಕ್ರೇಜ್​ ಜನರಲ್ಲಿ ಕಡಿಮೆಯಾಗಿದೆ. ಹೀಗಾಗಿ ಸಮಯದೊಂದಿಗೆ ಸ್ವರೂಪದ ಬದಲಾವಣೆಯೂ ಮಾಡುವ ಮೂಲಕ ಏಕ ದಿನ ಕ್ರಿಕೆಟ್​ ಹೆಚ್ಚು ಸ್ವಾರಸ್ಯವಾಗಲು ಇದನ್ನೂ 40 ಓವರ್​ಗೆ ಇಳಿಸುವ ಅಗತ್ಯ ಇದೆ” ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದರು.

Exit mobile version