Site icon Vistara News

Virat kohli : ರನ್​ಗಳಿಸಲು ವಿರಾಟ್ ಕೊಹ್ಲಿಗೆ ಹೊಸ ತಂತ್ರ ಹೇಳಿಕೊಟ್ಟ ರವಿ ಶಾಸ್ತ್ರಿ

Ravi Shastri teaches Virat Kohli a new technique to score runs

virat kohli rcb

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli) ಒಂದು ಬಾರಿ ಮೈದಾನಕ್ಕೆ ಇಳಿದ ಮೇಳೆ ನಿಧಾನಗತಿಯಲ್ಲಿ ಆಡಲು ಮುಂದಾಗಲೇಬಾರದು ಎಂಬುದಾಗಿ ಟೀಮ್ ಇಂಡಿಯಾದ ಮಾಜಿ ಕೋಚ್​ ರವಿ ಶಾಸ್ತ್ರಿ ನುಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ ಮಾಜಿ ನಾಯಕ ನಿಧಾನಗತಿಯಲ್ಲಿ ಆಡಿರುವ ಹಿನ್ನೆಲೆಯಲ್ಲಿ ಟೀಕೆಗಳು ವ್ಯಕ್ತಗೊಂಡಿದ್ದರು. ಹೀಗಾಗಿ ಆರ್​ಸಿಬಿ ದಾಂಡಿಗನಿಗೆ ಮಾಜಿ ಕೋಚ್ ಸಲಹೆಗಳನ್ನು ಕೊಟ್ಟಿದ್ದಾರೆ.

ದೆಹಲಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯ ಬ್ಯಾಟಿಂಗ್ ವೈಖರಿ ಟೀಕೆಗೆ ಒಳಗಾಗಿತ್ತು. ಅವರು ನಿಧಾನಕ್ಕೆ ಆಡುವುದಕ್ಕೂ ತಂಡ ಸೋಲುವುದಕ್ಕೂ ಟೀಕಾಕಾರರಿಗೆ ಅದೊಂದು ಅಸ್ತ್ರವಾಗಿ ಮಾರ್ಪಟ್ಟಿದೆ. ಯಾಕೆಂದರೆ ಅಂದಿನ ಪಂದ್ಯದಲ್ಲಿ ವಿರಾಟ್​ 46 ಎಸೆತಗಳಲ್ಲಿ 55 ರನ್ ಮಾತ್ರ ಗಳಿಸಿದ್ದರು. ಈ ಮೂಲಕ ಆರ್​ಸಿಬಿಯ ಮೊತ್ತ ಕಡಿಮೆಯಾಯಿತು ಎಂದು ಹೇಳಲಾಗಿದೆ. ಹೀಗಾಗಿ ವಿರಾಟ್​ ಯಾರಿಗೂ ಹೆದರದೇ ಮುನ್ನುಗ್ಗಬೇಕು ಎಂದು ಶಾಸ್ತ್ತಿ ಹೇಳಿದ್ದಾರೆ.

“ಒಂದು ಬಾರಿ ನೀವು ಬ್ಯಾಟಿಂಗ್​ ವೇಗವನ್ನು ಪಡೆದುಕೊಂಡರೆ, ನಿಧಾನಗೊಳಿಸಬಾರದು. ಇತರರ ಬಗ್ಗೆ ಚಿಂತಿಸಬೇಡಿ. ಅವರು ತಮ್ಮ ಕೆಲಸವನ್ನು ಮಾಡಲಿ. ನೀವು ನಿಮ್ಮ ಕೆಲಸ ಮಾಡಿ. ಟಿ20 ಪಂದ್ಯದಲ್ಲಿ, ಸಾಕಷ್ಟು ಬ್ಯಾಟ್ಸ್​ಮನ್​​ಗಳ ಅಗತ್ಯವೇ ಇಲ್ಲ. ನೀವು ರನ್​ ಬಾರಿಸುತ್ತಿದ್ದರೆ ಸಾಕು. ಇದಕ್ಕೆ ಪ್ರಮುಖ ಉದಾಹರಣೆ ಫಿಲ್ ಸಾಲ್ಟ್. ಅವರು ಬ್ಯಾಟಿಂಗ್ ಮಾಡಿದ ರೀತಿಯನ್ನು ನೀವು ನೋಡಿದ್ದೀರಿ. ಒಮ್ಮೆ ಅವರು ಮೈದಾನಕ್ಕೆ ಇಳಿದ ನಂತರ ಎಡಬಿಡದೇ ರನ್​ ಗಳಿಸಿದರು ಎಂದು ರವಿ ಶಾಸ್ತ್ರಿ ಕ್ರಿಕ್​ ಇನ್ಫೋಗೆ ಹೇಳಿದ್ದಾರೆ.

ಇದನ್ನೂ ಓದಿ : IPL 2023 : ವೃದ್ಧಿಮಾನ್ ಸಾಹಸಕ್ಕೆ ಶಹಬ್ಬಾಸ್​ ಎಂದ ವಿರಾಟ್​ ಕೊಹ್ಲಿ

ನೀವು ನಿಧಾನವಾಗಿ ಆಡಿದರೆ ಇತರ ಬ್ಯಾಟ್ಸ್​ಮನ್​ಗಳಿಗೆ ಒತ್ತಡ ಹೆಚ್ಚಾಗುತ್ತದೆ. ಅವರ ಒತ್ತಡವನ್ನು ನೀವು ಕಡಿಮೆ ಮಅಡಬೇಕು. ಸಾಲ್ಟ್​ ಚೆನ್ನಾಗಿ ಬ್ಯಾಟ್​ ಬೀಸಿದ್ದರಿಂದ ಮಿಚೆಲ್ ಮಾರ್ಷ್ ಅಥವಾ ರಿಲೀ ರೌಸೊ ಅವರು ಯಾವುದೇ ಒತ್ತಡ ಎದುರಿಸಿಲ್ಲ. ಅಂತೆಯೇ ನೀವು ಕೂಡ ಚೆನ್ನಾಗಿ ಬ್ಯಾಟ್​ ಬೀಸಬೇಕು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ರೋಹಿತ್​ ಬಗ್ಗೆ ಏನಂದರು?

ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನವನ್ನು ಶಾಸ್ತ್ರಿ ಎತ್ತಿ ತೋರಿಸಿದರು. ರೋಹಿತ್​ ಫಾರ್ಮ್ ಕಳೆದುಕೊಂಡಿದ್ದಾರೆ. ಇದು ನಾಯಕನಾಗಿ ಅವರ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ರನ್ ಗಳಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ.

“ನೀವು ರನ್ ಗಳಿಸಲು ಆರಂಭಿಸಿದರೆ ನಾಯಕತ್ವದ ಕೆಲಸವೂ ಕಡಿಮೆಯಾಗುತ್ತದೆ. ಮೈದಾನದಲ್ಲಿನ ವಿಶ್ವಾಸ ಹೆಚ್ಚುತ್ತದೆ. ನೀವು ರನ್ ಗಳಿಸದಿದ್ದಾಗ ಮೈದಾನದಲ್ಲಿ ನಿಮ್ಮ ಉತ್ಸಾಹ ಕಡಿಮೆಯಾಗುತ್ತದೆ ಎಂದು ಶಾಸ್ತ್ರಿ ಹೇಳಿದರು.

ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ರೋಹಿತ್ 18.40ರ ಸರಾಸರಿಯಲ್ಲಿ ಕೇವಲ 184 ರನ್ ಗಳಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೇ 9ರಂದು ಆರ್​​ಸಿಬಿ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯ ಅಂತ್ಯ ಸಮೀಪಿಸುತ್ತಿದ್ದಂತೆ, ಎರಡೂ ತಂಡಗಳು ತಮ್ಮ ಉಳಿದ ಗುಂಪು ಪಂದ್ಯಗಳ ಗೆಲುವುಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಲು ಪ್ರಯತ್ನಿಸಲಿವೆ.

Exit mobile version